Advertisment

ಟೈಲರ್ ಸ್ವಿಫ್ಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ; ಭಾರತದಲ್ಲಿ ಮೊದಲ ಬಾರಿಗೆ ಪ್ರದರ್ಶನ ನೀಡಲಿರುವ ಖ್ಯಾತ ಸಿಂಗರ್

author-image
Gopal Kulkarni
Updated On
ಟೈಲರ್ ಸ್ವಿಫ್ಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ; ಭಾರತದಲ್ಲಿ ಮೊದಲ ಬಾರಿಗೆ ಪ್ರದರ್ಶನ ನೀಡಲಿರುವ ಖ್ಯಾತ ಸಿಂಗರ್
Advertisment
  • ಅಮೆರಿಕಾದ ಖ್ಯಾತ ಗಾಯಕಿ ಟೈಲರ್ ಸ್ವಿಫ್ಟ್ ಅಭಿಮಾನಿಗಳಿಗೆ ಸಂತಸ ಸುದ್ದಿ
  • ಸದ್ಯದಲ್ಲಿಯೇ ಭಾರತದಲ್ಲಿ ಮೊದಲ ಪ್ರದರ್ಶನ ನೀಡಲಿದ್ದಾರೆ ಟೈಲರ್ ಸ್ವಿಫ್ಟ್​
  • ಯಾರ ಪ್ರಿ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಸ್ವಿಫ್ಟ್ ಹಾಡಿ, ಕುಣಿಯಲಿದ್ದಾರೆ ಗೊತ್ತಾ?

ಖ್ಯಾತ ಅಮೆರಿಕಾದ ಸಿಂಗರ್ ಹಾಗೂ ಸಾಂಗ್ ರೈಟರ್​ ಟೈಲರ್​ ಸ್ವಿಫ್ಟ್ ಅಭಿಮಾನಿಗಳಿಗೆ ಒಂದು ಸಂತಸದ ಸುದ್ದಿ ಕಾದಿದೆ. ಇದೇ ಮೊದಲ ಬಾರಿಗೆ ಸ್ವಿಫ್ಟ್ ಭಾರತದಲ್ಲಿ ತಮ್ಮ ಪ್ರದರ್ಶನ ನೀಡಲಿದ್ದಾರೆ ಅದು ಕೂಡ ಅತೀ ಶೀಘ್ರದಲ್ಲಿಯೇ. ಗೌತಮ್ ಅದಾನಿ ಪುತ್ರ ಜೀತ್ ಅದಾನಿ ಅವರ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಟೈಲರ್ ಸ್ವಿಫ್ಟ್ ತಮ್ಮ ಪ್ರದರ್ಶನ ನೀಡಲಿದ್ದಾರೆ.

Advertisment

ಈಗಾಗಲೇ ಟೈಲರ್ ಸ್ವಿಫ್ಟ್ ತಂಡ ಅದಾನಿಯವರೊಂದಿಗೆ ಮಾತುಕತೆ ನಡೆಸಿದ್ದು ಜೀತ್ ಅದಾನಿ ಅವರ ಪ್ರಿ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುವುದು ನಿಶ್ಚಿತವಾಗಿದೆ. ಆದರೆ ಈ ಬಗ್ಗೆ ಟೈಲರ್ ಇನ್ನೂ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲವಾದರೂ. ಮಾತುಕತೆಗಳನ್ನು ಈಗಲೂ ಕೂಡ ಜಾರಿಯಲ್ಲಿದ್ದು. ಜೀತ್ ಅದಾನಿಯ ಹಾಗೂ ದಿವಾ ಶಾಹ ಪ್ರಿ ವೆಡ್ಡಿಂಗ್​​ ಟೈಲರ್​ ಸ್ವಿಫ್ಟ್​ ಭಾರತದಲ್ಲಿ ತಮ್ಮ ಮೊದಲ ಪ್ರದರ್ಶನ ನೀಡುವ ವೇದಿಕೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:ಸೈಫ್ ಜೀವ ಉಳಿಸಿದ ಆಟೋ ಡ್ರೈವರ್​​ಗೆ ಭರ್ಜರಿ ಬಹುಮಾನ.. ಸಿಕ್ಕ ಹಣ ಎಷ್ಟು..?

ಗೌತಮ್ ಅದಾನಿ ಪಪುತ್ರ ಜೀತ್ ಅದಾನಿ ದಿವಾ ಶಾಹ್ ಅವರ ನಿಶ್ಚಿತಾರ್ಥ ಮಾರ್ಚ್​​ 2023 ರಂದು ನಡೆದಿತ್ತು. ಗುಜರಾತ್​ನ ಅಹ್ಮದಾಬಾದ್​ನಲ್ಲಿ ಅತ್ಯಂತ ಸರಳವಾಗಿ ಈ ಜೋಡಿ ಉಂಗುರವನ್ನು ಬದಲಾಯಿಸಿಕೊಂಡಿತ್ತು. ವರ್ಷದ ಬಳಿಕ ಈ ಜೋಡಿ ಈಗ ಹಸೆಮಣೆ ಏರಲಿದೆ.

Advertisment

ಇದೇ ಸಮಯದಲ್ಲಿ ಟೈಲರ್ ಸ್ವಿಫ್ಟ್​ ಮದುವೆಯ ಸಮಾರಂಭದ ಮುನ್ನ ತಮ್ಮ ಪ್ರದರ್ಶನವನ್ನು ನೀಡಲು ಭಾರತಕ್ಕೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಟ್ರೈಲರ್ ಸ್ವಿಫ್ಟ್​ಗೆ ಭಾರತದಲ್ಲಿ ವಿಪರೀತ ಅಭಿಮಾನಿಗಳಿದ್ದಾರೆ. ಅವರ ಹಲವು ಇಂಟರ್​ವ್ಯೂವ್​ಗಳಲ್ಲಿಯೂ ಕೂಡ ಭಾರತದ ಅಭಿಮಾನಿಗಳ ಬಗ್ಗೆ ಹೇಳಿದ್ದಾರೆ. ಬಾಲಿವುಡ್​ ಮೂವಿಗಳಲ್ಲಿಯೂ ತಮ್ಮ ಮ್ಯೂಸಿಕ್ ಮತ್ತು ಡಾನ್ಸ್ ಮಾಡಬೇಕು ಎಂದು ಕೂಡ ಆಶಯ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment