Advertisment

VIDEO: ಹೆಂಡತಿ ಕಾಟ; ಕಿರುಕುಳಕ್ಕೆ ಬೇಸತ್ತು ಲೈವ್​ನಲ್ಲೇ ಪ್ರಾಣ ಬಿಟ್ಟ IT ಕಂಪನಿ ಮ್ಯಾನೇಜರ್

author-image
Ganesh Nachikethu
Updated On
VIDEO: ಹೆಂಡತಿ ಕಾಟ; ಕಿರುಕುಳಕ್ಕೆ ಬೇಸತ್ತು ಲೈವ್​ನಲ್ಲೇ ಪ್ರಾಣ ಬಿಟ್ಟ IT ಕಂಪನಿ ಮ್ಯಾನೇಜರ್
Advertisment
  • ಉತ್ತರ ಪ್ರದೇಶದಲ್ಲಿ ಅತುಲ್ ಸುಭಾಷ್ ಮಾದರಿ ಪ್ರಕರಣ
  • ಪತ್ನಿ ಕಾಟದಿಂದ ಬೇಸತ್ತು ಐಟಿ ಕಂಪನಿ ಮ್ಯಾನೇಜರ್ ಸಾವು
  • ಲೈವ್​ ಬಂದು ಸೂಸೈಡ್​ ಮಾಡಿಕೊಂಡ ಐಟಿ ಕಂಪನಿ ಮ್ಯಾನೇಜರ್

ಆಗ್ರಾ: ಬೆಂಗಳೂರಿನ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ನೆನಪಿಸೋ ಮತ್ತೊಂದು ಕೇಸ್​ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಐಟಿ ಕಂಪನಿ ಮ್ಯಾನೇಜರ್ ಮಾನವ್ ಶರ್ಮಾ ಎಂಬಾತ ಪತ್ನಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನವ್​​ ಶರ್ಮಾ ಲೈವ್​ ಬಂದು ಸೂಸೈಡ್​ ಮಾಡಿಕೊಂಡಿದ್ದು, ಇದು ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ.

Advertisment

ಇನ್ನು, ಆಗ್ರಾದ ಡಿಫೆನ್ಸ್​ ಕಾಲೊನಿಯಲ್ಲಿ ದುರ್ಘಟನೆ ನಡೆದಿದೆ. ಮಾನವ್ ಶರ್ಮಾ ಟಿಸಿಎಸ್​​ ಐಟಿ ಕಂಪನಿಯಲ್ಲಿ ಮ್ಯಾನೇಜರ್​ ಆಗಿದ್ದರು. ಮೂರು ದಿನಗಳ ಹಿಂದೆ ಫೆ. 24ರಂದು ಮಾನವ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯೋ ಮುನ್ನ ಒಂದು ವಿಡಿಯೋ ಮಾಡಿದ್ದು, ತನ್ನೀ ನಿರ್ಧಾರಕ್ಕೆ ಪತ್ನಿಯೇ ಕಾರಣ ಎಂದಿದ್ದಾರೆ.

ಮಾನವ್​ ಶರ್ಮಾ ಏನಂದ್ರು?

ನಾನು ಸಾಯಲು ನನ್ನ ಹೆಂಡತಿಯೇ ಕಾರಣ. ಅಪ್ಪಾ, ಅಮ್ಮ ನನ್ನನ್ನು ಕ್ಷಮಿಸಿ. ನನ್ನ ತಂದೆ ತಾಯಿಗೆ ಯಾರು ತೊಂದರೆ ಕೊಡಬೇಡಿ. ನನ್ನ ಹೆಂಡತಿಯ ಕಿರುಕುಳದಿಂದ ಬೇಸತ್ತು ಹೋಗಿದ್ದೇನೆ. ಸಾವು ಬಿಟ್ಟು ಬೇರೆ ಯಾವ ದಾರಿ ಇಲ್ಲ. ಪುರುಷರಿಗಾಗಿ ದೇಶದಲ್ಲಿ ಯಾವುದೇ ಕಾನೂನಿಲ್ಲ. ಇನ್ನಾದ್ರೂ ಪುರುಷರನ್ನು ರಕ್ಷಿಸಲು ಕಾನೂನು ರಚಿಸಿ ಎನ್ನುತ್ತಾ ಲೈವ್​​ನಲ್ಲಿ ತನ್ನ ನೋವು ತೋಡಿಕೊಂಡರು ಮಾನವ್​ ಶರ್ಮಾ.

Advertisment


">February 28, 2025

ದೂರಿನಲ್ಲೇನಿದೆ?

ಕಳೆದ ವರ್ಷವಷ್ಟೇ ಮಾನವ್​ಗೆ ಮದುವೆಯಾಗಿತ್ತು. ಕೆಲಸದ ಕಾರಣ ಮಾನವ್​ ತನ್ನ ಹೆಂಡತಿಯನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದ. ಇಬ್ಬರ ಮಧ್ಯೆ ಪ್ರತಿದಿನ ಜಗಳ ನಡೆಯುತ್ತಿತ್ತು. ತನ್ನ ಹಳೆಯ ಪ್ರೇಮಿ ಜೊತೆಗೆ ಹೆಂಡತಿ ಅಕ್ರಮ ಸಂಬಂಧ ಹೊಂದಿದ್ದಳು. ಇದರಿಂದ ಬೇಸತ್ತ ಮಾನವ್​​​ ನೇಣಿಗೆ ಶರಣಾಗಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.

ಇದನ್ನೂ ಓದಿ:BREAKING: ಕರ್ನಾಟಕ ಬಂದ್.. ವಾಟಾಳ್ ನಾಗರಾಜ್ ಮಹತ್ವದ ಘೋಷಣೆ; ಯಾವಾಗ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment