/newsfirstlive-kannada/media/post_attachments/wp-content/uploads/2025/04/Bitan-Adhikary.jpg)
ದೇಶದ ಗಡಿಯಲ್ಲಿ ಉಗ್ರರ ಕ್ರೌರ್ಯಕ್ಕೆ ಸೈನಿಕರು ಬಲಿಯಾಗುತ್ತಲೇ ಇರ್ತಾರೆ. ಈಗ ಆ ಕ್ರೌರ್ಯಕ್ಕೆ ಸಾಮಾನ್ಯ ಜನರೂ ಜೀವ ಕಳೆದುಕೊಳ್ಳುತ್ತಿದ್ದಾರೆ. ಭಾರತದ ಸ್ವರ್ಗ ಎಂದು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋದವರು ಪಹಲ್ಗಾಮ್ ದಾಳಿಗೆ ಪ್ರಾಣಬಿಟ್ಟಿದ್ದಾರೆ. ಫ್ಲೋರಿಡಾದಲ್ಲಿ ಕೆಲಸ ಮಾಡುತ್ತಿದ್ದ ಟಿಸಿಎಸ್ ಟೆಕ್ಕಿ (TCS techie), ಬಿಟಾನ್ ಅಧಿಕಾರಿ ಒಬ್ಬರು ಉಸಿರು ಚೆಲ್ಲಿದ್ದಾರೆ.
ಇದನ್ನೂ ಓದಿ: ಆಕ್ಸಿಜನ್ ಸಪೋರ್ಟ್ನಲ್ಲಿ ಭರತ್ ತಾಯಿ, ಮಗನ ದುರಂತ ಅಂತ್ಯದ ಬಗ್ಗೆ ತಾಯಿಗೆ ಇನ್ನೂ ಗೊತ್ತಿಲ್ಲ
ಬಿಟಾನ್ ಅಧಿಕಾರಿ (Bitan Adhikary) ಪಶ್ಚಿಮ ಬಂಗಾಳದ ಮೂಲದವರು. ಅಮೆರಿಕಾದಲ್ಲಿ ನೆಲೆಸಿದ್ದ ಇವರು ಕಳೆದ ಎರಡು ವರ್ಷಗಳಿಂದ ಪತ್ನಿ ಸೋಹಿನಿ ಹಾಗೂ ಮೂರು ವರ್ಷದ ಮಗನೊಂದಿಗೆ ಕೋಲ್ಕತ್ತಾದಲ್ಲಿದ್ದರು. ಬೇಸಿಗೆ ರಜೆ ಕಾರಣ ಕಳೆದ ವಾರ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದರು. ಪಹಲ್ಗಾಮ್ ಹತ್ತಿರದ ಕಣಿವೆಯಲ್ಲಿ ನಡೆದ ಘೋರ ದಾಳಿಯಲ್ಲಿ ಬಿಟಾನ್ ಪ್ರಾಣ ಕಳೆದುಕೊಂಡಿದ್ದಾರೆ.
ಸದ್ಯಕ್ಕೆ ಅವರ ಪತ್ನಿ ಮತ್ತು ಮಗ ಸೇಫಾಗಿದ್ದಾರೆ. ಅವರ ರಕ್ಷಣೆಗೆ ಸರ್ಕಾರ ಧಾವಿಸಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಟಾನ್ ಪತ್ನಿಯ ಜೊತೆ ಮಾತನಾಡಿ ಸಾಂತ್ವನ ತಿಳಿಸಿದ್ದಾರೆ. ಮಗನ ಸಾವಿನ ಸುದ್ದಿ ಕೇಳಿ ಕಂಗಾಲಾಗಿದ್ದ ಬಿಟಾನ್ ಅವರ ವೃದ್ಧ ತಂದೆ.. ಅವನು ನಮ್ಮನ್ನೂ ಪ್ರವಾಸಕ್ಕೆ ಕರೆದಿದ್ದ, ಆದರೇ ನಾನೇ ಸೊಸೆಯೊಂದಿಗೆ ಹೋಗು ಅಂತ ಹೇಳಿ ಕಳಿಸಿದ್ದೆ.. ಅವನಿಗೆ ಹೀಗಾಗುತ್ತೆ ಅಂತ ಊಹಿಸಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಈತನೇ ನೋಡಿ.. ಪಹಲ್ಗಾಮ್ ಪೈಶಾಚಿಕ ಕೃತ್ಯದ ಹಿಂದಿನ ಮಾಸ್ಟರ್ ಮೈಂಡ್ ಸೈಫುಲ್ಲಾ ಖಾಲಿದ್..!
ಕಾಶ್ಮೀರದ ಪ್ರವಾಸ ಮುಗಿಸಿಕೊಂಡು ವಾಪಸ್ ಬಂದ್ಮೇಲೆ ನಾವು ಇನ್ನೊಂದು ರಜೆ ಟ್ರಿಪ್ ಮಾಡೋಣ ಅಂತ ಸಹೋದರನಿಗೆ ಹೇಳಿದ್ದ ಬಿಟಾನ್, ಈಗ ನಿರ್ಜೀವವಾಗಿ ಮನೆ ಸೇರಲಿದ್ದಾರೆ. ಫೋನ್ನಲ್ಲಿ ಟ್ರಿಪ್ ಬಗ್ಗೆ ಕೊನೆದಾಗಿ ಮಾತನಾಡಿದ್ದ ಸಹೋದರ.. ಬಿಟಾನ್ ಜೊತೆ ಇದೇ ಕೊನೆ ಮಾತುಕತೆ ಆಗುತ್ತೆ ಎಂದು ಅಂದುಕೊಂಡಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಬಂಗಾಳದ ಸರ್ಕಾರ ಬಿಟಾನ್ ಅಧಿಕಾರಿ ಅವರ ಮೃತದೇಹ ಕೋಲ್ಕತ್ತಾದ ತರಲು ಎಲ್ಲಾ ತಯಾರಿ ನಡೆಸ್ತಿದೆ. ಬಿಟಾನ್ ಪತ್ನಿ ಸೋಹಿನಿ ಮತ್ತು ಮಗನನ್ನು ಸುರಕ್ಷಿತವಾಗಿ ಕರೆತರಲಾಗುತ್ತಿದೆ.
ಇದನ್ನೂ ಓದಿ: ಪತ್ನಿ, ಅಪ್ಪ-ಅಮ್ಮನ ಜೊತೆ ಪಹಲ್ಗಾಮ್ಗೆ ಹೋಗಿದ್ದ ಗಣೇಶ್ ಕಾರಂತ್.. ವಿಡಿಯೋದಲ್ಲಿ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ