/newsfirstlive-kannada/media/post_attachments/wp-content/uploads/2024/08/tea-selleer.jpg)
ಮುಂಬೈ: ದುಡಿಯುವ ಕೈ ಸದಾ ದುಡಿಯುವುದಕ್ಕೆ ಸಿದ್ಧವಾಗಿದ್ದರೆ ಆ ವ್ಯಕ್ತಿಯ ಜೇಬಿಗೆ ಸದಾ ಲಕ್ಷ್ಮೀ ಕೃಪಾಕಟಾಕ್ಷ ಇದ್ದೇ ಇರುತ್ತದೆ. ಅದಕ್ಕೆ ನಿದರ್ಶನವಾಗಿ ನಮಗೆ ಸಾಕಷ್ಟು ಜನ ಇದ್ದಾರೆ. ಒಂದೇ ಬಗೆಯ ವ್ಯಾಪಾರವನ್ನು ನೂರಾರು ಜನರು ಮಾಡುತ್ತಿರೋದನ್ನ ನಾವು ನೋಡುತ್ತಲೇ ಇರುತ್ತೇವೆ. ಆದ್ರೆ ಯಾರು ತಮ್ಮ ವ್ಯಾಪಾರದಲ್ಲಿ ಒಂದು ವಿಶೇಷ ಸೇವೆಯನ್ನೋ ಅಥವಾ ವಿಶೇಷ ರೀತಿಯನ್ನೋ ಅಳವಡಿಸಿಕೊಂಡಿರುತ್ತಾರೋ ಅವರಲ್ಲಿ ಗಿರಾಕಿಗಳು ನುಗ್ಗಿಕೊಂಡು ಬರುತ್ತಾರೆ. ಇದಕ್ಕೆ ಅನೇಕ ಸಣ್ಣ ಸಣ್ಣ ವ್ಯಾಪಾರಿಗಳು ಈಗಾಗಲೇ ಸಾಕ್ಷಿಯಾಗಿದ್ದಾರೆ.
ಅಂಥವರ ಸಾಲಿಗೆ ಸೇರುತ್ತಾರೆ ಮಹಾರಾಷ್ಟ್ರದ ಮಹಾದೇವ ನಾನಾ ಮಳಿ ಅನ್ನೋ ತೇರ್ ಗ್ರಾಮದ ಚಹಾ ವ್ಯಾಪಾರಿ ಗಿರಾಕಿಗಳನ್ನು ನಾವು ಹೇಗೆ ತಲುಪುತ್ತೇವೋ ಅದರ ಮೇಲೆ ನಮ್ಮ ವ್ಯಾಪಾರದ ಬುನಾದಿ ನಿಂತಿರುತ್ತವೆ. ಈ ತೇರ್ ಗ್ರಾಮದ ಮಹಾದೇವ್ ಅವರು ಇರೋದು ಅತ್ಯಂತ ಸಣ್ಣ ಹಳ್ಳಿಯಲ್ಲಿ ಆದರೂ ಕೂಡ ದಿನಕ್ಕೆ 1500 ರಿಂದ 2000 ಕಪ್ ಟೀ ಮಾರುತ್ತಾರೆ ಅದು ಕೇವಲ 5 ರೂಪಾಯಿಗೆ ಒಂದು ಕಪ್ ಟೀ. ಅದರಲ್ಲಿ ನಿತ್ಯ ಅವರು ಗಳಿಸುವುದು 7 ಸಾವಿರ ರೂಪಾಯಿಯಿಂದ ಹಿಡಿದು 10 ಸಾವಿರ ರೂಪಾಯಿವರೆಗು.
ಇದನ್ನೂ ಓದಿ: ಮದ್ವೆ ಆದ ಮೇಲೆ ಮಾಜಿ ಪ್ರಿಯತಮನೊಂದಿಗೆ ಪ್ರೀತಿ, ಪ್ರೇಮ, ಪ್ರಣಯ.. ವಿಷಯ ತಿಳಿದ ಗಂಡ ಮಾಡಿದ್ದೇನು?
ಪುಟ್ಟ ಟೀ ಅಂಗಡಿ ಇಟ್ಟುಕೊಂಡಿರುವ ಈ ಮಹಾದೇವ್ ಅವರು, ಪಕ್ಕದಲ್ಲಿಯೇ 3 ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಗ್ರಾಮಗಳಿಗೆ ತಮ್ಮ ಟೀ ಸರ್ವಿಸ್ ಕೊಡತ್ತಾರೆ. ಇವರ ವ್ಯಾಪಾರದ ಪ್ರಮುಖ ಅಂಶ ಅಂದ್ರೆ ಇವರು ಫೋನ್ ಕಾಲ್ ಮೂಲಕ ಟೀ ಆರ್ಡರ್ ಪಡೆದು ತಪ್ಪದೇ ಆ ಸಮಯಕ್ಕೆ ಟೀ ತಲುಪುವಂತೆ ನೋಡಿಕೊಳ್ಳುತ್ತಾರೆ. ಚಳಿ ಮಳೆ ಬೇಸಿಗೆ ಏನೇ ಇರಲಿ, ಟೀ ತಲುಪಬೇಕಾದ ಸಮಯಕ್ಕೆ ತಲುಪುತ್ತೆ, ಅವರ ಟೈಮಿಂಗ್ ಮತ್ತು ಟೇಸ್ಟ್ ಅವರ ವ್ಯಾಪರದ ದೊಡ್ಡ ಬಲ. ದಿನಕ್ಕೆ 50 ರಿಂದ 60 ಲೀಟರ್ ಹಾಲು ಇವರ ಟೀಗೆ ಖರ್ಚಾಗುತ್ತದೆ ಅಂದ್ರೆ ಯೋಚನೆ ಮಾಡಿ ಅವರ ಚಹಾದ ಜನಪ್ರಿಯತೆ ಎಷ್ಟಿರಬಹುದು ಎಂದು. ಮಹಾದೇವ್ ಅವರ ಪತ್ನಿ ಹಾಗೂ ಇಬ್ಬರೂ ಮಕ್ಕಳು ಇದೇ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದು, ಸಣ್ಣ ಊರಾದರೂ ತಿಂಗಳಿಗೆ ಮೂರು ಲಕ್ಷ ರೂಪಾಯಿವರೆಗೆ ಅವರ ಗಳಿಕೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ