newsfirstkannada.com

ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜೊತೆಗೆ ಜೀವನದ ಪಾಠ ಕಲಿಸಿ; ನ್ಯೂಸ್​​ಫಸ್ಟ್ ಎಂಡಿ ಹಾಗೂ ಸಿಇಒ ಎಸ್ ರವಿಕುಮಾರ್

Share :

Published February 18, 2024 at 7:00am

Update February 18, 2024 at 7:04am

  ವಿವೇಕಾ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ

  ಮಕ್ಕಳಿಗೆ ಮೊಬೈಲ್ ಕೊಡಬೇಡಿ, ಬದಲಿಗೆ ಶಿಕ್ಷಣ ನೀಡಿ

  ವಿದ್ಯಾರ್ಥಿಗಳಿಗೆ ಶಿಕ್ಷಣದ ಮಾರ್ಗದರ್ಶನ ಕೊಟ್ಟ ನ್ಯೂಸ್​​ಫಸ್ಟ್​ ಸಿಇಒ

ಎಲ್ಲೆಲ್ಲೂ ಮಕ್ಕಳದ್ದೇ ಕಲರವ. ತಮ್ಮ ಸರತಿ ಯಾವಾಗ ಬರುತ್ತೆ ಅಂತ ಪ್ರತಿಭಾ ಪ್ರದರ್ಶನಕ್ಕೆ ಕೆಲವರು ಕಾಯ್ತಿದ್ರೆ ಮತ್ತು ಹಲವರು ಹಾಡು, ನೃತ್ಯ ಮಾಡುತ್ತಾ ಮನರಂಜನೆ. ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಮಂಡ್ಯದ ಹನಕೆರೆ ಗ್ರಾಮದಲ್ಲಿರುವ ವಿವೇಕಾ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವದ ಸಂಭ್ರಮದಲ್ಲಿ.

ಮಾಜಿ ಶಾಸಕ ಎಂ.ಶ್ರೀನಿವಾಸ್ ನೇತೃತ್ವದ ಶಿಕ್ಷಣ ಸಂಸ್ಥೆಗಳ ಅದ್ದೂರಿ ವಾರ್ಷಿಕೋತ್ಸವ ಜರುಗಿದ್ದು, ದೀಪ ಬೆಳಗುವ ಮೂಲಕ ವಾರ್ಷಿಕೋತ್ಸವಕ್ಕೆ ಶಾಸಕ ಗಣಿಗ ರವಿಕುಮಾರ್ ಚಾಲನೆ ಕೊಟ್ರು. 40 ವರ್ಷಗಳ ಹಿಂದೆ ಶಾಲೆ ಶುರುವಾಗಿ ಇಂದು ಯಶಸ್ವಿಯಾಗಿ ಶೇ. 100 ರಷ್ಟು ಫಲಿತಾಂಶ ಹೊಂದಿರುವ ಪ್ರತಿಷ್ಠಿತ ಎಂ.ಎಸ್. ಇಂಟರ್​ನ್ಯಾಷನಲ್ ಶಾಲೆ ಕುರಿತ ಕಿರು ಚಿತ್ರ ಪ್ರದರ್ಶನ ಮಾಡಲಾಯ್ತು. ಕಾರ್ಯಕ್ರಮದಲ್ಲಿ ವಿವೇಕಾ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ನ್ಯೂಸ್ ಫಸ್ಟ್ ಎಂಡಿ ಹಾಗೂ ಸಿಇಓ ಎಸ್. ರವಿಕುಮಾರ್, ವಿವೇಕ ವಿದ್ಯಾಸಂಸ್ಥೆ ಕಾರ್ಯಾಧ್ಯಕ್ಷ ಹೆಚ್.ಎನ್.ಯೋಗೇಶ್, ಚಲನಚಿತ್ರ ನಿರ್ದೇಶಕ ಪ್ರಶಾಂತ್ ರಾಜ್, ಗರುಡಾಮಾಲ್ ಸಿಇಓ ಎಂ.ಆರ್.ನಂದೀಶ್, ಬಿಡಿಎ ಎಸ್​​ಪಿ ನಂಜುಂಡೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದರ ಜೊತೆ ವಿಶೇಷ ಸನ್ಮಾತರಾಗಿ ಆಗಮಿಸಿದ್ದ ಮೈಂಡ್ ಬ್ಲೂ ನಿರ್ದೇಶಕರಾದ ಸೆಂಥಿಲ್ ಕುಮಾರ್ ಅವರನ್ನ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯ್ತು.

ಎಂ.ಶ್ರೀನಿವಾಸ್, ಮಾಜಿ ಶಾಸಕ, ನ್ಯೂಸ್​​ಫಸ್ಟ್ ಕನ್ನಡ ಸುದ್ದಿವಾಹಿನಿಯ ಎಂಡಿ ಹಾಗೂ ಸಿಇಒ ಎಸ್ ರವಿಕುಮಾರ್, 6. ಜಯಪ್ರಕಾಶ್ ಗೌಡ, ಕರ್ನಾಟಕ ಸಂಘ ಅಧ್ಯಕ್ಷ

ಇನ್ನು ಈ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಶರವೇಗದಲ್ಲಿ ಮುನ್ನುಗ್ಗುತ್ತಿರುವ ನ್ಯೂಸ್​​ಫಸ್ಟ್ ಕನ್ನಡ ಸುದ್ದಿವಾಹಿನಿಯ ಎಂಡಿ ಹಾಗೂ ಸಿಇಒ ಎಸ್ ರವಿಕುಮಾರ್ ಮಾತನಾಡಿ, ಹನಕೆರೆಯಲ್ಲಿ ಶಾಲೆ ಇಷ್ಟರ ಮಟ್ಟಿಗೆ ಇದೆ ಅಂತ ಗೊತ್ತಿರಲಿಲ್ಲ. ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜೊತೆಗೆ ಜೀವನದ ಪಾಠ ಕಲಿಸಿ. ಮಕ್ಕಳಿಗೆ ಮೊಬೈಲ್ ಕೊಡಬೇಡಿ, ಬದಲಿಗೆ ಶಿಕ್ಷಣ ನೀಡಿ ಅಂತಾ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಾರ್ಗದರ್ಶನ ಕೊಟ್ಟರು.

ಒಟ್ಟಾರೆ, ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯನ್ನು ಮಾಡಲಾಯ್ತು. ಪೋಷಕರು ಸಹ ಭಾಗಿಯಾಗಿ ಸಂತಸ ಗೊಂಡರು. ಹಳ್ಳಿ ಆದರೂ ಮಕ್ಕಳಿಗೆ ಒಳ್ಳೆ ವಿದ್ಯಾಭ್ಯಾಸ ಕೊಡಿಸುವ ನಿಟ್ಟಿನಲ್ಲಿ ವಿವೇಕ ಶಿಕ್ಷಣ ಸಂಸ್ಥೆ ಸಲ್ಲಿಸುತ್ತಿರುವ ಸೇವೆ ನಿಜಕ್ಕೂ ಶ್ಲಾಘನೀಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜೊತೆಗೆ ಜೀವನದ ಪಾಠ ಕಲಿಸಿ; ನ್ಯೂಸ್​​ಫಸ್ಟ್ ಎಂಡಿ ಹಾಗೂ ಸಿಇಒ ಎಸ್ ರವಿಕುಮಾರ್

https://newsfirstlive.com/wp-content/uploads/2024/02/Ravi-kumar.jpg

Load More