Advertisment

ಟೀಚರ್ ಆಗೋ ಅಭ್ಯರ್ಥಿಗಳಿಗೆ ಗುಡ್​ ನ್ಯೂಸ್.. ಶಿಕ್ಷಕ ಹುದ್ದೆ ನೇಮಕಾತಿ ಬಗ್ಗೆ ಸಚಿವರು ಏನಂದ್ರು?

author-image
Bheemappa
Updated On
ಟೀಚರ್ ಆಗೋ ಅಭ್ಯರ್ಥಿಗಳಿಗೆ ಗುಡ್​ ನ್ಯೂಸ್.. ಶಿಕ್ಷಕ ಹುದ್ದೆ ನೇಮಕಾತಿ ಬಗ್ಗೆ ಸಚಿವರು ಏನಂದ್ರು?
Advertisment
  • ಕರ್ನಾಟಕದಲ್ಲಿ ಎಷ್ಟು ಸಾವಿರ ಶಿಕ್ಷಕರ ಕೊರತೆ ಇದೆ ಗೊತ್ತಾ?
  • ಶಾಲಾ ಶಿಕ್ಷಣ, ಸಾಕ್ಷರತಾ ಇಲಾಖೆ ವತಿಯಿಂದ ಕಾರ್ಯಕ್ರಮ
  • ಕರ್ನಾಟಕ ಪಬ್ಲಿಕ್ ಶಾಲೆಗಳನ್ನ ಇನ್ನು ಆರಂಭಿಸಲಾಗುವುದು

ಬೆಂಗಳೂರು: ಶೀಘ್ರದಲ್ಲೇ 5 ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.

Advertisment

ಇದನ್ನೂ ಓದಿ: ಬ್ಯಾಂಕ್​ನಲ್ಲಿ ಉದ್ಯೋಗ ಹುಡುಕುವವರಿಗೆ ಗುಡ್ ನ್ಯೂಸ್​.. ಕರ್ನಾಟಕದಲ್ಲೂ ಪೋಸ್ಟ್​ಗಳು ಖಾಲಿ ಖಾಲಿ, ಅಪ್ಲೇ ಮಾಡಿ

ವಿಧಾನಸೌಧದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಆಯೋಜಿಸಿದ್ದ CSR EDU CONCLAVE -2024 ಕನಸುಗಳನ್ನ ಪೋಷಿಸೋಣ, ಭವಿಷ್ಯಗಳನ್ನು ರೂಪಿಸೋಣ ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 56 ಸಾವಿರ ಶಿಕ್ಷಕರ ಕೊರತೆ ಇದೆ. ಹೀಗಾಗಿ 45 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. 12,500 ಶಿಕ್ಷಕರ ನೇಮಕಾತಿ ಆಗುತ್ತಿದೆ. ಈ ಎಲ್ಲದ ನಡುವೆ ಶೀಘ್ರದಲ್ಲೇ 5 ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಸಾಹಿತ್ಯ ಅಕಾಡೆಮಿಗೆ ನೇರ ನೇಮಕಾತಿ.. ಯಾವ್ಯಾವ ಹುದ್ದೆಗೆ ಎಷ್ಟೆಷ್ಟು ಸಂಬಳ..?

Advertisment

publive-image

ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಸಿಲಿಕಾನ್ ಸಿಟಿ ಕಡೆ ಮುಖ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಲು ಹಳ್ಳಿಯಲ್ಲೇ ಸಿಎಸ್‌ಆರ್‌ ನಿಧಿ ಮೂಲಕ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಒಳ್ಳೆಯ ಮೂಲಸೌಕರ್ಯ ಒದಗಿಸಲಾಗುವುದು. ಈಗಾಗಲೇ ಆರಂಭಿಸಿರುವ 2,000 ಕರ್ನಾಟಕ ಪಬ್ಲಿಕ್ ಶಾಲೆಗಳ ಜೊತೆಗೆ ಇನ್ನೂ 500 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಆರಂಭಿಸಲಾಗುವುದು. ಕನ್ನಡ ಮಾಧ್ಯಮ ಶಾಲೆಗಳ ಜೊತೆ ಇಂಗ್ಲಿಷ್ ಮೀಡಿಯಂ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗುತ್ತದೆ ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಆಯುಕ್ತರಾದ ಬಿ.ಬಿ ಕಾವೇರಿ ಸೇರಿದಂತೆ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment