ಸಾಲ ತೀರಿಸಲು ಸರ್ಕಾರಿ ಶಾಲಾ ಶಿಕ್ಷಕನ ಕಿಡ್ನಾಪ್.. 50 ಲಕ್ಷ ರೂಪಾಯಿಗೆ ಡಿಮ್ಯಾಂಡ್

author-image
Bheemappa
Updated On
ಸಾಲ ತೀರಿಸಲು ಸರ್ಕಾರಿ ಶಾಲಾ ಶಿಕ್ಷಕನ ಕಿಡ್ನಾಪ್.. 50 ಲಕ್ಷ ರೂಪಾಯಿಗೆ ಡಿಮ್ಯಾಂಡ್
Advertisment
  • 2.5 ಕೋಟಿ ಮೌಲ್ಯದ ನಾಯಿಯ ಕಥೆ ಹೇಳಿದ್ದ ಕಿರಾತಕ ಗ್ಯಾಂಗ್
  • ಬೈಕ್​​ಗೆ ಕಾರಿನಿಂದ ಅಡ್ಡಗಟ್ಟಿ ಸರ್ಕಾರಿ ಶಾಲಾ ಶಿಕ್ಷಕನ ಅಪಹರಣ
  • ಎಂದಿನಂತೆ ಶಾಲೆಗೆ ಹೋಗ್ತಿದ್ದ ಶಿಕ್ಷಕ ಕಿಡ್ನಾಪ್, ಹಣಕ್ಕೆ ಡಿಮ್ಯಾಂಡ್

ಕಲಬುರಗಿ: ತಾವು ಮಾಡಿದ ಸಾಲ ತೀರಿಸಲು ಸರ್ಕಾರಿ ಶಾಲಾ ಶಿಕ್ಷಕನನ್ನ ಸಿನಿಮೀಯ ರೀತಿಯಲ್ಲಿ ಕಿಡ್ನಾಪ್ ಮಾಡಿ, ರಾಬರಿ ಮಾಡಿದ್ದಲ್ಲದೇ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಂತಹ ಐನಾತಿ ಕಿಲಾಡಿಗಳು ಖಾಕಿ ಬಲೆಗೆ ಬಿದ್ದಿದ್ದಾರೆ.

ಸರ್ಕಾರಿ ಶಾಲಾ ಶಿಕ್ಷಕ, ಎಂದಿನಂತೆ ತನ್ನ ಬೈಕ್ ಮೇಲೆ ಶಾಲೆಗೆ ಹೊರಟಿದ್ದ. ಯಾರೊಂದಿಗೂ ವೈರತ್ವ ಇಲ್ಲದ ವ್ಯಕ್ತಿತ್ವ. ಶಾಂತ ಸ್ವಾಭಾವದನಾಗಿದ್ದ ಶಿಕ್ಷಕ. ಆದರೆ ಬೈಕ್​ನಲ್ಲಿ ಶಾಲೆಗೆ ಹೊರಟಿದ್ದ ಶಿಕ್ಷಕನನ್ನೇ ಕಿರಾತಕ ಗ್ಯಾಂಗ್ ಕಿಡ್ನಾಪ್ ಮಾಡಿ 50 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಇಟ್ಟಿದ್ದರು. ಆರೋಪಿಗಳಾದ ಅನಿಲ್ ಕುಮಾರ್ ಹಡಪದ, ಸುಭಾಷ್ ಪೂಜಾರಿ, ಸಂತೋಷ್ ದೇವರಮನೆ ಹಾಗೂ ಮಹೇಶ್ ಬಡಿಗೇರ್ ಸದ್ಯ ಜೈಲು ಪಾಲಾಗಿದ್ದಾರೆ.

[caption id="attachment_131885" align="alignnone" width="800"]publive-image ಕಿಡ್ನಾಪ್ ಆಗಿದ್ದ ಶಾಲಾ ಶಿಕ್ಷಕ[/caption]

ಶಹಾಬಾದ್ ಕ್ರಾಸ್ ಬಳಿ ಅಪಹರಣ

ಸರ್ಕಾರಿ ಶಾಲಾ ಶಿಕ್ಷಕ ಈರಣ್ಣ ಸಜ್ಜನ್‌ ಅವರು ಕಲಬುರಗಿ ತಾಲೂಕಿನ ಫರಹತಾಬಾದ್ ನಿವಾಸಿ ಆಗಿದ್ದಾರೆ. ಶಹಾಬಾದ್ ತಾಲೂಕಿನ ಕಡಿಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಮನೆಯಿಂದ ನಿತ್ಯ ಬೈಕ್ ಮೇಲೆ ಶಾಲೆಗೆ ಹೋಗ್ತಿದ್ದರು. ಅದರಂತೆ ಏಪ್ರಿಲ್ 9 ರಂದು ಬೆಳಗ್ಗೆ ಶಿಕ್ಷಕ ಈರಣ್ಣ ಬೈಕ್​ನಲ್ಲಿ ಶಾಲೆಗೆ ಹೊರಟಿದ್ದರು. ಶಹಾಬಾದ್ ಕ್ರಾಸ್ ಬಳಿ ಬರುತ್ತಿದ್ದಂತೆ ಹಿಂದಿನಿಂದ ಕಾರ್​ನಲ್ಲಿ ಬಂದಿದ್ದ ನಾಲ್ವರ ಗ್ಯಾಂಗ್ ಶಿಕ್ಷಕನ ಬೈಕ್​ಗೆ ಅಡ್ಡಗಟ್ಟಿ ಕೈಕಾಲು ಹಿಡಿದು ಕಾರಿನಲ್ಲಿ ಹಾಕಿಕೊಂಡು ಅಪಹರಣ ಮಾಡಿದ್ದರು.

ಬಳಿಕ ನೇರವಾಗಿ ಜೇವರ್ಗಿ ಕಡೆಗೆ ಹೋಗಿದ್ದಾರೆ. ಈ ಹಿಂದೆ ನೀನು 2.5 ಕೋಟಿ ಬೆಲೆ ಬಾಳುವ ನಾಯಿಯನ್ನು ಬೈಕ್​​ನಿಂದ ಡಿಕ್ಕಿ ಹೊಡೆದಿದಕ್ಕೆ ಸತ್ತು ಹೋಗಿದೆ. ನಾಯಿ ಮಾಲೀಕರು ನಿನ್ನನ್ನ ಮುಗಿಸಲು ಹೇಳಿದ್ದಾರೆ. ಆದರೆ ನೀನು ನಮಗೆ 50 ಲಕ್ಷ ಹಣ ಕೊಡು ಮ್ಯಾಟರ್ ಇಲ್ಲಿಗೆ ಕ್ಲೋಸ್ ಮಾಡ್ತೇವೆ. ಇಲ್ಲದಿದ್ರೆ ನಿನ್ನನ್ನ ಮುಗಿಸುತ್ತೇವೆ ಅಂತ ಆರೋಪಿಗಳು ಬೆದರಿಕೆ ಹಾಕಿದ್ದಾರೆ.

ಶಿಕ್ಷಕನ ಎಟಿಎಂನಿಂದ ಹಣ ಡ್ರಾ ಮಾಡಿದ್ದ ಖದೀಮರು

ಅವತ್ತು ಶಿಕ್ಷಕ ಈರಣ್ಣನನ್ನ ಕಿಡ್ನಾಪ್ ಮಾಡಿರುವ ಖತರ್ನಾಕ್ ಕಿಡ್ನಾಪರ್ಸ್, ಕಾರ್​ನಲ್ಲಿ ಕಲಬುರಗಿಯಿಂದ ಜೇವರ್ಗಿ, ಜೇವರ್ಗಿಯಿಂದ ಸಿಂದಗಿ ಕಡೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಬಿಜಾಪುರದ ಕಡೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲದೆ ನೀನು ಹಣ ಕೊಡು ಅಂತ ಅವನಿಗೆ ಪೀಡಿಸುತ್ತಾರೆ. ಆತನ ಬಳಿ ಇರುವ ಬಂಗಾರದ ಉಂಗುರ, ಮೊಬೈಲ್ ಫೋನ್, ATM ಕಾರ್ಡ್ ತೆಗೆದುಕೊಂಡು ಅಲ್ಲಿಂದ ಬಾಗಲಕೋಟೆಗೆ ಕರೆದೊಯ್ದು, ATMನಿಂದ 2 ಬಾರಿ ಹಣ ಡ್ರಾ ಮಾಡಿಕೊಂಡು ಬೀಳಗಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆತನ ಪತ್ನಿಗೆ ಕರೆ ಮಾಡಿ ನಿಧಿ ಸಿಕ್ಕಿದೆ ಅದಕ್ಕೆ ಖರ್ಚು ಮಾಡಲು ಹಣ ಬೇಕಾಗಿದೆ ಅಂತ ಹೇಳು ಅಂತ ಆತನಿಂದ ಮನೆಗೆ ಫೋನ್ ಮಾಡಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

[caption id="attachment_131884" align="alignnone" width="800"]publive-image ಕಿಡ್ನಾಪ್ ಆಗಿದ್ದ ಶಾಲಾ ಶಿಕ್ಷಕ[/caption]

ಆದ್ರೆ ಅವರ ಪತ್ನಿ ಹಣ ಕೊಡದಿದ್ದಾಗ ಈತನ ಬಳಿ ಎಷ್ಟಿರುತ್ತೋ ಅಷ್ಟು ಹಣ ಕಿತ್ತುಕೊಂಡಿದ್ದಾರೆ. ಅಲ್ಲದೆ ಎಟಿಎಮ್ ಮೂಲಕ ಹಣ ಡ್ರಾ ಮಾಡಿದ್ದಾರೆ. ರಸ್ತೆ ಪಕ್ಕದಲ್ಲಿ ನಿಂತಾಗ ಶಿಕ್ಷಕ ಈರಣ್ಣ, ಅವರ ಕಣ್ಣು ತಪ್ಪಿಸಿ ಎಸ್ಕೇಪ್ ಆಗಿ ಮಾರ್ಟ್ ಒಂದರ ಒಳಗಡೆ ಹೋಗಿ ಅವಿತುಕೊಂಡು ಕುಳಿತಿದ್ದಾರೆ. ಅಲ್ಲಿಂದ ತಮ್ಮ ಪತ್ನಿಗೆ ಪೋನ್ ಮಾಡಿ ಕರೆಸಿಕೊಂಡು ಗ್ರಾಮಕ್ಕೆ ಬಂದು ಬಳಿಕ ಫರಹತಾಬಾದ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ. ಕೂಡಲೇ ಎಚ್ಚೆತ್ತ ಫರಹತಾಬಾದ್ ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿ ಎ1 ಆರೋಪಿ ಅನಿಲ್​​ಕುಮಾರ್ ಹಡಪದ, ಸುಭಾಸ್, ಮಹೇಶ್ ಹಾಗೂ ಸಂತೋಷ್​ನನ್ನ ಅರೆಸ್ಟ್ ಮಾಡಿದ್ದಾರೆ. ಕಿಡ್ನಾಪ್ ಕೃತ್ಯಕ್ಕೆ ಬಳಸಿದ 1 ಕಾರು, 1 ಮೊಬೈಲ್, ರಾಡ್ ಹಾಗೂ ಮಂಕಿ ಕ್ಯಾಪ್ ಸೇರಿ 1.40 ಲಕ್ಷ ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಿ ಆರೋಪಿಗಳನ್ನ ಜೈಲಿಗೆ ಅಟ್ಟಿದ್ದಾರೆ.

ಅಂದಹಾಗೆ ಎ1 ಆರೋಪಿ ಅನಿಲ್​ಕುಮಾರ್ ಕ್ಷೌರಿಕ ಕೆಲಸ ಮಾಡಿಕೊಂಡಿದ್ದು, ತಾನು ಮಾಡಿರುವ ಸಾಲ ತೀರಿಸಲು, ಸ್ನೇಹಿತರನ್ನು ಕರೆಸಿಕೊಂಡು ಶಿಕ್ಷಕನ ಅಪಹರಣ ಮಾಡಿ, ಈಗ ನಾಲ್ವರು ಆರೋಪಿಗಳು ಕಲಬುರಗಿ ಜೈಲಿನಲ್ಲಿ ರೊಟ್ಟಿ ಮುರಿಯುತ್ತಿದ್ದಾರೆ. ಶಿಕ್ಷಕರನ್ನ ಕಿಡ್ನಾಪ್ ಮಾಡಿದ ಖದೀಮರ ಹೆಡೆಮುರಿ ಕಟ್ಟಿದ್ದಕ್ಕೆ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment