/newsfirstlive-kannada/media/post_attachments/wp-content/uploads/2024/12/KIDNAP-1.jpg)
ಬೆಳಗ್ಗೆ ಶಾಲೆಗೆ ಹೋಗ್ತಿದ್ದ ಶಿಕ್ಷಕನನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಲಾಗಿದೆ. ಎಂದಿನಂತೆ ಶಾಲೆಗೆ ಹೋಗುತ್ತಿದ್ದಾಗ ಹುಡುಗಿ ಕಡೆಯವರು ಬಲವಂತವಾಗಿ ಎತ್ತಿಕೊಂಡು ಹೋಗಿದ್ದಾರೆ. ನಂತರ ಬಂದೂಕುಗಳಿಂದ ಬೆದರಿಸಿ ಸಮೀಪದ ದೇವಸ್ಥಾನಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ವಧುವಾಗಿ ನಿಂತಿದ್ದ ಯುವತಿಯನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬಿಹಾರದ ಕಿತಾಹರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿ ವಿಡಿಯೋಗಳು ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಬೇಗುಸರಾಯ್ ಜಿಲ್ಲೆಯ ಅವನೀಶ್ ಕುಮಾರ್ ಎಂಬಾತ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ. ಕಳೆದ ಶುಕ್ರವಾರ ಎಂದಿನಂತೆ ಶಾಲೆಗೆ ಹೋಗುತ್ತಿದ್ದಾಗ ಎರಡು ಸ್ಕಾರ್ಪಿಯೋ ಕಾರು ಶಿಕ್ಷಕನ ಎದುರಿಗೆ ಬಂದು ನಿಂತಿದೆ.
ಇದನ್ನೂ ಓದಿ:ಪ್ರವಾಸಿಗರೇ ಇಲ್ ಕೇಳಿ..! ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ನೋ ಎಂಟ್ರಿ, ಕಾರಣ?
ಕಾರಿನಲ್ಲಿದ್ದವರು ಕೆಳಗಿಳಿದು ಗನ್ ತೋರಿಸಿ ವಾಹನ ಹತ್ತುವಂತೆ ಬೆದರಿಸಿದ್ದಾರೆ. ಅಲ್ಲಿಂದ ಅಪಹರಿಸಿದ ಹುಡುಗಿ ಸಂಬಂಧಿಕರು ದೇವಸ್ಥಾನಕ್ಕೆ ಕರ್ಕೊಂಡು ಬಂದಿದ್ದಾರೆ. ಅಲ್ಲಿ ಗುಂಜನ್ ಎಂಬ ಮಹಿಳೆ ಜೊತೆ ಮದುವೆ ಆಗುವಂತೆ ಒತ್ತಾಯಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಮದುವೆ ಆಗಲು ನನಗೆ ಇಷ್ಟ ಇಲ್ಲ ಎಂದು ಹೇಳ್ತಿರೋದನ್ನು ನೋಡಬಹುದಾಗಿದೆ.
ಬೆದರಿಕೆ ಹಿನ್ನೆಲೆಯಲ್ಲಿ ಮದ್ವೆ ಶಾಸ್ತ್ರವನ್ನು ಅವನಿಶ್ ಮುಗಿಸಿದ್ದಾನೆ. ಒತ್ತಾಯಪೂರ್ವಕವಾಗಿ ಯುವತಿಯ ಹಣೆಗೆ ಕುಂಕುಮ ಇಡಿಸಿದ್ದಾರೆ. ಮದುಮಗನ ಕಾಲಿಗೆ ಟವೆಲ್ನಿಂದ ಕಟ್ಟಿದ್ದಾರೆ. ಯಾರೋ ಒಬ್ಬರು ಮಂತ್ರವನ್ನು ಹೇಳಿದ್ದಾರೆ. ವರದಿಗಳ ಪ್ರಕಾರ, ಈ ಹಿಂದೆ ಆ ಯುವತಿಯನ್ನು ಆತ ಮೊದಲು ಪ್ರೀತಿಸುತ್ತಿದ್ದ ಎಂದು ಹುಡುಗಿಯ ಸಂಬಂಧಿಕರು ಹೇಳಿದ್ದಾರೆ. ಅವನೀಶ್ ಅವರ ಮಾತನ್ನು ಅಲ್ಲಗಳೆದಿದ್ದಾನೆ. ನನಗೂ ವಧುವಿಗೂ ಯಾವುದೇ ಸಂಬಂಧವಿಲ್ಲ. ಈ ಮದುವೆಗೆ ಒಪ್ಪಿಗೆ ಇಲ್ಲ ಎಂದಿದ್ದಾನೆ. ಪ್ರಕರಣ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ:Flat track Bully.. ರೋಹಿತ್ ಟೆಸ್ಟ್ಗೆ ಗುಡ್ ಬೈ ಹೇಳಲು ಇದೇ ಸಕಾಲ.. ಕಾರಣ ಇಲ್ಲಿದೆ..!‘
फिर एक जबरन शादी (पकरौआ विवाह) का वीडियो अपने बिहार से आया है , लड़का #BPSC शिक्षक है जिसको बेगूसराय में लड़की के परिवार के लोगों ने जबरन पकड़ कर शादी करवा दिया , BPSC शिक्षक के पैर को गमछा से बांध कर दो आदमी ने मज़बूती से शिक्षक का दोनों हाँथ खींचते हुए लड़की के माँग में सिंदूर… pic.twitter.com/zhyOI65WhI
— Prince Gupta ( Journalist ) (@Broudprince) December 14, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ