/newsfirstlive-kannada/media/post_attachments/wp-content/uploads/2025/02/TEACHER-SUSPEND-1.jpg)
ಶಿಕ್ಷಕರು ಅಂದ್ರೆ ಉತ್ತಮ ಸಮಾಜದ ಸೃಷ್ಟಿ ಮಾಡುವ ಸ್ಥಾನದಲ್ಲಿರುವವರು. ಬೇರೆಯವರಿಗೆ ಆದರ್ಶವಾಗಿರಬೇಕಾದವರು. ಅವರಿಂದಲೇ ಒಂದು ಪೀಳಿಗೆ ಒಂದು ನವ್ಯ ಸಮಾಜದ ಭಾಗವಾಗಿ ಹೊರಹೊಮ್ಮಬೇಕು. ಅಂತಹ ಶಿಕ್ಷಕರೇ ಅಸಭ್ಯವಾಗಿ ವರ್ತಿಸಿದರೆ. ಅಸಭ್ಯ ಮಾತುಗಳನ್ನಾಡಿದರೆ ಸಮಾಜದ ಸ್ಥಿತಿ ಏನಾಗಬೇಡ? ಅಂತಹದೊಂದು ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ ಜಹನಾಬಾದ್ನ ಕೇಂದ್ರಿಯ ವಿದ್ಯಾಲಯದ ಪ್ರಾಥಮಿಕ ಶಾಲೆಯ ಶಿಕ್ಷಕಿ ದೀಪಾಲಿ ಸಹಾ ತಾನು ಮಾಡಿದ ಒಂದು ವಿಡಿಯೋದಿಂದಾಗಿ ಹಾಗೂ ವಿಡಿಯೋದಲ್ಲಿ ಬಳಸಿದ ಅಶ್ಲೀಲ ಪದದಿಂದಾಗಿ ಸಸ್ಪೆಂಡ್ ಆಗಿದ್ದಾರೆ. ವಿಡಿಯೋದಲ್ಲಿ ಬಿಹಾರ ಹಾಗೂ ಭಾರತದ ಬೇರೆ ಪ್ರದೇಶಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಅಶ್ಲೀಲ ಪದ ಬಳಸಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಿಂದಾಗಿ ಕೆಲಸವನ್ನೇ ಕಳೆದುಕೊಂಡಿದ್ದಾರೆ ಶಿಕ್ಷಕಿ.
KV teacher suspended for her remarks against Bihar , she called the state "India's worst f*****g region" and it went viral. #Bihar#BiharTeacherWantsTransferpic.twitter.com/fgXmMxYjkQ
— Jantrends (@jantrends)
KV teacher suspended for her remarks against Bihar , she called the state "India's worst f*****g region" and it went viral. #Bihar#BiharTeacherWantsTransferpic.twitter.com/fgXmMxYjkQ
— Jantrends (@jantrends) February 27, 2025
">February 27, 2025
ವಿಡಿಯೋದಲ್ಲಿ ದೀಪಾಲಿ ಸಹಾ ಎನ್ನುವ ಶಿಕ್ಷಕಿ ತನ್ನನ್ನು ಬಿಹಾರಕ್ಕೆ ಪೋಸ್ಟ್ ಮಾಡಿದ ವಿಚಾರವಾಗಿ ಮಾತನಾಡಿದ್ದಾರೆ. ‘ನಾನು ಒಂದು ಯೋಚನೆ ಮಾಡ್ತಿದ್ದೀನಿ, ಭಾರತದ ಎಲ್ಲಾ ಕಡೆ ಕೇಂದ್ರಿಯ ವಿದ್ಯಾಲಯಗಳು ಇವೆ. ಅವರು ನನ್ನನ್ನು ಎಲ್ಲಿ ಬೇಕಾದರು ಪೋಸ್ಟ್ ಮಾಡಬಹುದಿತ್ತು. ಜನರು ಕೋಲ್ಕತ್ತಾವನ್ನು ಅಷ್ಟಾಗಿ ಇಷ್ಟ ಪಡುವುದಿಲ್ಲ. ಆದರು ಕೂಡ ನಾನು ಅಲ್ಲಿ ಹೋಗಲು ಸಿದ್ಧಳಿದ್ದೇನೆ. ಪಶ್ಚಿಮ ಬಂಗಾಳದ ಯಾವ ಪ್ರದೇಶವಾದರೂ ಸರಿ. ನನ್ನ ಸ್ನೇಹಿತರೊಬ್ಬರನ್ನು ಡಾರ್ಜಿಲಿಂಗ್ಗೆ ಪೋಸ್ಟ್ ಮಾಡಿದ್ದಾರೆ. ನೀವು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಾ? ಮತ್ತೊಬ್ಬ ಸ್ನೇಹಿತರನ್ನು ಸಿಲ್ಚಾರ, ಮತ್ತೊಬ್ಬರನ್ನು ಬೆಂಗಳೂರು. ನನ್ನ ಬಗ್ಗೆ ಅದ್ಯಾವ*** ದ್ವೇಷವಿತ್ತು ಭಾರತದ ಅತ್ಯಂತ Worst F..ff ಪ್ರದೇಶದಲ್ಲಿ ಪೋಸ್ಟಿಂಗ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಮತ್ತೊಂದು ವಿಡಿಯೋದಲ್ಲಿಯೂ ಕೂಡ ಶಿಕ್ಷಕಿ ಸಹಾ ಬಿಹಾರದ ಸ್ಥಿತಿಯ ಬಗ್ಗೆ ಮಾತನಾಡುತ್ತಾ ಅದೇ ಅಶ್ಲೀಲ ಪದಗಳ ಬಳಕೆಯನ್ನು ಮಾಡಿದ್ದಾರೆ. ಈ ಎರಡು ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಈಗ ಸಹಾ ನೌಕರಿಗೆ ಕುತ್ತು ಬಂದಿದೆ. ಬಿಹಾರದ ಸಂಸದೆ ಶಾಂಭವಿ ಚೌದರಿ ಶಿಕ್ಷಕಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರಿಯ ವಿದ್ಯಾಲಯದ ಕಮಿಷನರ್ಗೆ ಪತ್ರ ಬರೆದಿದ್ದಾರೆ. ಶಿಕ್ಷಕಿ ದೀಪಾಲಿ ಸಹಾ ಮಾತಾಡಿರುವ ಒಂದೊಂದು ಮಾತುಗಳು ನಾಗರಿಕ ಸಮಾಜ ಒಪ್ಪಿಕೊಳ್ಳುವಂತದಲ್ಲ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕೇಂದ್ರಿಯ ವಿದ್ಯಾಲಯದ ಸಂಘಟನೆ ಈ ಬಗ್ಗೆ ಶಿಸ್ತು ಕ್ರಮ ಕೈಗೊಂಡಿದ್ದು ಶಿಕ್ಷಕಿಯನ್ನು ಅಮಾನತ್ತು ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ