/newsfirstlive-kannada/media/post_attachments/wp-content/uploads/2025/07/Vandana-Rai.jpg)
ಉಡುಪಿ: ಮಕ್ಕಳೊಂದಿಗೆ ನೃತ್ಯ ಮಾಡುತ್ತಾ ಆಟದ ಜೊತೆ ಪಾಠ ಮಾಡುವ ರೀಲ್ಸ್ ವೀಡಿಯೋ ಮೂಲಕ ಅಪಾರ ಅಭಿಮಾನಿಗಳ ಹೊಂದಿರುವ ಶಿಕ್ಷಕಿಯೊಬ್ಬರು ಇತ್ತೀಚೆಗೆ ಮಾಡಿರುವ ‘ಜಾಗೃತಿ ವೀಡಿಯೋ’ ಕ್ಷಮೆ ಕೇಳುವಷ್ಟರ ಮಟ್ಟಿಗೆ ವಿವಾದಕ್ಕೆ ಕಾರಣವಾಗಿದೆ.
ಡ್ಯಾನ್ಸ್ ಟೀಚರ್ ಎಂದೇ ಫೇಮಸ್ ಆಗಿದ್ದ ಕಾರ್ಕಳ ತಾಲೂಕಿನ ಖಾಸಗಿ ಶಾಲೆಯ ಶಿಕ್ಷಕಿ ವಂದನಾ ರೈ ಇತ್ತೀಚೆಗೆ ತಮ್ಮ ವಿದ್ಯಾರ್ಥಿಗಳನ್ನು ಮೊಬೈಲ್ ಎಡಿಕ್ಷನ್​ನಿಂದ ಹೇಗಾದರೂ ದೂರ ಮಾಡಬೇಕೆನ್ನುವ ಸದುದ್ದೇಶದಿಂದ ಶಾಲೆಯಲ್ಲಿ ಒಂದು ಸಣ್ಣ ಸ್ಕಿಟ್ ಮಾಡಿದ್ದರು. ವಿದ್ಯಾರ್ಥಿನಿಗೆ ಕಣ್ಣಿಗೆ ಬಟ್ಟೆ ಕಟ್ಟಿ ಮೊಬೈಲ್ ನೋಡಿ ನೋಡಿ ಈ ಬಾಲಕಿಯ ಕಣ್ಣು ಹೇಗೆ ಹೋಗಿದೆ ನೋಡಿ ಅಂತ ಉಳಿದ ಮಕ್ಕಳಲ್ಲಿ ಭಯದ ಮೂಲಕವಾದ್ರೂ ಮೊಬೈಲ್ ಎಡಿಕ್ಷನ್ ನಿಂದ ತಮ್ಮ ವಿದ್ಯಾರ್ಥಿಗಳನ್ನು ದೂರವಿಡಲು ತರಗತಿಯಲ್ಲಿ ಮಾಡಿದ ಜಾಗೃತಿ ವೀಡಿಯೋಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು.
ಈ ಆಕ್ರೋಶದ ಬೆನ್ನಲ್ಲೇ ಶಿಕ್ಷಕಿ ವಂದನಾ ರೈ ವೀಡಿಯೋ ಡಿಲಿಟ್ ಮಾಡುವ ಮೂಲಕ ಕ್ಷಮೆ ಕೂಡ ಕೇಳಿದ್ದಾರೆ. ಕ್ಷಮೆ ಕೇಳಿದ ವಂದನಾ ರೈ ಪರ ಹಲವರು ಶ್ಲಾಘನೀಯ ಕಮೆಂಟ್ ಕೂಡ ಮಾಡಿದ್ದಾರೆ. ವಂದನಾ ರೈ ತಮ್ಮ ಜಾಗೃತಿ ವೀಡಿಯೋ ಬಗ್ಗೆ ಕ್ಷಮೆ ಕೇಳುವುದರ ಜೊತೆ ತಾನು ಮಾಡಿದ ವೀಡಿಯೋ ತಲುಪುವವರಿಗೆ ತಲುಪಿದೆ. ನಾನು ಇರೋದೇ ಮಕ್ಕಳಿಗಾಗಿ ಎಂದು ತಮ್ಮ ಫೇಸ್​ಬುಕ್ ಪೇಜ್​ನಲ್ಲಿ ಬೇಸರ ಹೊರಹಾಕಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾ ಸೋಲಿಗೆ ಕಾರಣ ರಿವೀಲ್; ಸಚಿನ್ ನಿವೃತ್ತಿ ಬಳಿಕ ಇದೊಂದೇ ದೊಡ್ಡ ಪ್ರಾಬ್ಲಂ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ