newsfirstkannada.com

ಶಿಕ್ಷಕರ ಕ್ಷೇತ್ರ ಉಪ ಚುನಾವಣೆ; ಮೈತ್ರಿ ಅಭ್ಯರ್ಥಿ‌ಯನ್ನು ಕಣಕ್ಕಿಳಿಸಲು ಸಭೆ ಕರೆದ ಬಿಜೆಪಿ-ಜೆಡಿಎಸ್

Share :

Published January 21, 2024 at 12:03pm

    ಸ್ಥಳೀಯ ಚುನಾವಣೆಗೆ ಜೊತೆಗೂಡಿ ಕೆಲಸ ಮಾಡುತ್ತೇವೆ-ಎಚ್​ಡಿಕೆ

    ಮೋದಿ ಅವರ ಕೈ ಬಲಪಡಿಲಸಲು ಒಟ್ಟಾಗಿ ಹೋಗ್ತೀವಿ- ಯಡಿಯೂರಪ್ಪ

    ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ನ ಎ.ಪಿ ರಂಗನಾಥ ಆಯ್ಕೆ

ಬೆಂಗಳೂರು: ಫೆ.16 ರಂದು ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪ ಚುನಾವಣೆ ನಡೆಯಲಿಕ್ಕಿದೆ. ಈ ಹಿನ್ನೆಲೆ ದೋಸ್ತಿ ಪಕ್ಷಗಳಿಂದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಮೊದಲ ಮೈತ್ರಿ ಚುನಾವಣೆ ಸಭೆ ನಡೆದಿದೆ. ಬಿಜೆಪಿ-ಜೆಡಿಎಸ್ ಪಕ್ಷ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿ‌ ಕಣಕ್ಕಿಳಿಸಲು ಮುಂದಾಗಿದೆ.

ಇಂದು ನಡೆದ ಬಿಜೆಪಿ ಮತ್ತು ಜೆಡಿಎಸ್​ ಜಂಟಿ ಸಭೆಯ ಕುರಿತು ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಮಾತನಾಡಿದ್ದಾರೆ. ಮುಂದೆ ಬರುವ ವಿಧಾನಪರಿಷತ್ ಚುನಾವಣೆ ಸಂಬಂಧ ಚರ್ಚೆ ಮಾಡಿದ್ದೇವೆ. ಇವತ್ತು ಚರ್ಚೆಯ ಬಗ್ಗೆ ಹೈಕಮಾಂಡ್ ನಾಯಕರಿಗೆ ತಿಳಿಸುತ್ತೇವೆ. ಇಲ್ಲಿಂದಲೇ ಒಂದು ಸಂದೇಶ ಹೊಗಲಿದೆ. ಮುಂಬರುವ ಸ್ಥಳೀಯ ಚುನಾವಣೆ ಸಂಬಂಧ ಜೊತೆಗೂಡಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು, ಇಂದಿನ ಸಭೆಯಲ್ಲಿ ಯಡಿಯೂರಪ್ಪ ಅವರ ಮನೆಯಲ್ಲಿ ಎರಡೂ ಪಕ್ಷದ ಪ್ರಮುಖ ನಾಯಕರು ಸಭೆ ನಡೆಸಿದ್ದೇವೆ. ಪ್ರಥಮ ಹಂತದಲ್ಲಿ ಮೊದಲ ಸಭೆ ಮಾಡಿದ್ದೇವೆ. ಮುಂದೆ ಬರುವ ವಿಧಾನಪರಿಷತ್ ಚುನಾವಣೆಗೆ ಬೈ ಎಲೆಕ್ಷನ್ ಇದೆ. ಅಭ್ಯರ್ಥಿ ಆಯ್ಕೆ ಚರ್ಚೆ ಮಾಡಿದ್ದೇವೆ. ಬಿಜೆಪಿ ಹೈಕಮಾಂಡ್ ಗೆ ಮಾಹಿತಿ ನೀಡುತ್ತೇವೆ. ಮುಂದಿನ ಚುನಾವಣೆಗೆ ಇಲ್ಲಿಂದಲೇ ಸಂದೇಶ ಕೊಡಲಿದ್ದೇವೆ. ಮೋದಿ ಅವರ ಕೈ ಬಲಪಡಿಲಸಲು ಒಟ್ಟಾಗಿ ಹೋಗ್ತೀವಿ. ರಾಜ್ಯದಲ್ಲಿ ಕೆಟ್ಟ ಸರ್ಕಾರ ಇದೆ, ಅದು ತೊಲಗಬೇಕು ಎಂದು ಹೇಳಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಅವರು ಮಾತನಾಡಿದ್ದು, ವಿಧಾನಪರಿಷತ್ ಗೆ ಸೀಮಿತವಾಗಿ ಎಲ್ಲರೂ ಚರ್ಚೆ ಮಾಡಿದ್ದೇವೆ. ಚರ್ಚೆಯ ವಿಚಾರ ದೆಹಲಿಗೆ ತಿಳಿಸ್ತೇವೆ. ಒಟ್ಟಾಗಿ ಚುನಾವಣೆ ಎದುರಿಸ್ತೇವೆ. ಎಂಎಲ್‌ಸಿ ಚುನಾವಣೆ ಬಂದಿದೆ. ಒಟ್ಟಾಗಿ ಎದುರಿಸ್ತೇವೆ‌ ಎಂದು ಹೇಳಿದ್ದಾರೆ.

ಇನ್ನು ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ, ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ನ ಎ.ಪಿ ರಂಗನಾಥ ಆಯ್ಕೆಯಾಗಿದ್ದಾರೆ. ದೋಸ್ತಿಗಳ ಸಭೆಯಲ್ಲಿ ಜೆಡಿಎಸ್ ನ ಎ.ಪಿ ರಂಗನಾಥ್ ಹೆಸರು ಪ್ರಸ್ತಾಪವಾಗಿದೆ. ಬಾಲರಾಮನ ಪ್ರತಿಷ್ಠಾಪನೆ ಬಳಿಕ ಘೋಷಣೆ ಮಾಡಲು ಎರಡು ಪಕ್ಷಗಳು ಮುಂದಾಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿಕ್ಷಕರ ಕ್ಷೇತ್ರ ಉಪ ಚುನಾವಣೆ; ಮೈತ್ರಿ ಅಭ್ಯರ್ಥಿ‌ಯನ್ನು ಕಣಕ್ಕಿಳಿಸಲು ಸಭೆ ಕರೆದ ಬಿಜೆಪಿ-ಜೆಡಿಎಸ್

https://newsfirstlive.com/wp-content/uploads/2024/01/BSY.jpg

Load More