ಬಾಲಿವುಡ್ನಲ್ಲಿ ರಾಹುಲ್ ದ್ರಾವಿಡ್ ಬಯೋಪಿಕ್ ಸದ್ದು
ಕನ್ನಡದ ಕಣ್ಮಣಿಯ ಬಯೋಪಿಕ್ಗೆ ತೆರೆಮರೆಯ ಸಿದ್ಧತೆ
ರಾಹುಲ್ ದ್ರಾವಿಡ್ ಬಯೋಪಿಕ್ನಲ್ಲಿ ಏನೆಲ್ಲಾ ಇರುತ್ತೆ?
ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಬಯೋಪಿಕ್ ಅನೌನ್ಸ್ಮೆಂಟ್ ಆಗಿ ವಾರ ಕಳೆದಿಲ್ಲ. ಅದಾಗಲೇ ಮತ್ತೊಬ್ಬ ಸೂಪರ್ ಸ್ಟಾರ್ ಜೀವನದ ಕಥೆ ತೆರೆಗೆ ಅಪ್ಪಳಿಸೋ ಸುದ್ದಿ ಹೊರ ಬಿದ್ದಿದೆ. ಅಂದ್ಹಾಗೆ ಆ ಸೂಪರ್ ಸ್ಟಾರ್ ಬೇರಾರೂ ಅಲ್ಲ. ಕನ್ನಡದ ಕಣ್ಮಣಿ, ವಿಶ್ವ ಕ್ರಿಕೆಟ್ ಲೋಕದ ದಿ ವಾಲ್, ರಾಹುಲ್ ದ್ರಾವಿಡ್.
MS ಧೋನಿ, ಸಚಿನ್ ತೆಂಡುಲ್ಕರ್, ಮೊಹಮ್ಮದ್ ಅಜರುದ್ದೀನ್, ಕಪಿಲ್ ದೇವ್.. ಟೀಮ್ ಇಂಡಿಯಾ ಕಂಡ ಈ ಲೆಜೆಂಡ್ಗಳ ಜೀವನಾಧಾರಿತ ಚಿತ್ರಗಳು ಬಾಲಿವುಡ್ನಲ್ಲಿ ಮೋಡಿ ಮಾಡಿದೆ. ನೆಚ್ಚಿನ ಕ್ರಿಕೆಟರ್ಗಳ ಆನ್ ಅಂಡ್ ಆಫ್ ದ ಫೀಲ್ಡ್ ಜೀವನವನ್ನ ತೆರೆ ಮೇಲೆ ಕಣ್ತುಂಬಿಕೊಂಡು ಫ್ಯಾನ್ಸ್ ಆನಂದಿಸಿದ್ದಾರೆ. ಇದೀಗ ಈ ಬಯೋಪಿಕ್ಗಳ ಲಿಸ್ಟ್ಗೆ ಯುವರಾಜ್ ಸಿಂಗ್ ಚಿತ್ರ ಹೊಸ ಸೇರ್ಪಡೆಯಾಗಿದೆ. ಕೆಲ ದಿನಗಳ ಹಿಂದಷ್ಟೇ ಯುವಿಯ ಬಯೋಪಿಕ್ ನಿರ್ಮಾಣದ ಬಗ್ಗೆ ಅಧಿಕೃತವಾಗಿ ಅನೌನ್ಸ್ ಆಗಿದೆ. ಇದ್ರ ಬೆನಲ್ಲೇ, ಮತ್ತೊಬ್ಬ ಲೆಜೆಂಡ್ ಜೀವನಾಧಾರಿತ ಚಿತ್ರದ ಸದ್ದು ಬಾಲಿವುಡ್ ಅಂಗಳದಲ್ಲಿ ಜೋರಾಗಿದೆ.
ಇದನ್ನೂ ಓದಿ:IPLನಲ್ಲಿ ಈ ತಂಡದ ವಿರುದ್ಧ ಆಡುವಾಗ ಎಕ್ಸೈಟ್ ಆಗಿರ್ತೇನೆ-ಕೊಹ್ಲಿ ನೆಚ್ಚಿನ ತಂಡ ಯಾವ್ದು?

ಯುವರಾಜ್ ಸಿಂಗ್ ಬಯೋಪಿಕ್ ತೆರೆಗೆ ಬರುವ ಅಧಿಕೃತ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಲೆಜೆಂಡ್ ರಾಹುಲ್ ದ್ರಾವಿಡ್ ಜೀವನಾಧಾರಿತ ಚಿತ್ರದ ಸದ್ದು ಬಿ ಟೌನ್ನಲ್ಲಿ ಜೋರಾಗಿದೆ. ವಿಶ್ವ ಕ್ರಿಕೆಟ್ ಲೋಕ ಕಂಡ ಸರ್ವಶ್ರೇಷ್ಠ ಕ್ರಿಕೆಟಿಗನ ಬಯೋಪಿಕ್ ನಿರ್ಮಾಣಕ್ಕೆ ಬಾಲಿವುಡ್ನಲ್ಲಿ ತೆರೆಮರೆಯಲ್ಲೇ ಕಸರತ್ತು ಆರಂಭವಾಗಿದೆ. ಬಹುಕೋಟಿ ಬಜೆಟ್ನಲ್ಲಿ ದ್ರಾವಿಡ್ ಕ್ರಿಕೆಟ್ ಕರಿಯರ್ನ ಕಥೆಯನ್ನ ತೆರೆಗೆ ತರಲು ಬಾಲಿವುಡ್ನ ದೊಡ್ಡ ನಿರ್ಮಾಣ ಸಂಸ್ಥೆ ಮುಂದಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.
ನನ್ನ ಬಯೋಪಿಕ್ಗೆ ನಾನೇ ಹೀರೋ ಎಂದ ದ್ರಾವಿಡ್
ಅಸಲಿಗೆ ದ್ರಾವಿಡ್ ಬಯೋಪಿಕ್ ತೆರೆಗೆ ಬರುತ್ತೆ ಅನ್ನೋ ಸುದ್ದಿ ಹರಿದಾಡಲು ಆರಂಭಿಸಿ ವಾರಗಳೇ ಕಳೆದಿತ್ತು. ಸುದ್ದಿ ಹೆಚ್ಚು ಸದ್ದು ಮಾಡಿರಲಿಲ್ಲ. ಇದೀಗ ಈ ಬಗ್ಗೆ ಸ್ವತಃ ರಾಹುಲ್ ದ್ರಾವಿಡ್ ತುಟಿ ಬಿಚ್ಚಿದ್ದಾರೆ. ದ್ರಾವಿಡ್ ಮಾತುಗಳೇ, ಬಯೋಪಿಕ್ ತೆರೆಗೆ ಬರೋ ಸುದ್ದಿ ಸತ್ಯ ಎಂಬ ಹಿಂಟ್ ನೀಡಿವೆ. ಇಂವೆಂಟ್ ಒಂದರಲ್ಲಿ ಬಯೋಪಿಕ್ ಹೀರೋ ಯಾರಾಗಿರಬೇಕು ಎಂಬ ಪ್ರಶ್ನೆಗೆ ಉತ್ತರಿಸಿರೋ ದ್ರಾವಿಡ್, ತುಂಬಾ ಹಣ ಸಿಕ್ಕರೆ ನಾನೇ ಎಂದು ಉತ್ತರಿಸಿದ್ದಾರೆ. ಅಪ್ಪಿತಪ್ಪಿಯೂ ಬಯೋಪಿಕ್ನ ಬಗ್ಗೆ ಹಬ್ಬಿರುವ ಸುದ್ದಿಯನ್ನ ತಳ್ಳಿ ಹಾಕಿಲ್ಲ. ದ್ರಾವಿಡ್ರ ಈ ನಡೆ ಫ್ಯಾನ್ಸ್ ಕುತೂಹಲ ಹೆಚ್ಚಿಸಿದ್ದು, ಬಯೋಪಿಕ್ನಲ್ಲಿ ಏನೆಲ್ಲಾ ಇರಲಿದೆ ಎಂಬ ಪ್ರಶ್ನೆ ಕಾಡ್ತಿದೆ.
ಇದನ್ನೂ ಓದಿ:16 ಬಾರಿ ಮೂಳೆ ಮುರಿತ, 8 ಸಲ ಸರ್ಜರಿ.. ಆದರೂ ಛಲ ಬಿಡಲಿಲ್ಲ; IAS ಅಧಿಕಾರಿಯಾದ ಯಶೋಗಾಥೆ..!
ಚಿನ್ನಸ್ವಾಮಿ TO ಬಾರ್ಬಡೋಸ್.. ರೋಚಕ ಜರ್ನಿ
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಿಂದ ವೆಸ್ಟ್ ಇಂಡೀಸ್ನ ಬಾರ್ಬಡೋಸ್ವರೆಗಿನ ರಾಹುಲ್ ದ್ರಾವಿಡ್ ಜರ್ನಿ ರೋಚಕವಾಗಿದೆ. ಸಾಮಾನ್ಯನಾಗಿ ಜರ್ನಿ ಆರಂಭಿಸಿದ ದ್ರಾವಿಡ್, ಕರಿಯರ್ ಅಂತ್ಯಗೊಳಿಸಿದ್ದು, ವಿಶ್ವ ಕ್ರಿಕೆಟ್ ಲೋಕ ಕಂಡ ಸರ್ವಶ್ರೇಷ್ಟ ಬ್ಯಾಟ್ಸ್ಮನ್ ಆಗಿ. ಸುದೀರ್ಘ 16 ವರ್ಷಗಳ ಕ್ರಿಕೆಟ್ ಜರ್ನಿಯಲ್ಲಿ ಸಾಕಷ್ಟು ಏಳು-ಬೀಳುಗಳನ್ನ ಕಂಡಿದ್ದಾರೆ. ಈ ಏಳು-ಬೀಳುಗಳ ಕಥೆ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿಯಾಗಿದೆ.
ನಾಯಕನಾಗಿ ಫೇಲ್.. ಕೋಚ್ ಆಗಿ ಸಕ್ಸಸ್
ಸರ್ವಶ್ರೇಷ್ಟ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆ ಹೊಂದಿರೋ ದ್ರಾವಿಡ್ಗೆ, ಕಳಪೆ ಕ್ಯಾಪ್ಟನ್ ಎಂಬ ಅಪಖ್ಯಾತಿ ಕೂಡ ಇದೆ. ವೆಸ್ಟ್ ಇಂಡೀಸ್ನಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ದ್ರಾವಿಡ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡಿ ನಿರ್ಗಮಿಸಿತ್ತು. ಆ ಬಳಿಕ ಕ್ಯಾಪ್ಟನ್ಸಿಗೆ ದ್ರಾವಿಡ್ ಗುಡ್ ಬೈ ಹೇಳಿದರು. ನಾಯಕನಾಗಿ ಫೇಲ್ ಆದ ದ್ರಾವಿಡ್, ಕೋಚ್ ಆಗಿ ಅದೇ ವೆಸ್ಟ್ ಇಂಡೀಸ್ನಲ್ಲಿ ಭಾರತಕ್ಕೆ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟರು.
ರಹಸ್ಯವಾಗಿ ಉಳಿದ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ?
ರಾಹುಲ್ ದ್ರಾವಿಡ್ನ ಜಂಟಲ್ಮನ್ ಗೇಮ್ನ ರಿಯಲ್ ಜಂಟಲ್ಮನ್ ಎನ್ನಲಾಗುತ್ತೆ. ಕಾಂಟ್ರವರ್ಸಿಗಳಿಂದ ಸದಾ ಅಂತರ ಕಾಯ್ದುಕೊಂಡ ಕ್ರಿಕೆಟಿಗ ದ್ರಾವಿಡ್. ಇಂತಹ ದ್ರಾವಿಡ್ ವಿಚಾರದಲ್ಲೂ ಹಲವು ಉತ್ತರ ಸಿಗದ ಪ್ರಶ್ನೆಗಳಿವೆ. ನಾಯಕನಾದ ಬಳಿಕ ಸೌರವ್ ಗಂಗೂಲಿಯನ್ನ ಡ್ರಾಪ್ ಮಾಡಿದ್ದು, ಸಚಿನ್ ತೆಂಡುಲ್ಕರ್ 194 ರನ್ಗಳಿಸಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದು, 2004ರ ಬಾಲ್ ಟ್ಯಾಂಪರಿಂಗ್ ವಿವಾದ ಸೇರಿದಂತೆ ಹಲವು ಕಾಂಟ್ರವರ್ಸಿಗಳು ಉತ್ತರ ಸಿಗದೇ ಉಳಿದಿವೆ. ಆ ಪ್ರಶ್ನೆಗಳಿಗೆ ಬಯೋಪಿಕ್ನಲ್ಲಿ ಉತ್ತರ ಸಿಗುತ್ತಾ ಅನ್ನೋ ಕುತೂಹಲವಿದೆ.
ಇದನ್ನೂ ಓದಿ:‘ಅವಕಾಶ ಸಿಕ್ಕರೆ..’ RCB ಅಭಿಮಾನಿಗಳ ನಿರೀಕ್ಷೆ ಹೆಚ್ಚು ಮಾಡಿದ ಮನಿಷ್ ಪಾಂಡೆ
ರಾಹುಲ್ ದ್ರಾವಿಡ್ ಬಯೋಪಿಕ್ನ ಸುದ್ದಿ ಇನ್ನೂ ಅಧಿಕೃತಗೊಂಡಿಲ್ಲ. ಅದಾಗಲೇ ಫ್ಯಾನ್ಸ್ ವಲಯದಲ್ಲಿ ತೀವ್ರವಾದ ಕುತೂಹಲವನ್ನ ಹುಟ್ಟುಹಾಕಿದೆ. ಬಯೋಪಿಕ್ ತೆರೆ ಕಂಡ್ರೆ ಸ್ಟಾರ್ ನಟರ ಸಿನೆಮಾದಂತೆ, ದ್ರಾವಿಡ್ ಜೀವನದ ಕಹಾನಿಯೂ ಸಖತ್ ಸೌಂಡ್ ಮಾಡೋದ್ರಲ್ಲಿ ಅನುಮಾನವೇ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್