/newsfirstlive-kannada/media/post_attachments/wp-content/uploads/2024/10/Abhishek_Sharma-3.jpg)
ಇಂದು ಮುಂಬೈನ ವಾಂಖೆಡೆ ಇಂಟರ್​ ನ್ಯಾಷನಲ್​​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಕೊನೆಯ ಟಿ20 ಪಂದ್ಯದಲ್ಲಿ ಟೀಮ್​ ಇಂಡಿಯಾ ಯುವ ಎಡಗೈ ಬ್ಯಾಟರ್​​​ ಶತಕ ಸಿಡಿಸಿದ್ದಾರೆ.
ಟೀಮ್​ ಇಂಡಿಯಾ ಪರ ಓಪನರ್​ ಆಗಿ ಬಂದ ಯುವ ಎಡಗೈ ಬ್ಯಾಟರ್​​ ಅಭಿಷೇಕ್​ ಶರ್ಮಾ ಅಬ್ಬರಿಸಿದ್ರು. ಕೇವಲ 38 ಬಾಲ್​ನಲ್ಲಿ ವೇಗದ ಶತಕ ಸಿಡಿಸಿದ್ರು. ಇಂಗ್ಲೆಂಡ್​ ಬೌಲರ್​ಗಳನ್ನು ಕ್ರೀಸ್​ನಲ್ಲೇ ನಿಂತು ಕಾಡಿದರು.
ವೇಗದ ಶತಕ
ಕೇವಲ 38 ಬಾಲ್​ನಲ್ಲಿ 100 ರನ್​ ಚಚ್ಚಿದ ಅಭಿಷೇಕ್​ ಶರ್ಮಾ ದಾಖಲೆ ಬರೆದರು. ಬರೋಬ್ಬರಿ 5 ಫೋರ್​​, ಭರ್ಜರಿ 10 ಸಿಕ್ಸರ್​​ ಚಚ್ಚಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​​ ಬರೋಬ್ಬರಿ 250ಕ್ಕೂ ಹೆಚ್ಚಿತ್ತು.
ಭಾರತ, ಇಂಗ್ಲೆಂಡ್​​ ನಡುವಿನ ಕೊನೆಯ ಟಿ20 ಪಂದ್ಯ ಭಾರೀ ಕುತೂಹಲ ಹುಟ್ಟು ಹಾಕಿದೆ. ಈಗಾಗಲೇ ಟೀಮ್​ ಇಂಡಿಯಾ ಇಂಗ್ಲೆಂಡ್​ ವಿರುದ್ಧ ಟಿ20 ಸರಣಿ ಗೆದ್ದಿದೆ. 3-1 ಅಂತರದಲ್ಲಿ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಹೀಗಾಗಿ ಟೀಮ್​ ಇಂಡಿಯಾಗೆ ಇದು ಔಪಚಾರಿಕ ಪಂದ್ಯ ಆಗಿದ್ದು, ಇಂಗ್ಲೆಂಡ್​​ ಮಾತ್ರ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇಂಗ್ಲೆಂಡ್​ ತಂಡಕ್ಕೆ ಇದು ಪ್ರತಿಷ್ಠೆ ಕಣವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us