/newsfirstlive-kannada/media/post_attachments/wp-content/uploads/2023/12/Team-India-6.jpg)
ಇತ್ತೀಚೆಗೆ ನಡೆದ ಎರಡನೇ ಮಹತ್ವದ ಟಿ20 ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಸೋಲು ಕಂಡಿತ್ತು. 2ನೇ ಪಂದ್ಯ ಗೆದ್ದು ಟಿ20 ಸರಣಿ ಗೆಲ್ಲೋ ಯೋಚನೆಯಲ್ಲಿದ್ದ ಟೀಮ್ ಇಂಡಿಯಾಗೆ ಇದು ಶಾಕಿಂಗ್ ಆಗಿತ್ತು.
ಟಾಸ್ ಸೋತ್ರೂ ಫಸ್ಟ್ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾಗೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಟೀಮ್ ಇಂಡಿಯಾ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಕೇವಲ 124 ರನ್ ಕಲೆ ಹಾಕಿ ಸಾಧಾರಣ ಟಾರ್ಗೆಟ್ ನೀಡಿದ್ರು. ಪವರ್ ಪ್ಲೇನಲ್ಲೇ ತಂಡ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅದರಲ್ಲೂ ತಂಡದ ಓಪನರ್ ಆಗಿ ಬಂದ ಅಭಿಷೇಕ್ ಶರ್ಮಾ ಬೇಗ ಔಟ್ ಆಗಿ ಪೆವಿಲಿಯನ್ ಸೇರಿದ್ರು.
ಮತ್ತೆ ಕೈಕೊಟ್ಟ ಅಭಿಷೇಕ್
ಟೀಮ್ ಇಂಡಿಯಾದ ಸ್ಟಾರ್ ಯುವ ಬ್ಯಾಟರ್ ಅಭಿಷೇಕ್ ಶರ್ಮಾ. ಇವರು ರನ್ ಕಲೆ ಹಾಕುವಲ್ಲಿ ಫೇಲ್ಯೂರ್ ಆಗುತ್ತಿದ್ದಾರೆ. ಹೀಗಾಗಿ ಟೀಮ್ ಇಂಡಿಯಾಗೆ ಅಭಿಷೇಕ್ ಶರ್ಮಾ ಅವರದ್ದು ದೊಡ್ಡ ಚಿಂತೆಯಾಗಿದೆ. ಕಾರಣ ಇವರು ಇದುವರೆಗೆ ಆಡಿರೋ 9 ಇನ್ನಿಂಗ್ಸ್ನಲ್ಲಿ 1 ಶತಕ ಸಿಡಿಸಿದ್ರು. ಉಳಿದ 8 ಇನ್ನಿಂಗ್ಸ್‌ಗಳಲ್ಲಿ ಅಭಿಷೇಕ್ ಹೈಎಸ್ಟ್ ಸ್ಕೋರ್ ಕೇವಲ 16 ರನ್.
2ನೇ ಪಂದ್ಯದಲ್ಲೂ ಫೇಲ್ಯೂರ್
ಗೇಕೆಬರ್ಹಾದಲ್ಲಿ ನಡೆದ ಪಂದ್ಯದಲ್ಲಿ ಅಭಿಷೇಕ್ ಮತ್ತೊಮ್ಮೆ ಫೇಲ್ಯೂರ್ ಆದ್ರು. ಅಭಿಷೇಕ್ ಶರ್ಮಾ ಅವರಿಂದ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಉತ್ತಮ ಇನ್ನಿಂಗ್ಸ್ ನಿರೀಕ್ಷಿಸಲಾಗಿತ್ತು. ಈ ಪಂದ್ಯದಲ್ಲಿ ಕೇವಲ 4 ರನ್ಗೆ ಔಟ್ ಆಗಿದ್ದು, ಮೊದಲ ಪಂದ್ಯದಲ್ಲೂ ರನ್ ಗಳಿಸುವಲ್ಲಿ ವಿಫಲರಾಗಿದ್ದಾರೆ. ಇನಿಂಗ್ಸ್‌ನ 2ನೇ ಓವರ್‌ನಲ್ಲಿ ಜೆರಾಲ್ಡ್ ಕೋಟ್ಜಿ ಎಸೆತದಲ್ಲಿ ಮಾರ್ಕೊ ಯಾನ್ಸೆನ್ಗೆ ಕ್ಯಾಚಿತ್ತು ಔಟಾದರು. ಇದಕ್ಕೂ ಮುನ್ನ ಡರ್ಬನ್‌ನಲ್ಲಿ ನಡೆದ ಪಂದ್ಯದಲ್ಲಿ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು.
ತಂಡದಿಂದ ಕೈ ಬಿಡೋದು ಪಕ್ಕಾ
ಕಳಪೆ ಪ್ರದರ್ಶನ ನೀಡುತ್ತಿರೋ ಕಾರಣ ಅಭಿಷೇಕ್ ಶರ್ಮಾ ಅವರನ್ನು ಇಂದು ನಡೆಯಲಿರೋ 3ನೇ ಟಿ20 ಪಂದ್ಯದಿಂದ ಕೈ ಬಿಡಲಿದ್ದಾರೆ ಅನ್ನೋ ಮಾಹಿತಿ ಇದೆ. ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಅಭಿಷೇಕ್ ಅವರು ಶತಕದ ನಂತರ ಯಾವುದೇ ದೊಡ್ಡ ಇನ್ನಿಂಗ್ಸ್ ಆಡಲಿಲ್ಲ. ಇತ್ತೀಚೆಗೆ ನಡೆದ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿಯೂ ಸಹ ಅಭಿಷೇಕ್ ಕಳಪೆ ಪ್ರದರ್ಶನ ನೀಡಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ