ಟೀಂ ಇಂಡಿಯಾದಲ್ಲಿ ಬಣ ರಾಜಕೀಯ.. ಬಡವಾಯ್ತು ತಂಡ, ಸಾಲು ಸಾಲು ಅಪಮಾನ..!

author-image
Ganesh
Updated On
ಟೀಂ ಇಂಡಿಯಾದಲ್ಲಿ ಬಣ ರಾಜಕೀಯ.. ಬಡವಾಯ್ತು ತಂಡ, ಸಾಲು ಸಾಲು ಅಪಮಾನ..!
Advertisment
  • ಮನೆಯೊಂದು 3 ಬಾಗಿಲಾಯ್ತು ಟೀಮ್ ಇಂಡಿಯಾ?
  • ಕ್ಯಾಪ್ಟನ್​ ರೋಹಿತ್, ಕೋಚ್ ಗಂಭೀರ್ ಗುದ್ದಾಟ
  • 3 ಟೆಸ್ಟ್​.. 3 ಸ್ಪಿನ್ನರ್ಸ್​.. ಏನಿದರ ಸಂದೇಶ..?

ಪರ್ತ್​ನಲ್ಲಿ ಶುಭಾರಂಭ ಮಾಡಿದ್ದ ಟೀಮ್ ಇಂಡಿಯಾ, ಅದೇ ಜಯದ ನಾಗಲೋಟ ಮುಂದುವರಿಸುವ ಭರವಸೆ ಹುಟ್ಟಿಹಾಕಿತ್ತು. ಅಡಿಲೇಡ್​ನಲ್ಲಿ ಅಟ್ಟರ್ ಫ್ಲಾಪ್ ಪರ್ಫಾಮೆನ್ಸ್ ನೀಡಿದ್ದ ಟೀಮ್ ಇಂಡಿಯಾ, ಈಗ ಗಬ್ಬಾದಲ್ಲೂ ವೈಫಲ್ಯ ಅನುಭವಿಸಿದೆ. ಇದಕ್ಕೆ ಕಾರಣ ಮನೆಯೊಂದು ಮೂರು ಬಾಗಿಲು.

ಬಡವಾಯ್ತು ಟೀಮ್ ಇಂಡಿಯಾ
ಟೀಮ್ ಇಂಡಿಯಾದಲ್ಲಿ ಕೋಚ್, ಕ್ಯಾಪ್ಟನ್ ನಡು ನಡುವಿನ ಭಿನ್ನಾಭಿಪ್ರಾಯ ಹೊಸದೇನೂ ಇಲ್ಲ. ಸೌರವ್ ಗಂಗೂಲಿ, ಗ್ರೆಗ್ ಚಾಪೆಲ್‌. ವಿರಾಟ್ ಕೊಹ್ಲಿ ಆ್ಯಂಡ್​ ಅನಿಲ್ ಕುಂಬ್ಳೆ ನಡುವಿನ ಹಗ್ಗ ಜಗ್ಗಾಟ ಸಖತ್ ಸೌಂಡ್​ ಮಾಡಿತ್ತು. ಈ ಪಟ್ಟಿಗೆ ಹೊಸ ಸೇರ್ಪಡೆ ರೋಹಿತ್ ಶರ್ಮಾ ಅಂಡ್​ ಗೌತಮ್ ಗಂಭೀರ್.

ಇದನ್ನೂ ಓದಿ:ಜಾಮೀನು ಸಿಕ್ಕರೂ ಬಿಡುಗಡೆ ಇಲ್ಲ; A4 ಜಗದೀಶ್ ತಾಯಿ ಅಳಲು ಏನು..?

ನಾಯಕ ರೋಹಿತ್.. ಕೋಚ್ ಗಂಭೀರ್ ನಡುವೆ ಹಗ್ಗಜಗ್ಗಾಟ ನಡೀತಿದೆ. ದ್ರಾವಿಡ್ ನಿವೃತ್ತಿ ನಂತರ ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿ ಇಲ್ಲ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಸಾಲು ಸಾಲು ವೈಫಲ್ಯಗಳನ್ನು ಅನುಭವಿಸಿರುವ ಟೀಮ್ ಇಂಡಿಯಾ, ಕೋಚ್, ಕ್ಯಾಪ್ಟನ್​​ಗಳ ಕಚ್ಚಾಟದಲ್ಲಿ ಬಡವಾಗಿದೆ.

ಕೋಲ್ಡ್​ ವಾರ್​

ರೋಹಿತ್ ಶರ್ಮಾ ಅಂಡ್ ಗಂಭೀರ್ ನಡುವೆ ಎಲ್ಲವೂ ಸರಿ ಇಲ್ಲ ಎನ್ನಲಾಗ್ತಿದೆ. ಇದಕ್ಕೆ ಕಾರಣ ಕಾರ್ಯತಂತ್ರಗಳ ನಿರ್ಧಾರಗಳಲ್ಲಿನ ವಿಭಿನ್ನ ನಿಲುವು. ಟೀಮ್ ಇಂಡಿಯಾದ ಆಯ್ಕೆ, ಪ್ಲೇಯಿಂಗ್​ ಇಲೆವೆನ್ ಡಿಸಿಷನ್​ಗಳಲ್ಲಿ ಕೋಚ್ ಅಂಡ್ ಕ್ಯಾಪ್ಟನ್​​ ಭಿನ್ನ ನಿಲುವುಗಳನ್ನು ಹೊಂದಿದ್ದಾರೆ. ಇವರಿಬ್ಬರ ನಡುವಿನ ಸಮನ್ವಯದ ಕೊರತೆಯೇ ಭಿನ್ನಾಭಿಪ್ರಾಯಕ್ಕೆ ದಾರಿ ಮಾಡಿಕೊಟ್ಟಿದೆ.

ಇದನ್ನೂ ಓದಿ: ಪುಷ್ಪಾ 2 ಸಿನಿಮಾ ವೇಳೆ ನಡೆದ ಕಾಲ್ತುಳಿತ; ಮೃತ ರೇವತಿ ಮಗನ ಆರೋಗ್ಯ ಸ್ಥಿತಿ ಚಿಂತಾಜನಕ !

ರೋಹಿತ್​ಗೆ ಇಲ್ವ ಅಧಿಕಾರ

ನಾಯಕನಾಗಿ ರೋಹಿತ್, ಡಿಸಿಷನ್ ಮೇಕಿಂಗ್ ಫ್ರೀಡಂ ಇಲ್ವಾ ಎಂಬ ಪಶ್ನೆಯೂ ಇದೆ. 3 ಟೆಸ್ಟ್​ ಪಂದ್ಯಗಳಿಂದ ಒಂದು ಟೆಸ್ಟ್​ಗೆ ಒಬ್ಬರಂತೆ ಸುಂದರ್, ಅಶ್ವಿನ್, ಜಡೇಜಾರನ್ನು ಕಣಕ್ಕಿಳಿಸಿದ್ದಾರೆ. ಲೆಫ್ಟಿ ಬ್ಯಾಟರ್​ಗಳನ್ನು ಹೊಂದಿರುವ ಆಸ್ಟ್ರೇಲಿಯಾ ಎದುರು ಸುಂದರ್ ಅಥವಾ ಅಶ್ವಿನ್ ಬೆಸ್ಟ್ ಚಾಯ್ಸ್​ ಆಗಿತ್ತು. ಬ್ಯಾಟಿಂಗ್ ಬದಲಿಗೆ ಬೌಲಿಂಗ್ ತೆಗೆದುಕೊಂಡಿದ್ದು ಸಹ ತಂಡಕ್ಕೆ ಹಿನ್ನಡೆ ಆಯ್ತು. ಇದೆಲ್ಲವೂ ಡ್ರೆಸ್ಸಿಂಗ್ ರೂಮ್​ನಲ್ಲಿ ಏನಾಗ್ತಿದೆ ಎಂಬ ಪ್ರಶ್ನೆಯನ್ನೇ ಹುಟ್ಟಿಹಾಕಿರುವ ಜೊತೆ ಜೊತೆಗೆ ರೋಹಿತ್​​, ಸ್ವಯಃ ನಿರ್ಧಾರ ತೆಗೆದುಕೊಳ್ಳುವ ಫ್ರೀಡಂ ಇಲ್ವಾ ಎಂಬ ಅನುಮಾನ ಹುಟ್ಟಿಹಾಕಿದೆ.

ರೋಹಿತ್ ಶರ್ಮಾ, ಗೌತಮ್ ಗಂಭೀರ್​ ನಡುವೆ ಸಮನ್ವಯತೆ ಇಲ್ಲ. ಶ್ರೀಲಂಕಾ, ಬಾಂಗ್ಲಾ, ನ್ಯೂಜಿಲೆಂಡ್ ಸರಣಿಯಲ್ಲೇ ಅವರಿಬ್ಬರ ಯೋಚನೆ ಒಂದೇ ರೀತಿಯಿಲ್ಲ ಅನ್ನೋದು ಸ್ಪಷ್ಟಪಡಿಸುತ್ತೆ. ದ್ರಾವಿಡ್ ಜೊತೆಗಿದಂತೆ ಗಂಭೀರ್ ಜೊತೆ ರೋಹಿತ್​ ಶರ್ಮಾ ಇಲ್ಲ. ಆಸ್ಟ್ರೇಲಿಯಾ ತಂಡದಲ್ಲಿ ಮೂವರು ಲೆಫ್ಟ್​ ಹ್ಯಾಂಡ್ ಬ್ಯಾಟರ್ಸ್ ಇದ್ದಾರೆ. ಇವರು ಯಾಕೆ ಸುಂದರ್ ಅಥವಾ ಅಶ್ವಿನ್​ನ ತೆಗೆದುಕೊಳ್ಳಲಿಲ್ಲ-ಬಸಿತ್ ಆಲಿ, ಪಾಕ್ ಮಾಜಿ ಕ್ರಿಕೆಟರ್

ರೋಹಿತ್​​​ ಒಂದು ತೀರ.. ಗೌತಿದೊಂದು ರಾಗ
ರೋಹಿತ್ ಮತ್ತು ಗಂಭೀರ್ ನಡೆ ನಾನೊಂದು ತೀರಾ. ನೀನೊಂದು ತೀರ ಎಂಬಂತಾಗಿದೆ. ಇದಕ್ಕೆ ಕಾರಣ ಇವರಿಬ್ಬರ ಮನಸ್ಥಿತಿಗಳ ನಡುವಿನ ವ್ಯತ್ಯಾಸಗಳು. ಸೆಲೆಕ್ಟರ್​ ಅಜಿತ್ ಅಗರ್ಕರ್​, ಆಸ್ಟ್ರೇಲಿಯನ್ ಕಂಡೀಷನ್ಸ್​ಗೆ ಅನುಗುಣವಾಗಿ ತಂಡವನ್ನು ಪ್ರಕಟಿಸಬೇಕು. ಇದನ್ಯಾವುದು ತಲೆಕೆಡಿಸಿಕೊಳ್ಳದ ಅಜಿತ್, ನ್ಯೂ ಪೇಸರ್​ ಹರ್ಷಿತ್ ರಾಣಾಗೆ ಮಣೆ ಹಾಕಿದ್ದಾರೆ. ಇದಕ್ಕೆ ಕಾರಣ ಕೋಚ್ ಗಂಭೀರ್ ಪ್ರಭಾವ ಎನ್ನಲಾಗ್ತಿದೆ.

ಇದನ್ನೂ ಓದಿ:ಭಿಕ್ಷೆ ಬೇಡೋದನ್ನೇ ವ್ಯಾವಹಾರಿಕ ಉದ್ಯಮವಾಗಿ ಬದಲಾಯಿಸಿದ ಪಾಕ್.. ಅರಬ್ ರಾಷ್ಟ್ರಗಳು ಎಚ್ಚರಿಕೆ

ಇದರಿಂದ ಸೆಲೆಕ್ಷನ್​ನಲ್ಲಿ ಕ್ಯಾಪ್ಟನ್ ರೋಹಿತ್ ಅಭಿಪ್ರಾಯಕ್ಕೆ ಮನ್ನಣೆ ಇಲ್ಲ ಅನ್ನೋದು ಸ್ಪಷ್ಟವಾಗಿದೆ. ಬಣ ರಾಜಕೀಯಕ್ಕೆ ಮತ್ತಷ್ಟು ನೀರು ಎರೆಯುವಂತೆ ಮಾಡಿದೆ. ರೋಹಿತ್ ಶರ್ಮಾ, ಗೌತಮ್ ಗಂಭೀರ್, ಅಜಿತ್ ಅಗರ್ಕರ್​​​ ನಡುವಿನ ಬಣ ರಾಜಕೀಯದಲ್ಲಿ ಟೀಮ್ ಇಂಡಿಯಾ ಸಾಲು ಸಾಲು ಅಪಮಾನಗಳನ್ನು ಎದುರಿಸುವಂತಾಗಿರುವುದು ಸುಳ್ಳಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment