ಏಕದಿನ, ಟಿ20 ಕ್ರಿಕೆಟ್​​ಗೆ ಗುಡ್​ಬೈ ಹೇಳಿದ ಟೀಂ ಇಂಡಿಯಾ ಸ್ಟಾರ್..!

author-image
Ganesh
Updated On
ಏಕದಿನ, ಟಿ20 ಕ್ರಿಕೆಟ್​​ಗೆ ಗುಡ್​ಬೈ ಹೇಳಿದ ಟೀಂ ಇಂಡಿಯಾ ಸ್ಟಾರ್..!
Advertisment
  • ಟೀಂ ಇಂಡಿಯಾಗೆ ಮತ್ತೊಂದು ಆಘಾತ
  • 2016ರಲ್ಲಿ ಟೀಂ ಇಂಡಿಯಾ ಜರ್ಸಿ ಪಡೆದಿದ್ದರು
  • 34 ವರ್ಷದ ಆಲ್ ರೌಂಡರ್ ಕ್ರಿಕೆಟ್​ಗೆ ವಿದಾಯ

ಟೀಂ ಇಂಡಿಯಾ ಆಲ್ ರೌಂಡರ್ ರಿಷಿ ಧವನ್ ಸೀಮಿತ ಓವರ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ವಿಜಯ್ ಹಾಜರೆ ಟ್ರೋಫಿಯ ಗುಂಪು ಹಂತದ ಪಂದ್ಯಗಳ ನಂತರ ಆಘಾತಕಾರಿ ನಿರ್ಧಾರ ತೆಗೆದುಕೊಂಡಿದ್ದಾರೆ.

34 ವರ್ಷದ ಆಲ್ ರೌಂಡರ್ ಇನ್ಮುಂದೆ ಏಕದಿನ ಮತ್ತು ಟಿ20 ಕ್ರಿಕೆಟ್ ಆಡುವುದಿಲ್ಲ. ದೇಶೀಯ ಕ್ರಿಕೆಟ್‌ನಲ್ಲಿ ಹಿಮಾಚಲ ಪ್ರದೇಶದ ಪರ ಆಡುತ್ತಿರುವ ರಿಷಿ ಧವನ್, ಭಾರತಕ್ಕಾಗಿ ಮೂರು ODI ಮತ್ತು ಒಂದು T20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 2016ರಲ್ಲಿ ಟೀಂ ಇಂಡಿಯಾಗೆ ಕಾಲಿಟ್ಟಿದ್ದರು. ಧವನ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಆಸ್ಟ್ರೇಲಿಯಾ ಪ್ರವಾಸದಿಂದ ಪ್ರಾರಂಭಿಸಿದರು.

ಇದನ್ನೂ ಓದಿ:ಚಹಾಲ್-ಧನಶ್ರೀ ಸಂಬಂಧದಲ್ಲಿ ಬಿರುಕಿಗೆ ಮೂರು ಕಾರಣಗಳು..!

ಇನ್ನು ಧವನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದಾರೆ. ರಣಜಿ ಟ್ರೋಫಿ 2024-25 ರ ಕೊನೆಯ ಎರಡು ಸುತ್ತುಗಳಲ್ಲಿ ಆಡಲಿದ್ದಾರೆ. ಧವನ್ ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ಅಪ್ರತಿಮ ಆಟಗಾರ. ಅವರು ದೇಶಿಯ ಕ್ರಿಕೆಟ್​ನಲ್ಲಿ ಒಟ್ಟು 9000 ರನ್ ಗಳಿಸಿದ್ದಾರೆ. 650ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ:ಬೆಂಗಳೂರಲ್ಲಿ 8 ತಿಂಗಳ ಮಗುವಿಗೆ HMPV ವೈರಸ್? ಆತಂಕ ಸೃಷ್ಟಿಸಿದ ಆರೋಗ್ಯ ಇಲಾಖೆ ಹೇಳಿಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment