ಕೊಹ್ಲಿ ಆಪ್ತನಿಗೆ ಜಾಕ್​ಪಾಟ್​​; ಚಾಂಪಿಯನ್ಸ್​ ಟ್ರೋಫಿ ತಂಡಕ್ಕೆ ಯುವ ಆಟಗಾರನ ಎಂಟ್ರಿ

author-image
Ganesh Nachikethu
Updated On
ಯುವ ಪ್ಲೇಯರ್​ಗೆ ಕೊಹ್ಲಿಯೇ ರೋಲ್ ಮಾಡೆಲ್.. ನಿತೀಶ್​ ಕುಮಾರ್ ರೋಚಕ ಕ್ರಿಕೆಟ್​ ಜರ್ನಿ ಹೇಗಿದೆ?
Advertisment
  • ಇಂಗ್ಲೆಂಡ್ T20 ಸರಣಿಗೂ ಆಲ್​ರೌಂಡರ್​​ ನಿತೀಶ್ ರೆಡ್ಡಿ ಆಯ್ಕೆ
  • ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಆಯ್ಕೆಯಾಗೋ ನಿರೀಕ್ಷೆಯಲ್ಲಿ NKR
  • ಸದ್ಯ ಟಾಕ್ ಆಫ್ ದ ಟೌನ್ ಆಗಿರುವ ಆಲ್​ರೌಂಡರ್ ನಿತೀಶ್

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಂತರ ನಿತೀಶ್ ಕುಮಾರ್ ರೆಡ್ಡಿ, ಮನೆ ಮನೆ ಮಾತಾಗಿದ್ದಾರೆ. ಕೊಹ್ಲಿ, ರೋಹಿತ್, ರಾಹುಲ್ ಮಾಡದ ದಾಖಲೆಯನ್ನ, ನಿತೀಶ್ ರೆಡ್ಡಿ ಆಸ್ಟ್ರೇಲಿಯಾದಲ್ಲಿ ಮಾಡಿದ್ದಾರೆ. ಸದ್ಯ ಟಾಕ್ ಆಫ್ ದ ಟೌನ್ ಆಗಿರುವ ಆಲ್​ರೌಂಡರ್ ನಿತೀಶ್, ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಆದ್ರೆ ಈ ಬಾರಿ ಆನ್​ಫೀಲ್ಡ್​ನಲ್ಲಿ ಮಾಡಿದ ದಾಖಲೆಯಿಂದಲ್ಲ..! ಆಫ್ ದ ಫೀಲ್ಡ್​ನಲ್ಲಿ ತಾನು ತೋರಿದ ಸರಳತೆ ಮತ್ತು ಭಕ್ತಿಗಾಗಿ..!

ಬಾರ್ಡರ್-ಗವಾಸ್ಕರ್ ಟೆಸ್ಟ್​ ಸರಣಿಯನ್ನ ಟೀಮ್ ಇಂಡಿಯಾ ಕೈಚೆಲ್ಲಿತು. ಆದ್ರೆ ಈ ಯುವಕನ ಆಲ್​ರೌಂಡ್ ಆಟ, ಕೋಟ್ಯಾನು ಕೋಟಿ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿತು.! ತನ್ನ ಮೇಲೆ ಇಟ್ಟ ನಂಬಿಕೆಯನ್ನ ಉಳಿಸಿಕೊಂಡ ಈ ಯಂಗ್ ಸೆನ್ಸೇಷನ್, ಟೀಮ್ ಇಂಡಿಯಾದ ಫ್ಯೂಚರ್ ಸ್ಟಾರ್ ಅಂತ ಗುರುತಿಸಿಕೊಂಡಿದ್ದಾನೆ. ಹೌದು..! ಬ್ಯಾಟಿಂಗ್, ಬೌಲಿಂಗ್​​ನಲ್ಲಿ ಕಾಂಗರೂಗಳಿಗೆ ಕಾಟ ಕೊಟ್ಟ 21 ವರ್ಷದ ಡೇರಿಂಗ್ ಌಂಡ್ ಡೈನಾಮಿಕ್ ಆಟಗಾರ ನಿತೀಶ್ ಕುಮಾರ್ ರೆಡ್ಡಿ, ಆಸ್ಟ್ರೇಲಿಯಾದಲ್ಲಿ ಇತಿಹಾಸ ನಿರ್ಮಿಸಿದ್ದಾನೆ.

ವೈಝಾಕ್​​​ನ ಕೂಲ್ ಌಂಡ್ ಕಾಮ್, ನಗುಮುಖದ ಯುವಕ, ಆಸ್ಟ್ರೇಲಿಯಾದಲ್ಲಿ ಕ್ಲಿಕ್ ಆಗಲ್ಲ ಅಂತ, ಕ್ರಿಕೆಟ್ ಪಂಡಿತರು ಭವಿಷ್ಯ ನುಡಿದಿದ್ರು. ಅನಾನುಭವಿ ಯುವಕ ಆಸ್ಟ್ರೇಲಿಯಾದಲ್ಲಿ ಏನ್ ಮಾಡ್ತಾನೆ..? ಕಾಂಗರೂಗಳ ನಾಡಲ್ಲಿ ಈ ಯುವಕನ ಕ್ರಿಕೆಟ್ ಭವಿಷ್ಯ ಅಂತ್ಯವಾಗುತ್ತೆ ಅಂತ, ಹೇಳಿದವರೇ ಹೆಚ್ಚು.! ಆದ್ರೆ ಆ ಯುವಕ ಎಲ್ಲರ ಲೆಕ್ಕಾಚಾರ ಉಲ್ಟಾಮಾಡಿದ. ಅಷ್ಟಕ್ಕೂ ಆಸ್ಟ್ರೇಲಿಯಾದಲ್ಲಿ ನಿತೀಶ್ ರೆಡ್ಡಿ ಸಕ್ಸಸ್​​ ಹಿಂದಿದ್ದಿದ್ದು ಯಾರು ಗೊತ್ತಾ..? ಸಾಕ್ಷಾತ್ ಆ ತಿರುಪತಿ ತಿಮ್ಮಪ್ಪ..!

ತಿಮ್ಮಪ್ಪನ ಪರಮ ಭಕ್ತಿ ನಿತೀಶ್ ಕುಮಾರ್ ರೆಡ್ಡಿ..!

ತಿಮ್ಮಪ್ಪನ ನಂಬಿದವರು ಕೆಟ್ಟಿಲ್ಲ.! ಗೋವಿಂದನನ್ನ ನೆನೆಸಿಕೊಂಡ್ರೆ, ಏಳು ಜನ್ಮದ ಪಾಪಗಳು ತೊಳೆದು ಹೋಗುತ್ತೆ. ಗೋವಿಂದ ಅಂದರೆ, ಕಷ್ಟಗಳೇ ಕರಗಿ ಹೋಗುತ್ತದೆ. ಕಲಿಯುಗದ ವೈಕುಂಠ ತಿರುಪತಿಗೆ ಭೇಟಿ ನೀಡಿದ್ರೆ, ಮನುಷ್ಯನ ಜನ್ಮ ಸಾರ್ಥಕವಾಗುತ್ತದೆ ಅಂತಾರೆ.! ಇವೆಲ್ಲವನ್ನೂ ಬಲವಾಗಿ ನಂಬಿರುವ ನಿತೀಶ್ ಕುಮಾರ್ ರೆಡ್ಡಿ, ತಿಮ್ಮಪ್ಪನ ಪರಮ ಭಕ್ತ.

ಮಂಡಿಯಲ್ಲಿ ಮೆಟ್ಟಿಲೇರಿ ತಿಮ್ಮಪ್ಪನಿಗೆ ಹರಕೆ ತೀರಿಸಿದ ನಿತೀಶ್..!

ವೆಂಕಟೇಶ್ವರನ ಭಕ್ತನಾಗಿರುವ ನಿತೀಶ್, ಆಸಿಸ್ ಪ್ರವಾಸಕ್ಕೂ ಮುನ್ನ ತಿಮ್ಮಪ್ಪನ ಸನ್ನಿಧಿಗೆ ಭೇಟಿ ನೀಡಿದ್ರು. ಪ್ರತಿ ವರ್ಷ ಅಥವಾ ತನಗೆ ಸಮಯ ಸಿಕ್ಕಾಗಲೆಲ್ಲ ನಿತೀಶ್, ತಿಮ್ಮಪ್ಪನ ದೇವಾಲಯಕ್ಕೆ ಭೇಟಿ ನೀಡ್ತಾರೆ. ಇದೀಗ ಬೇಡಿದ ವರವನ್ನ ಕೊಟ್ಟ ತಿಮ್ಮಪ್ಪನ ಹರಕೆಯನ್ನೂ, ತೀರಿಸಿದ್ದಾರೆ. ಮಂಡಿಯಲ್ಲಿ 3 ಸಾವಿರ ಮೆಟ್ಟಿಲೇರಿ ಬೆಟ್ಟ ಹತ್ತಿದ ನಿತೀಶ್, ಕಠಿಣ ವ್ರತ ಆಚರಿಸಿ ತಿಮ್ಮಪ್ಪನಿಗೆ ಸೇವೆ ಸಲ್ಲಿಸಿದ್ದಾರೆ.

ಕಷ್ಟದ ದಿನಗಳಲ್ಲಿ ನಿತೀಶ್ ಕೈಹಿಡಿದ್ದೇ ಈ ತಿಮ್ಮಪ್ಪ..!

ನಿತೀಶ್ ಕುಮಾರ್ ಕ್ರಿಕೆಟ್ ಕರಿಯರ್​ನ ಆರಂಭಿಕ ದಿನಗಳಲ್ಲಿ, ಸಾಕಷ್ಟು ಕಷ್ಟಗಳನ್ನ ಎದುರಿಸಿದ್ರು. ಇದು ಎಲ್ಲರಿಗೂ ಗೊತ್ತಿರೋ ವಿಚಾರ. ಕ್ರಿಕೆಟ್ ಕಿಟ್ ಕೊಂಡುಕೊಳ್ಳಲು ಪರದಾಡ್ತಿದ್ದ ಸಮಯದಲ್ಲೂ ನಿತೀಶ್, ತಾಳ್ಮೆ ಕಳೆದುಕೊಳ್ಳದೇ ತಿಮ್ಮಪ್ಪನನ್ನ ನಂಬಿದ್ದ. ಆ ತಿಮ್ಮಪ್ಪ, ನಂಬಿದವರ ಕೈ ಬಿಡಲ್ಲ. ಇದಕ್ಕೆ ನಿತೀಶ್ ಕುಮಾರ್ ರೆಡ್ಡಿನೇ, ಉದಾಹರಣೆ..!

ಇಂಗ್ಲೆಂಡ್ T20 ಸರಣಿಗೂ ನಿತೀಶ್ ರೆಡ್ಡಿ ಆಯ್ಕೆ..!

ಐಪಿಎಲ್ ಮತ್ತು ಆಸ್ಟ್ರೇಲಿಯಾ ಪ್ರವಾಸದಲ್ಲಿ ಸೂಪರ್​​ ಪರ್ಫಾಮೆನ್ಸ್​ ನೀಡಿದ್ದ ನಿತೀಶ್​​ಗೆ, ಬಿಸಿಸಿಐ ಬಾಸ್​​ಗಳು ರಿವಾರ್ಡ್​​ ನೀಡಿದ್ದಾರೆ. ನಿತೀಶ್ ಸಾಮರ್ಥ್ಯ ಮತ್ತು ಟ್ಯಾಲೆಂಟ್​​​​ ಗಮನಿಸಿ, ಜನವರಿ 22ರಂದು ತವರಿನಲ್ಲಿ ಇಂಗ್ಲೆಂಡ್​ ವಿರುದ್ಧ ನಡೆಯಲಿರೋ ಟಿ-ಟ್ವೆಂಟಿ ಸರಣಿಗೆ, ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಆಯ್ಕೆ ನಿರೀಕ್ಷೆಯಲ್ಲಿ NKR..!

ಟಿ-ಟ್ವೆಂಟಿ ಮತ್ತು ಟೆಸ್ಟ್ ಕ್ರಿಕೆಟ್​​ನಲ್ಲಿ ನಿತೀಶ್​ ರೆಡ್ಡಿ, ಪಾಸ್​ ಆಗಿದ್ದಾರೆ. ಆದ್ರೆ ನಿತೀಶ್ ಕನಸು, ಮೂರೂ ಫಾರ್ಮೆಟ್​ನಲ್ಲಿ ಟೀಮ್ ಇಂಡಿಯಾವನ್ನ ಪ್ರತಿನಿಧಿಸಬೇಕು ಅನ್ನೋದು. ಸದ್ಯ ಚಾಂಪಿಯನ್ಸ್​ ಟ್ರೋಫಿಗೆ ಟೀಮ್ ಇಂಡಿಯಾ ಆಯ್ಕೆ ಕಸರತ್ತು ನಡೆಯುತ್ತಿದೆ. ಮಿನಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬೇಕು ಅನ್ನೋದು, ನಿತೀಶ್ ಕನಸಾಗಿದೆ.

ಒಟ್ನಲ್ಲಿ..! ಸಕ್ಸಸ್ ಅನ್ನೋದು ತಲೆಗೇರಿದಾಗ, ನಡೆದು ಬಂದ ಹಾದಿ, ದೇವರು ಕಾಣೋದಿಲ್ಲ ಅಂತಾರೆ. ಆದ್ರೆ ಆಡಿದ ಒಂದೇ ಸರಣಿಯಲ್ಲಿ ಸೂಪರ್​ಸ್ಟಾರ್ ಎನಿಸಿಕೊಂಡಿರೋ ನಿತೀಶ್​, ಸಿಂಪ್ಲಿಸಿಟಿ ಮತ್ತು ಹಂಬಲ್​ನೆಸ್ ನೋಡಿ, ಕ್ರಿಕೆಟ್ ಅಭಿಮಾನಿಗಳು ವೈಝಾಕ್ ವೀರನಿಗೆ ಫಿದಾ ಆಗಿದ್ದಾರೆ.

ಇದನ್ನೂ ಓದಿ:ಟೀಮ್​ ಇಂಡಿಯಾ ಕ್ಯಾಪ್ಟನ್​​ಗೆ ಬಿಗ್​ ಶಾಕ್​​; ರೋಹಿತ್​ ಬದಲಿಗೆ ಸ್ಟಾರ್​​ ಕನ್ನಡಿಗನಿಗೆ BCCI ಮಣೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment