ಇಂಗ್ಲೆಂಡ್​​ ವಿರುದ್ಧ ಮಹತ್ವದ ಸೀರೀಸ್​​; ಟೀಮ್​ ಇಂಡಿಯಾಗೆ ಭರ್ಜರಿ ಗುಡ್​ನ್ಯೂಸ್​​

author-image
Ganesh Nachikethu
Updated On
2024ರ ಟಿ20 ವಿಶ್ವಕಪ್​​.. ಟೀಮ್​ ಇಂಡಿಯಾಗೆ ಬಂತು ಆನೆಬಲ!
Advertisment
  • ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಬೆನ್ನಲ್ಲೇ ಮಹತ್ವದ ಸೀರೀಸ್​​!
  • ಟೀಮ್​ ಇಂಡಿಯಾ ಮತ್ತು ಇಂಗ್ಲೆಂಡ್​​ ಮಧ್ಯೆ ಟಿ20, ಏಕದಿನ ಸರಣಿ
  • ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ, ಟಿ20 ಆಡಲಿರೋ ಭಾರತ

ಸದ್ಯ ಭಾರತ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ 5 ಪಂದ್ಯಗಳ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಆಡುತ್ತಿದೆ. ಈ ಮಹತ್ವದ ಸರಣಿಯಲ್ಲಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಪಡೆ 1-2 ರಿಂದ ಭಾರೀ ಹಿನ್ನಡೆ ಅನುಭವಿಸಿದೆ. ಟೆಸ್ಟ್​ ಸೀರೀಸ್​​ ಬಳಿಕ ಭಾರತ ಕ್ರಿಕೆಟ್​ ತಂಡ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಮತ್ತು ಟಿ20 ಸರಣಿ ಆಡಲಿದೆ.

ಸಿಡ್ನಿ ಟೆಸ್ಟ್​ ನಂತರ ಟೀಮ್​ ಇಂಡಿಯಾ, ಇಂಗ್ಲೆಂಡ್ ಮುಖಾಮುಖಿ ಆಗಲಿವೆ. ಅದರಲ್ಲೂ ಮೊದಲು 5 ಟಿ20 ಪಂದ್ಯಗಳ ಸರಣಿ ಆಡಲಿದೆ. ನಂತರ ಉಭಯ ತಂಡಗಳ ನಡುವೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಮುಂದಿನ ವರ್ಷ ನಡೆಯಲಿರೋ ಚಾಂಪಿಯನ್ಸ್‌ ಟ್ರೋಫಿ ದೃಷ್ಟಿಯಿಂದ ಈ ಸರಣಿ ಎರಡು ತಂಡಗಳಿಗೂ ಬಹಳ ಮಹತ್ವದ್ದಾಗಿದೆ. ಇದರ ಮಧ್ಯೆ ಏಕದಿನ ಮತ್ತು ಟಿ20 ಸರಣಿಗೆ ವೇಳಾಪಟ್ಟಿ ಪ್ರಕಟ ಆಗಿದೆ.

ಟಿ20 ಯಾವಾಗ?

ಇಂಗ್ಲೆಂಡ್​​ ತಂಡ ಮುಂದಿನ ವರ್ಷ ಭಾರತ ಪ್ರವಾಸ ಕೈಗೊಳ್ಳಲಿದೆ. ಉಭಯ ತಂಡಗಳ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಜನವರಿ 22ನೇ ತಾರೀಕು ನಡೆಯಲಿದೆ. 2ನೇ ಪಂದ್ಯ ಜನವರಿ 25ರಂದು ಮತ್ತು 3ನೇ ಪಂದ್ಯ ಜನವರಿ 28 ರಂದು, 4ನೇ ಪಂದ್ಯ ಜನವರಿ 31ರಂದು, 5ನೇ ಪಂದ್ಯ ಫೆಬ್ರವರಿ 2ರಂದು ನಡೆಯಲಿದೆ.

ಏಕದಿನ ಸರಣಿ ಯಾವಾಗ?

ಇನ್ನು, ಏಕದಿನ ಸರಣಿ ಫೆಬ್ರವರಿ 6 ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ನಾಗ್ಪುರ ಸ್ಟೇಡಿಯಮ್​ನಲ್ಲಿ ನಡೆಯಲಿದೆ. 2ನೇ ಏಕದಿನ ಪಂದ್ಯ ಫೆಬ್ರವರಿ 9 ರಂದು, 3ನೇ ಏಕದಿನ ಪಂದ್ಯ ಫೆಬ್ರವರಿ 12ರಂದು ನಡೆಯಲಿದೆ. ಇದಾದ ಬಳಿಕ ಟೀಮ್​ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಅಖಾಡ ಪ್ರವೇಶಿಸಲಿದೆ.

ಇದನ್ನೂ ಓದಿ:ಟೀಮ್​​ ಇಂಡಿಯಾಗೆ ಹೀನಾಯ ಸೋಲು; ಮುಖ್ಯ ಕೋಚ್​ ಸ್ಥಾನದಿಂದ ಗಂಭೀರ್​ ಔಟ್​​?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment