ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್​​; ನ್ಯೂಜಿಲೆಂಡ್​ ವಿರುದ್ಧ ಬಲಿಷ್ಠ ಟೀಮ್​ ಇಂಡಿಯಾ ಕಣಕ್ಕೆ!

author-image
Ganesh Nachikethu
Updated On
ಚಾಂಪಿಯನ್ಸ್​ ಟ್ರೋಫಿ ಸೆಮಿಫೈನಲ್​​; ಭಾರತ ಯಾವ ತಂಡದ ವಿರುದ್ಧ ಆಡಿದರೆ ಹೆಚ್ಚು ಲಾಭ?
Advertisment
  • ಬಹುನಿರೀಕ್ಷಿತ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್​​​
  • ಬ್ಯಾಕ್​ ಟು ಬ್ಯಾಕ್​ 2 ಪಂದ್ಯ ಗೆದ್ದು ಭಾರತ ತಂಡ ಸೆಮೀಸ್​ಗೆ ಎಂಟ್ರಿ
  • ಭಾರತವನ್ನು ಸೋಲಿಸಿ ಸೆಮೀಸ್​ಗೆ ಕಾಲಿಡಲು ನ್ಯೂಜಿಲೆಂಡ್​​​ ತಯಾರಿ

ಬಹುನಿರೀಕ್ಷಿತ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್​ ಇಂಡಿಯಾ ತನ್ನ ಗೆಲುವಿನ ನಾಗಲೋಟ ಮುಂದುವರಿಸಿದೆ. ಲೀಗ್ ಹಂತದಲ್ಲಿ ಬ್ಯಾಕ್​ ಟು ಬ್ಯಾಕ್​ 2 ಪಂದ್ಯ ಗೆದ್ದಿರೋ ಟೀಮ್​​ ಇಂಡಿಯಾ ಸೆಮಿಫೈನಲ್​​ಗೆ ಲಗ್ಗೆ ಇಟ್ಟಿದೆ.

ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 5 ವಿಕೆಟ್​​ಗಳಿಂದ ಗೆದ್ದು ಬೀಗಿದ್ದ ಕ್ಯಾಪ್ಟನ್​ ರೋಹಿತ್​ ಶರ್ಮಾ ಪಾಕ್​​ ವಿರುದ್ಧ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ಲೀಗ್ ಹಂತದ ಕೊನೆಯ ಪಂದ್ಯ ನ್ಯೂಜಿಲೆಂಡ್ ವಿರುದ್ಧ ಆಡಲಿರೋ ಭಾರತ ಗೆಲ್ಲುವ ಮೂಲಕ ಪಾಯಿಂಟ್​ ಟೇಬಲ್​​ನಲ್ಲಿ ಅಗ್ರಸ್ಥಾನಕ್ಕೇರುವ ಇರಾದೆಯಲ್ಲಿದೆ.

ಸೆಮಿಫೈನಲ್​​ನಲ್ಲಿ ಯಾರ ಮಧ್ಯೆ ಪೈಪೋಟಿ?

ಇತ್ತ ನ್ಯೂಜಿಲೆಂಡ್ ಕೂಡ ಭಾರತ ತಂಡವನ್ನು ಸೋಲಿಸಿ ಸೆಮೀಸ್​ಗೆ ಕಾಲಿಡಲು ತಯಾರಿ ನಡೆಸಿದೆ. ಲೀಗ್​ ಹಂತದ ಕೊನೆಯ ಪಂದ್ಯದಲ್ಲೂ ಇದೇ ತಂಡಗಳು ಮುಖಾಮುಖಿ ಆಗುತ್ತಿವೆ. ಇದರ ಬೆನ್ನಲ್ಲೇ ಮಾರ್ಚ್​​​ 2ರಂದು ನಡೆಯಲಿರೋ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್​​ ಪಂದ್ಯದಲ್ಲೂ ಭಾರತ, ನ್ಯೂಜಿಲೆಂಡ್​ ಸೆಣಸಾಟ ನಡೆಸಲಿವೆ.

ಪಂದ್ಯ ನಡೆಯೋದು ಎಲ್ಲಿ?

ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್​ ಪಂದ್ಯ ದುಬೈ ಇಂಟರ್​​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2.30ಕ್ಕೆ ನಡೆಯಲಿದೆ. ಇದಕ್ಕೂ ಅರ್ಧ ಗಂಟೆ ಮುಂಚಿತವಾಗಿ ಅಂದರೆ ಮಧ್ಯಾಹ್ನ 2 ಗಂಟೆಗೆ ಟಾಸ್​ ಆಗಲಿದೆ. ಸೆಮಿಫೈನಲ್​​ ಪಂದ್ಯದ ನೇರ ಪ್ರಸಾರ ಜಿಯೋ ಹಾಟ್‌ಸ್ಟಾರ್‌ನಲ್ಲಿ ನೋಡಬಹುದು.

ಭಾರತ ತಂಡ ಹೀಗಿದೆ!

ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ

ಇದನ್ನೂ ಓದಿ:ಕೂಲ್​ ಡ್ರಿಂಕ್ಸ್ ಕುಡಿಯೋರಿಗೆ ಬಿಗ್​ ಶಾಕ್​​​​​​; ಕ್ಯಾನ್ಸರ್​ ಎಚ್ಚರಿಕೆ ಕೊಟ್ಟ WHO; ಓದಲೇಬೇಕಾದ ಸ್ಟೋರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment