ಆಸ್ಟ್ರೇಲಿಯಾ ವಿರುದ್ಧ ಮಹತ್ವದ ಟೆಸ್ಟ್​; ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ; ಸ್ಟಾರ್​ ಆಟಗಾರರಿಗೆ ಕೊಕ್

author-image
Ganesh Nachikethu
Updated On
ಟೀಮ್​ ಇಂಡಿಯಾಗೆ ಬಿಗ್​ ಶಾಕ್; R ಅಶ್ವಿನ್​ ಬೆನ್ನಲ್ಲೇ ದಿಢೀರ್​​ ನಿವೃತ್ತಿ ಘೋಷಿಸಿದ ಸ್ಟಾರ್​ ಕ್ರಿಕೆಟರ್
Advertisment
  • ಬಾರ್ಡರ್-ಗವಾಸ್ಕರ್ ಟ್ರೋಫಿಯ 4 ಮತ್ತು 5ನೇ ಟೆಸ್ಟ್‌ ಪಂದ್ಯ!
  • ಆಸ್ಟ್ರೇಲಿಯಾ ವಿರುದ್ಧ ನಡೆಯಲಿರೋ ಟೆಸ್ಟ್​​ಗಳು ಮಹತ್ವದಾಗಿದೆ
  • ಕೊನೆಯ 2 ಟೆಸ್ಟ್ ಪಂದ್ಯ​ಗಳಿಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ

ಆಸ್ಟ್ರೇಲಿಯಾ ವಿರುದ್ಧ ನಡೆಯಲಿರೋ ಬಾರ್ಡರ್-ಗವಾಸ್ಕರ್ ಟ್ರೋಫಿಯ 4 ಮತ್ತು 5ನೇ ಟೆಸ್ಟ್‌ ಪಂದ್ಯಗಳಿಗೆ ಬಲಿಷ್ಠ ಭಾರತ ತಂಡ ಪ್ರಕಟವಾಗಿದೆ. ಇತ್ತೀಚೆಗೆ ನಡೆದ 3ನೇ ಟೆಸ್ಟ್​ ಪಂದ್ಯ ಡ್ರಾ ಆಗಿದ್ದು, ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ 1-1ರಲ್ಲಿ ಸಮಗೊಂಡಿದೆ.

ಇನ್ನು, ಟೀಮ್​ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಕೊನೆಯ 2 ಟೆಸ್ಟ್ ಪಂದ್ಯಗಳು ಮೆಲ್ಬೋರ್ನ್‌ ಹಾಗೂ ಸಿಡ್ನಿಯಲ್ಲಿ ನಡೆಯಲಿವೆ. ಈ 2 ಟೆಸ್ಟ್ ಪಂದ್ಯಗಳಿಗಾಗಿ ಸ್ಟಾರ್​ ಆಲ್​ರೌಂಡರ್​​​ ರವಿಚಂದ್ರನ್​ ಅಶ್ವಿನ್​ ಅವರ ಜಾಗಕ್ಕೆ ಯುವ ಸ್ಪಿನ್ನರ್​​​ ಟೀಮ್​ ಇಂಡಿಯಾಗೆ ಎಂಟ್ರಿ ನೀಡಿದ್ದಾರೆ.

4 ಮತ್ತು 5ನೇ ಟೆಸ್ಟ್​ ಪಂದ್ಯ ಗೆಲ್ಲಲೇಬೇಕು

ಮೆಲ್ಬೋರ್ನ್‌ ಹಾಗು ಸಿಡ್ನಿ ಟೆಸ್ಟ್ ಪಂದ್ಯಗಳು ಮಹತ್ವದಾಗಿವೆ. ಹೇಗಾದ್ರೂ ಮಾಡಿ ಟೀಮ್​ ಇಂಡಿಯಾ ಎರಡು ಟೆಸ್ಟ್​ ಪಂದ್ಯಗಳು ಗೆಲ್ಲಲೇಬೇಕಿದೆ. ದೇಶೀಯ ಪ್ರತಿಭೆ 26 ವರ್ಷದ ಆಲ್​ರೌಂಡರ್ ತನುಷ್ ಕೋಟ್ಯಾನ್​ಗೆ ಟೀಮ್​ ಇಂಡಿಯಾ ಪರ ಟೆಸ್ಟ್​ ಕ್ರಿಕೆಟ್​ ಆಡುವ ಅವಕಾಶ ಸಿಕ್ಕಿದೆ.

ಅಕ್ಷರ್ ಪಟೇಲ್‌ಗೆ ತಪ್ಪಿದ ಅವಕಾಶ

ಸ್ಟಾರ್ ಆಲ್​ರೌಂಡರ್​ ಅಕ್ಷರ್ ಪಟೇಲ್ ತಮ್ಮ ಪ್ರದರ್ಶನದಿಂದಲೇ ಟೀಮ್​ ಇಂಡಿಯಾ ಗಮನ ಸೆಳೆದವರು. ಇತ್ತೀಚೆಗೆ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ರು. ಅಶ್ವಿನ್​​ ಜಾಗಕ್ಕೆ ಅಕ್ಷರ್​ ಪಟೇಲ್​​ ಬರಬಹುದು ಎಂದು ವರದಿಯಾಗಿತ್ತು. ಕೌಟುಂಬಿಕ ಕಾರಣದಿಂದ ಅಕ್ಷರ್ ಪಟೇಲ್ ವಿಜಯ್ ಹಜಾರೆ ಟ್ರೋಫಿಯ ಮೊದಲ 2 ಪಂದ್ಯಗಳ ನಂತರ ಬ್ರೇಕ್​ ತೆಗೆದುಕೊಂಡಿದ್ದರು. ಹೀಗಾಗಿ ತನುಷ್ ಕೋಟ್ಯಾನ್ ಅವರಿಗೆ ಅವಕಾಶ ಲಭಿಸಿದೆ.

4-5ನೇ ಟೆಸ್ಟ್‌ಗೆ ಭಾರತ ತಂಡ ಪ್ರಕಟ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ದೇವದತ್ ಪಡಿಕ್ಕಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಬ್ ಪಂತ್, ಧ್ರುವ್ ಜುರೆಲ್, ರವೀಂದ್ರ ಜಡೇಜಾ, ನಿತೀಶ್‌ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಹರ್ಷಿತ್ ಸುಂದರ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ತನುಷ್ ಕೋಟ್ಯಾನ್, ಪ್ರಸಿದ್ಧ್ ಕೃಷ್ಣ.

ಇದನ್ನೂ ಓದಿ:ಆರ್​​ಸಿಬಿ ಸೇರಿದ ಬೆನ್ನಲ್ಲೇ ಫಿಲ್​ ಸಾಲ್ಟ್​ಗೆ ಸುವರ್ಣಾವಕಾಶ; ಸ್ಟಾರ್​ ಆಟಗಾರನಿಗೆ ದೊಡ್ಡ ಲಾಟರಿ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment