/newsfirstlive-kannada/media/post_attachments/wp-content/uploads/2025/01/Team-India-11.jpg)
ಇಂದು ರಾಜ್​​ಕೋಟ್​​​ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ಟೀಮ್​ ಇಂಡಿಯಾ, ಇಂಗ್ಲೆಂಡ್ ನಡುವೆ 3ನೇ ಮಹತ್ವದ ಟಿ20 ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಟಾಸ್​ ಗೆದ್ದ ಟೀಮ್​ ಇಂಡಿಯಾ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಇಂಗ್ಲೆಂಡ್​ ಫಸ್ಟ್​ ಬ್ಯಾಟಿಂಗ್​ ಮಾಡಲಿದೆ.
3ನೇ ಪಂದ್ಯ ಗೆದ್ದು ಸೀರೀಸ್​​ ವಶಪಡಿಸಿಕೊಳ್ಳೋ ವಿಶ್ವಾಸದಲ್ಲಿ ಟೀಮ್​​ ಇಂಡಿಯಾ ಇದೆ. ಟಾಸ್​ ಗೆದ್ದ ಟೀಮ್​ ಇಂಡಿಯಾ ಪ್ಲೇಯಿಂಗ್​ ಎಲೆವೆನ್​​​ ಘೋಷಣೆ ಮಾಡಿದೆ. ಈ ತಂಡದಲ್ಲಿ ಸ್ಟಾರ್​ ಆಟಗಾರರಿಗೆ ಕೊಕ್​ ನೀಡಲಾಗಿದೆ. 400 ದಿನಗಳ ಬಳಿಕ ಟೀಮ್​ ಇಂಡಿಯಾ ಪರ ಟಿ20 ತಂಡದಲ್ಲಿ ಮೊಹಮ್ಮದ್​ ಶಮಿ ಕಣಕ್ಕಿಳಿಯುತ್ತಿದ್ದಾರೆ.
ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಮತ್ತು ವಿಕೆಟ್​ ಟೇಕರ್​ ಅರ್ಷದೀಪ್​ ಸಿಂಗ್​. ಇವರಿಗೆ ತಂಡದಿಂದ ಕೊಕ್​ ನೀಡಲಾಗಿದೆ. ಇವರ ಜಾಗಕ್ಕೆ ಮೊಹಮ್ಮದ್​ ಶಮಿ ಬಂದಿದ್ದಾರೆ. ಇದರ ಹೊರತಾಗಿ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ.
ಭಾರತ ತಂಡದ ಪ್ಲೇಯಿಂಗ್​​ ಎಲೆವೆನ್​ ಹೀಗಿದೆ!
ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಧೃವ್​​ ಜುರೆಲ್​, ಅಕ್ಷರ್ ಪಟೇಲ್ (ಉಪನಾಯಕ), ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us