newsfirstkannada.com

ಭಾರತ ತಂಡದ ಜೋಡೆತ್ತು ಅಶ್ವಿನ್​, ಜಡೇಜಾ ಸ್ಥಾನ ತುಂಬುವ ಯಂಗ್ ಪ್ಲೇಯರ್ಸ್​ ಯಾರು?

Share :

Published June 15, 2023 at 10:11am

Update June 15, 2023 at 10:26am

    ಟೆಸ್ಟ್​ ಕ್ರಿಕೆಟ್​ನಲ್ಲಿ ಈ ಇಬ್ಬರಿಗೆ ಸರಿಸಮಾನ ಆಟಗಾರರಿಲ್ಲ

    ಇವರ ನಂತರ ಭಾರತ ತಂಡಕ್ಕೆ ಕಾಡಲಿದೆ ಸ್ಪಿನ್ನರ್ಸ್ ಕೊರತೆ

    ಆಶ್ವಿನ್​, ಜಡೇಜಾರಂತಹ ಆಟಗಾರರು ತಂಡಕ್ಕೆ ಸಿಗುತ್ತಾರಾ?

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಮುಗಿದಿದೆ. ಮುಂದಿನ ವೆಸ್ಟ್ ಇಂಡೀಸ್​ ಟೂರ್​​ಗೆ ಸಿದ್ಧತೆ ಜೋರಾಗಿಯೇ ನಡೆಸುತ್ತಿದೆ. ಆದ್ರೆ, ಈ ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಹೊಸ ಮುಖಗಳಿಗೆ ಮಣೆ ಹಾಕೋ ಚರ್ಚೆ ನಡೆಯುತ್ತಿದೆ. ಆದ್ರೆ, ಈ ಜೋಡೆತ್ತಿಗೆ ಮಾತ್ರ, ಪಱಯ ಆಟಗಾರರೇ ಇಲ್ಲ.

ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ ಸೋತಿದ್ದೇ ತಡ, ಟೀಂ ಇಂಡಿಯಾದಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ಕೆಲ ಸೀನಿಯರ್ಸ್ ಕೊಕ್ ನೀಡಿ ಹೊಸ ಮುಖಗಳಿಗೆ ಮಣೆ ಹಾಕೋಕೆ ಬಿಸಿಸಿಐ ಮುಂದಾಗಿದೆ. ಬ್ಯಾಟರ್​ಗಳಿಂದ ಹಿಡಿದು ಬೌಲರ್​ಗಳ ತನಕ ಸರ್ಜರಿ ಮಾಡೋಕೆ ಮುಂದಾಗಿರೋ ಬಿಸಿಸಿಐಗೆ ಈ ಇಬ್ಬರ ಪಱಯ ಇದ್ದಾರಾ ಅನ್ನೋದನ್ನ ಮನಗಾಣಬೇಕಾದ ಇಕ್ಕಟ್ಟಿಗೆ ಸಿಲುಕಿದೆ. ಅಂದ್ಹಾಗೆ ಆ ಇಬ್ಬರು ಬೇಱರು ಅಲ್ಲ. ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್.. ಮತ್ತೊಬ್ಬರು ರವೀಂದ್ರ ಜಡೇಜಾ.

ರವೀಂದ್ರ ಜಡೇಜಾ ಆ್ಯಂಡ್ ಅಶ್ವಿನ್​. ಕ್ವಾಲಿಟಿ ಸ್ಪಿನ್ನರ್​​ಗಳೇ ಅಲ್ಲ, ಒನ್​ ಆಫ್ ದಿ ರೇರೆಸ್ಟ್​ ಸ್ಪಿನ್​​ ಕಾಂಬಿನೇಷನ್​. ಕೆಲ ವರ್ಷಗಳಿಂದ ಟೀಂ ಇಂಡಿಯಾ ಸಕ್ಸಸ್​ನ ಭಾಗವಾಗಿರೋ ಇವರಿಬ್ಬರು ನಿಜಕ್ಕೂ ತಂಡದ ಜೋಡೆತ್ತುಗಳು. ಆದ್ರೆ, ಭವಿಷ್ಯದ ಟೀಂ ಕಟ್ಟೋಕೆ ಬಿಸಿಸಿಐ ಹೊರಟಿದೆ. ಹೀಗಾಗಿ ಈ ಸ್ಪಿನ್ ಟ್ವಿನ್ಸ್​ಗೆ ಪರ್ಯಾಯ ಯಾರು? ಎಂಬ ಪ್ರಶ್ನೆ ಸಹಜವಾಗೇ ಉದ್ಬವಗೊಂಡಿದೆ.

2012ರಿಂದ ಟೀಂ ಇಂಡಿಯಾದಲ್ಲಿ ಇವರದ್ದೇ ಹವಾ..!

2012ರಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧ ನಾಗ್ಪುರ ಟೆಸ್ಟ್​ನಲ್ಲಿ ಜೊತೆಯಾದ ಈ ಇಬ್ಬರು ಅಂದು ನಿಜಕ್ಕೂ ಟೀಮ್ ಇಂಡಿಯಾ ಪರ 11 ವರ್ಷಗಳ ಕಾಲ ಜೊತೆಯಾಗಿ ಆಡ್ತಾರೆ ಅನ್ನೋ ನಿರೀಕ್ಷೆಯೇ ಇರಲಿಲ್ಲ. ಡ್ರಾನಲ್ಲಿ ಮುಕ್ತಾಯವಾಗಿದ್ದ ಆ ಟೆಸ್ಟ್​ನಲ್ಲಿ ಅಶ್ವಿನ್, ಬ್ಯಾಟಿಂಗ್​ನಲ್ಲಿ ಝಲಕ್ ತೋರಿಸಿದ್ರೆ. ಜಡೇಜಾ ಬೌಲಿಂಗ್​ನಲ್ಲಿ ಜಾದೂ ಮಾಡಿದ್ದರು. ಆದ್ರೆ, ಅಂದು ಜೊತೆಯಾದ ಈ ಲೆಫ್ಟಿ, ರೈಟಿ ಕಾಂಬಿನೇಷನ್, ಇಂದಿನ ತನಕ ಮುಂದುವರಿದೆ. ಇದಕ್ಕೆ ಕಾರಣ ಇವರಿಬ್ಬರ ಆಟ.

ಟೀಂ ಇಂಡಿಯಾ ಹಲವು ದಿಗ್ಗಜ ಸ್ಪಿನ್ನರ್​ಗಳನ್ನ ನೋಡಿದೆ. ಆದ್ರೆ, ಸ್ಪಿನ್​ ಟ್ವಿನ್ಸ್ ಆಗಿ ನಮ್ಮ ಕಣ್ಣಿಗೆ ಕಾಣೋದು ಮಾತ್ರ, ಎರಡೇ ಎರಡು ಜೋಡಿಯನ್ನ. ಆ ಪೈಕಿ ಮೊದಲಿಗೆ ಅನಿಲ್ ಕುಂಬ್ಳೆ-ಹರ್ಭಜನ್ ಜೋಡಿ. ಈ ಬಳಿಕ ಅಶ್ವಿನ್ ಹಾಗೂ ಜಡೇಜಾ ಜೋಡಿ. ನಿಜಕ್ಕೂ ದಿಗ್ಗಜರ ಅನುಪಸ್ಥಿತಿ ಕಾಡದಂತೆ ನೋಡಿಕೊಂಡ ಇವರು ಸ್ವದೇಶದಲ್ಲಿ ಮಾತ್ರವಲ್ಲ. ವಿದೇಶದಲ್ಲೂ ಸಾಲಿಡ್ ರೆಕಾರ್ಡ್​ ಹೊಂದಿದ್ದಾರೆ. ಟೆಸ್ಟ್​ ಮಾತ್ರವಲ್ಲದೆ, ಏಕದಿನ, ಟಿ20ಯಲ್ಲೂ ಇವರು ಮೂಡಿಸಿದ್ದ ಈ ಜೋಡಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ಪಱಯ ಸ್ಪಿನ್ನರ್​ಗಳು ದೇಶಿ ಕ್ರಿಕೆಟ್​ನಲ್ಲಿ ನಿಜಕ್ಕೂ ಇದ್ದಾರಾ ಅಂದ್ರೆ, ಉತ್ತರ ಇಲ್ಲದ ಪ್ರಶ್ನೆಯಾಗಿದೆ.

ಇವರ ನಿವೃತ್ತಿ ಬಳಿಕ ಭಾರತಕ್ಕೆ ಆಸರೆ ಯಾರು..?

ಸದ್ಯ ಜಡೇಜಾ ಹಾಗೂ ಅಶ್ವಿನ್ ಕ್ವಾಲಿಟಿ ಸ್ಪಿನ್ನರ್ಸ್ ಅನ್ನೋದು ಗೊತ್ತೇ ಇದೆ. ಆದ್ರೆ, 34 ವರ್ಷದ ಜಡೇಜಾ, 36 ವರ್ಷದ ಆಶ್ವಿನ್ ನಿವೃತ್ತಿ ಅಂಚಿನಲ್ಲಿ ಇದ್ದಾರೆ. ಒಂದು ವೇಳೆ ನಿವೃತ್ತಿಗೊಂಡರೆ ವಿದೇಶದಲ್ಲಿ ಟೀಂ ಇಂಡಿಯಾಗೆ ಆಸರೆ ನಿಜಕ್ಕೂ ಕಾಡೋದು ಕನ್ಫರ್ಮ್. ಈ ಬಗ್ಗೆ ಮಾತನಾಡಿದ ಮಾಜಿ ಕ್ರಿಕೆಟರ್, ಕ್ರೀಡಾ ವಿಶ್ಲೇಷಕರಾದ ಶ್ರೀನಿವಾಸಮೂರ್ತಿ, ಕ್ವಾಲಿಟಿ ಆ್ಯಂಡ್ ವಿಕೆಟ್ ಟೇಕಿಂಗ್ ಸ್ಪಿನ್ನರ್​ಗಳ ಮರೀಚಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಕ್ವಾಲಿಟಿ ಸ್ಪಿನ್ನರ್​ಗಳ ಕೊರತೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಶ್ರೀನಿವಾಸಮೂರ್ತಿ ಅವರು, ಇದೇ ವೇಳೆ ಬಿಸಿಸಿಐಗೆ ಮಹತ್ವದ ಸಲಹೆ ನೀಡಿದ್ದಾರೆ. ಸದ್ಯಕ್ಕೆ ಕೆಲ ಸ್ಪಿನ್ನರ್​ಗಳು ಫ್ಯೂಚರ್ ಸ್ಟಾರ್​ಗಳಾಗೂ ನಿರೀಕ್ಷೆ ಮೂಡಿಸಿದ್ದಾರೆ ನಿಜ. ಆದ್ರೆ, ಇವರು ವೈಟ್​ಬಾಲ್ ಫಾರ್ಮೆಟ್​ಗೆ ಮಾತ್ರವೇ ಸಿಮೀತವಾಗಿದ್ದಾರೆ. ಹೀಗಾಗಿ ಕ್ವಾಲಿಟಿ ಸ್ಪಿನ್ನರ್​ಗಳನ್ನ ಹಂಟ್ ಮಾಡುವತ್ತ ಬಿಸಿಸಿಐ ನಿಜಕ್ಕೂ ಗಮನ ಹರಿಸಲೇಬೇಕಿದೆ.

ಅದೇನೇ ಆಗಲಿ, ಜಡೇಜಾ ಹಾಗೂ ಅಶ್ವಿನ್, ಟೆಸ್ಟ್ ಕ್ರಿಕೆಟ್​ನಿಂದ​​​​ ನಿರ್ಗಮನದ ಬಳಿಕ ಟೀಂ ಇಂಡಿಯಾ ಪರಿಸ್ಥಿತಿ ಏನು..? ನಿಜಕ್ಕೂ ಉತ್ತರ ಇಲ್ಲದ ಪ್ರಶ್ನೆ ಅನ್ನೋದರಲ್ಲಿ ಎರಡು ಮಾತಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಭಾರತ ತಂಡದ ಜೋಡೆತ್ತು ಅಶ್ವಿನ್​, ಜಡೇಜಾ ಸ್ಥಾನ ತುಂಬುವ ಯಂಗ್ ಪ್ಲೇಯರ್ಸ್​ ಯಾರು?

https://newsfirstlive.com/wp-content/uploads/2023/06/Jadeja-3.jpg

Load More