4,4,4,4,4,4,4,4,4,4,4,4,4,4,4,4; ಟೀಮ್​ ಇಂಡಿಯಾದ ಯುವ ಬ್ಯಾಟರ್​​ ಭರ್ಜರಿ ಶತಕ!

author-image
Ganesh Nachikethu
Updated On
4,4,4,4,4,4,4,4,4,4,4,4,4,4,4,4; ಟೀಮ್​ ಇಂಡಿಯಾದ ಯುವ ಬ್ಯಾಟರ್​​ ಭರ್ಜರಿ ಶತಕ!
Advertisment
  • ಇರಾನಿ ಕಪ್​​ನಲ್ಲಿ ಟೀಮ್​ ಇಂಡಿಯಾ ಯುವ ಬ್ಯಾಟರ್​ ಆರ್ಭಟ
  • ಅಮೋಘ ಶತಕ ಸಿಡಿಸಿದ ಯುವ ಬ್ಯಾಟರ್​ ಅಭಿಮನ್ಯು ಈಶ್ವರನ್​​​
  • ಮುಂಬೈ ತಂಡಕ್ಕೆ ರೆಸ್ಟ್​ ಆಫ್​​ ಇಂಡಿಯಾ ಪರ ಪ್ರತ್ಯುತ್ತರ ನೀಡಿದ್ರು!

ಟೀಮ್​ ಇಂಡಿಯಾದ ಯುವ ಬ್ಯಾಟರ್ ಅಭಿಮನ್ಯು ಈಶ್ವರನ್​ ಇರಾನಿ ಕಪ್​​ನಲ್ಲಿ ಅಮೋಘ ಶತಕ ಸಿಡಿಸಿದ್ರು. ಮುಂಬೈ ವಿರುದ್ಧದ ಮಹತ್ವದ ಪಂದ್ಯದಲ್ಲಿ ರೆಸ್ಟ್​ ಆಫ್​ ಇಂಡಿಯಾ ಪರ ಬ್ಯಾಟ್​ ಬೀಸಿದ ಅಭಿಮನ್ಯು ಎದುರಾಳಿಗಳಿಗೆ ಪ್ರತ್ಯುತ್ತರ ನೀಡಿದ್ರು.

ಮುಂಬೈ ತಂಡ 3ನೇ ದಿನದ ಆರಂಭಕ್ಕೆ 536 ರನ್​ ಗಳಿಸಿ ಆಲೌಟ್​ ಆಗಿದೆ. ತಂಡದ ಪರ ಸರ್ಫರಾಜ್ ಖಾನ್ 286 ಎಸೆತಗಳಲ್ಲಿ 25 ಬೌಂಡರಿ, 4 ಸಿಕ್ಸರ್ ನೆರವಿನಿಂದ ಅಜೇಯ 222 ರನ್‌ ಕಲೆ ಹಾಕಿದ್ರು.

ಇನ್ನು, ಮೊದಲ ಇನ್ನಿಂಗ್ಸ್​ನಲ್ಲೇ 536 ರನ್​ಗಳ ಬೃಹತ್​ ಗುರಿಯನ್ನು ಬೆನ್ನತ್ತಿದ ರೆಸ್ಟ್‌ ಆಫ್‌ ಇಂಡಿಯಾ ತಂಡ ದಿನದಾಟದ ಮುಕ್ತಾಯಕ್ಕೆ 4 ವಿಕೆಟ್‌ಗೆ 289 ರನ್‌ ಕಲೆ ಹಾಕಿದೆ. ರೆಸ್ಟ್ ಆಫ್‌ ಇಂಡಿಯಾ ತಂಡದ ಪರ ಇನಿಂಗ್ಸ್ ಆರಂಭಿಸಿದ ಕ್ಯಾಪ್ಟನ್​ ರುತುರಾಜ್ ಗಾಯಕ್ವಾಡ್‌ ಕೇವಲ 9 ರನ್​ಗೆ ವಿಕೆಟ್​ ಒಪ್ಪಿಸಿದ್ರು.

ಅಭಿಮನ್ಯು ಭರ್ಜರಿ ಶತಕ

ರೆಸ್ಟ್‌ ಆಫ್‌ ಇಂಡಿಯಾ ತಂಡದ ಪರ ಓಪನರ್​ ಆಗಿ ಬಂದ ಅಭಿಮನ್ಯು ಈಶ್ವರನ್‌ ಅಮೋಘ ಬ್ಯಾಟಿಂಗ್​ ಮಾಡಿದ್ರು. ಇವರು ಎದುರಿಸಿದ 292 ಎಸೆತಗಳಲ್ಲಿ ಬರೋಬ್ಬರಿ 191 ರನ್​ ಚಚ್ಚಿದ್ರು. ಬ್ಯಾಕ್​ ಟು ಬ್ಯಾಕ್​ 16 ಫೋರ್​​, 1 ಸಿಕ್ಸರ್​ ಸಿಡಿಸಿದ್ರು. ಈ ಮೂಲಕ ಬಿಸಿಸಿಐ ಸೆಲೆಕ್ಷನ್​ ಕಮಿಟಿ ಗಮನ ಸೆಳೆದರು. ಮುಂದಿನ ಟೆಸ್ಟ್​​ ಸೀರೀಸ್​ಗೆ ಟೀಮ್​ ಇಂಡಿಯಾಗೆ ಆಯ್ಕೆ ಮಾಡಿ ಎಂದು ಸೂಚನೆ ಕೊಟ್ರು.

ಕೊನೆಗೆ ರೆಸ್ಟ್‌ ಆಫ್‌ ಇಂಡಿಯಾ ತಂಡ 110 ಓವರ್​ನಲ್ಲಿ 416 ರನ್​ಗಳಿಗೆ ಆಲೌಟ್​ ಆಗಿದೆ. ಮುಂಬೈ ತಂಡ 2ನೇ ಇನ್ನಿಂಗ್ಸ್​ ಶುರು ಮಾಡಿದ್ದು, 274 ರನ್​​ಗಳ ಮುನ್ನಡೆ ಕಾಯ್ದುಕೊಂಡಿದೆ.

ಇದನ್ನೂ ಓದಿ: ಸಂಬಳ ಕೊಟ್ಟಿಲ್ಲ ಎಂದು ಕ್ಯಾಪ್ಟನ್ಸಿಗೆ ರಾಜೀನಾಮೆ ಕೊಟ್ಟ ಬಾಬರ್​; ಶಾಕ್​ ಆದ ಪಾಕಿಸ್ತಾನ ಟೀಮ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment