/newsfirstlive-kannada/media/post_attachments/wp-content/uploads/2025/01/Abhishek-Sharma_-News.jpg)
ಸದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆಯುತ್ತಿರೋ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಬ್ಯಾಟರ್ ಅಭಿಷೇಕ್ ಶರ್ಮಾ ಅಬ್ಬರಿಸಿದ್ರು. ಕೇವಲ 20 ಬಾಲ್ನಲ್ಲಿ ವೇಗದ ಅರ್ಧಶತಕ ಸಿಡಿಸಿ ದಾಖಲೆ ಬರೆದರು.
ಯುವರಾಜ್ ಸಿಂಗ್ ಬಳಿಕ ಇಂಗ್ಲೆಂಡ್ ವಿರುದ್ಧ ವೇಗದ ಅರ್ಧಶತಕ ಗಳಿಸಿದ ಏಕೈಕ ಬ್ಯಾಟರ್ ಅಭಿಷೇಕ್ ಶರ್ಮಾ. ಟೀಮ್ ಇಂಡಿಯಾ ಪರ ಓಪನರ್ ಆಗಿ ಬ್ಯಾಟ್ ಮಾಡಲು ಬಂದ ಅಭಿಷೇಕ್ ಶರ್ಮಾ ಸಿಡಿದರು.
20 ಬಾಲ್ನಲ್ಲಿ ಅರ್ಧಶತಕ
ಆರಂಭದಿಂದಲೇ ಅಬ್ಬರಿಸಿದ ಅಭಿಷೇಕ್ ಶರ್ಮಾ ಎದುರಾಳಿ ಬೌಲರ್ಗಳ ಬೆವರಿಳಿಸಿದರು. ಕೇವಲ 20 ಬಾಲ್ನಲ್ಲಿ ಅರ್ಧಶತಕ ಸಿಡಿಸಿದರು. ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಬರೋಬ್ಬರಿ 250ಕ್ಕೂ ಹೆಚ್ಚಿತ್ತು. 6 ಭರ್ಜರಿ ಸಿಕ್ಸರ್, 3 ಫೋರ್ ಚಚ್ಚಿದ್ರು.
ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಕೇವಲ 132 ರನ್‌ಗಳಿಗೆ ಆಲೌಟ್ ಆಗಿದೆ. ನಾಯಕ ಜೋಸ್ ಬಟ್ಲರ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ಆಡಿದ 44 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಾಯದಿಂದ 68 ರನ್ ಬಾರಿಸಿದ್ರು. ಇಂಗ್ಲೆಂಡ್ 20 ಓವರ್‌ಗಳಲ್ಲಿ 132 ರನ್‌ಗಳಿಗೆ ಆಲೌಟ್ ಆಯಿತು.
ಇದನ್ನೂ ಓದಿ:ಕೈ ಕೊಟ್ಟ ಆರ್ಸಿಬಿ ಬ್ಯಾಟರ್ಗಳು; ಟೀಮ್ ಇಂಡಿಯಾ ವಿರುದ್ಧ ಇಂಗ್ಲೆಂಡ್ 132 ರನ್ಗೆ ಆಲೌಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ