/newsfirstlive-kannada/media/post_attachments/wp-content/uploads/2024/06/VIRAT-KOHLI-15.jpg)
ರಣರೋಚಕ ಟಿ20 ವಿಶ್ವಕಪ್ನ ಫೈನಲ್ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದು ಬೀಗಿದ್ದು, ಚಾಂಪಿಯನ್ ಆಗಿ ಹೊರಹೊಮ್ಮಿದೆ. ಲಾಸ್ಟ್ ಬಾಲ್ವರೆಗೂ ತೀವ್ರ ರೋಚಕತೆಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ 7 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ 17 ವರ್ಷಗಳ ಬಳಿಕ ಎರಡನೇ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡು, ಸತತ 11 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಕನಸನ್ನು ನನಸು ಮಾಡಿಕೊಂಡಿದೆ.
ಮೊದಲ ಓವರ್ನಲ್ಲೇ ವಿರಾಟ ದರ್ಶನ
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾಗೆ ಮೊದಲ ಓವರ್ನಲ್ಲೇ ಸಾಲಿಡ್ ಸ್ಟಾರ್ಟ್ ಸಿಕ್ತು. ಮೊದಲ ಓವರ್ನಲ್ಲೇ ಮೂರು ಬೌಂಡರಿ ಬಾರಿಸಿದ ವಿರಾಟ್, ವೀರಾವೇಶದ ಪ್ರದರ್ಶನ ನೀಡುವ ಮುನ್ಸೂಚನೆ ನೀಡಿದರು. ಅತ್ತ ರೆಡ್ ಹಾಟ್ ಫಾರ್ಮ್ನಲ್ಲಿದ್ದ ರೋಹಿತ್, 2ನೇ ಓವರ್ನ ಮೊದಲೆರೆಡು ಬಾಲ್ಗಳಲ್ಲೇ ಬೌಂಡರಿ ಬಾರಿಸಿ ಬಿಗ್ ಇನ್ನಿಂಗ್ಸ್ ಕಟ್ಟೋ ಲೆಕ್ಕಚಾರದಲ್ಲಿದ್ದರು. ಆದರೆ 4ನೇ ಎಸೆತದಲ್ಲೇ ಕ್ಯಾಚ್ ನೀಡಿದ ರೋಹಿತ್, 9 ರನ್ಗೆ ನಿರ್ಗಮಿಸಿ ನಿರಾಸೆ ಮೂಡಿಸಿದ್ರೆ, ಈ ಬೆನ್ನಲ್ಲೇ ಕ್ರೀಸ್ಗೆ ಬಂದ ಪಂತ್, ಬಂದಷ್ಟೇ ವೇಗವಾಗಿ ಹಿಂತಿರುಗಿದರು.
ಇದನ್ನೂ ಓದಿ:ವಿಶ್ವಕಪ್ ಗೆಲ್ಲಿಸಿಕೊಟ್ಟು ವಿದಾಯ.. 31 ತಿಂಗಳು, ಅಮೂಲಾಗ್ರ ಬದಲಾವಣೆ.. ಕನ್ನಡದ ಕಣ್ಮಣಿಗೆ ಬಿಗ್ ಸೆಲ್ಯೂಟ್..!
ಫೈನಲ್ನಲ್ಲಿ ಪ್ರಜ್ವಲಿಸಲಿಲ್ಲ ಸೂರ್ಯ
ಏಕದಿನ ವಿಶ್ವಕಪ್ ಫೈನಲ್ಸ್ನಲ್ಲಿ ಭಾರೀ ನಿರಾಸೆ ಮೂಡಿಸಿದ್ದ ಸೂರ್ಯ, ಟಿ20 ವಿಶ್ವಕಪ್ನ ಫೈನಲ್ಸ್ನಲ್ಲಿ ಪ್ರಜ್ವಲಿಸುವ ನಿರೀಕ್ಷೆ ಇತ್ತು. 3 ರನ್ಗಳಿಗೆ ವಿಕೆಟ್ ಒಪ್ಪಿಸಿದ ಸೂರ್ಯ ಎಲ್ಲರ ನಿರೀಕ್ಷೆ ಹುಸಿಯಾಗಿಸಿದರು.
4ನೇ ವಿಕೆಟ್ಗೆ ಕೊಹ್ಲಿ-ಅಕ್ಷರ್ ಜುಗಲ್ಬಂದಿ
34 ರನ್ಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ವಿರಾಟ್ ಜೊತೆಗೂಡಿದ ಅಕ್ಷರ್ ಪಟೇಲ್, 4ನೇ ವಿಕೆಟ್ಗೆ ಅದ್ಬುತ ಇನ್ನಿಂಗ್ಸ್ ಕಟ್ಟಿದ್ರು. 72 ರನ್‌ಗಳ ಜೊತೆಯಾಟವಾಡಿದ ಈ ಜೋಡಿ ಟೀಮ್ ಇಂಡಿಯಾವನ್ನು ಸಂಕಷ್ಟದಿಂದ ಪಾರು ಮಾಡಿದರು. 31 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್ ಒಳಗೊಂಡ 47 ರನ್ ಸಿಡಿಸಿದ್ದ ಅಕ್ಷರ್, ರನೌಟ್ಗೆ ಬಲಿಯಾದರು.
ಇದನ್ನೂ ಓದಿ:ಕಣ್ಣಲ್ಲಿ ನೀರು ಮತ್ತು ವಿಜಯದ ಸಂಭ್ರಮ.. ಹೇಗಿತ್ತು ಟೀಂ ಇಂಡಿಯಾ ಆಟಗಾರರ ಗೆಲುವಿನ ಸಂಭ್ರಮ..! Photos
ಕಿಂಗ್ ಕೊಹ್ಲಿ ಫಿಫ್ಟಿ.. ಫ್ಯಾನ್ಸ್ ಬಹುಪರಾಕ್
ಹೈಫ್ರೆಷರ್ ಗೇಮ್ನಲ್ಲಿ ಕ್ಲಾಸಿ ಇನ್ನಿಂಗ್ಸ್ ಕಟ್ಟಿದ ವಿರಾಟ್, 47 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಅಷ್ಟೇ ಅಲ್ಲ. ದುಬೆ ಜೊತೆ 5ನೇ ವಿಕೆಟ್ಗೆ 57 ರನ್‌ಗಳ ಜೊತೆಯಾಟವಾಡಿದರು. ಈ ವೇಳೆ ರನ್ ಗಳಿಕೆಯ ವೇಗ ಹೆಚ್ಚಿಸಿದ ಕೊಹ್ಲಿ, 59 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಒಳಗೊಂಡ 76 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು.
ದುಬೆ 27 ರನ್.. ಹರಿಣಗಳಿಗೆ ಸ್ಪರ್ಧಾತ್ಮಕ ಟಾರ್ಗೆಟ್..!
3 ಬೌಂಡರಿ, 1 ಸಿಕ್ಸರ್ ಒಳಗೊಂಡ 27 ರನ್ ಸಿಡಿಸಿದ ಶಿವಂ ದುಬೆ, ಆಟ ಮುಗಿಸಿದರು. ಕೊನೆಯಲ್ಲಿ ಬಂದ ಹಾರ್ದಿಕ್, 2 ಎಸೆತಕ್ಕೆ ಅಜೇಯ 5 ರನ್, ಜಡೇಜಾ 2 ರನ್ ಗಳಿಸಿದರು. ಇದರೊಂದಿಗೆ ನಿಗದಿತ 20 ಓವರ್ಗಳಲ್ಲಿ ಟೀಮ್ ಇಂಡಿಯಾ 7 ವಿಕೆಟ್ ನಷ್ಟಕ್ಕೆ 176 ರನ್ ದಾಖಲಿಸಿತು. ಆ ಮೂಲಕ ಸೌತ್ ಆಫ್ರಿಕಾಗೆ ಸ್ಪರ್ಧಾತ್ಮಕ ಟಾರ್ಗೆಟ್ ನೀಡುವಲ್ಲಿ ಯಶಸ್ವಿಯಾಯ್ತು.
ಇದನ್ನೂ ಓದಿ:‘ನೀನೇ ನಾಯಕ..’ ಹಾರ್ದಿಕ್ ಪಾಂಡ್ಯರನ್ನು ತಬ್ಬಿ ಮುತ್ತಿಟ್ಟು ಕಣ್ಣೀರು ಇಟ್ಟ ರೋಹಿತ್ ಶರ್ಮಾ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್