ಈ ಐದು ಸವಾಲು ಮೆಟ್ಟಿ ನಿಂತ್ರೆ ಟೀಂ ಇಂಡಿಯಾ ಸೇಫ್.. ಇಲ್ಲದಿದ್ರೆ ಕನಸು ಭಗ್ನ..!

author-image
Ganesh
Updated On
2ನೇ ಟೆಸ್ಟ್​ನಲ್ಲಿ 4 ಬದಲಾವಣೆ ಫಿಕ್ಸ್..! ಯಾರಿಕೆ ಕೊಕ್? ಪ್ಲೇಯಿಂಗ್-11ನಲ್ಲಿ ಯಾರಿಗೆಲ್ಲ ಅವಕಾಶ..?
Advertisment
  • ಭಾರತ, ಇಂಗ್ಲೆಂಡ್ 4ನೇ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ
  • ಶುಭ್​ಮನ್ ಪಡೆ ಮುಂದೆ ಸಾಲು ಸಾಲು ಸವಾಲು
  • ಮ್ಯಾಂಚೆಸ್ಟರ್​ನಲ್ಲಿ ಗೆಲುವು ಸುಲಭ ಇಲ್ಲ, ಯಾಕೆ?

4ನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜಾಗಿದೆ. ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಶುಭ್​ಮನ್ ಗಿಲ್ ಪಡೆ ಮುಂದೆ ಸಾಲು ಸಾಲು ಸವಾಲುಗಳಿವೆ. ಈ ಸವಾಲುಗಳನ್ನ ಮೆಟ್ಟಿನಿಂತರಷ್ಟೇ ಟೀಮ್ ಇಂಡಿಯಾ ಸೇಫ್​. ಇಲ್ಲ ಕನಸು ಭಗ್ನ!

ಹೆಡಿಂಗ್ಲೆಯಲ್ಲಿ ಸೋಲು, ಎಡ್ಜ್​ಬಾಸ್ಟನ್​ನಲ್ಲಿ ಐತಿಹಾಸಿಕ ಗೆಲುವು. ಕ್ರಿಕೆಟ್ ಕಾಶಿ ಲಾರ್ಡ್ಸ್​ನಲ್ಲಿ ಅನಿರೀಕ್ಷಿತ ಸೋಲು. ಈಗ ಮಿಷಲ್ ಮ್ಯಾಂಚೆಸ್ಟರ್ ಸವಾಲು, ಇಲ್ಲಿ ಗೆಲ್ಲಲು ಟೀಮ್ ಇಂಡಿಯಾ ಸಜ್ಜಾಗಿದೆ. ಈ ಮೈದಾನದಲ್ಲಿ ಗೆಲುವನ್ನೇ ಕಾಣದ ಟೀಮ್ ಇಂಡಿಯಾ ಚೊಚ್ಚಲ ಟೆಸ್ಟ್ ಗೆದ್ದು ಐತಿಹಾಸಿಕ ಸಾಧನೆ ಮಾಡುವ ಕನಸಿನಲ್ಲಿದೆ. ಈ ಕನಸು ನನಸಾಗಬೇಕಾದ್ರೆ ಟೀಮ್ ಇಂಡಿಯಾ 5 ಸವಾಲುಗಳನ್ನು ಮೆಟ್ಟಿನಿಲ್ಲಬೇಕಿದೆ.

ಇದನ್ನೂ ಓದಿ: ಕ್ರಿಕೆಟರ್​ ಶ್ರೀಶಾಂತ್ ಮಗಳು ನೆನಪಾದಾಗಲೆಲ್ಲಾ ಹೃದಯ ಛಿದ್ರ ಆಗುತ್ತೆ.. ಭಜ್ಜಿ ಪಶ್ಚಾತಾಪ..!

publive-image

ನಂಬರ್ 1: ಸ್ವಿಂಗ್ ಮತ್ತು ಸೀಮ್ ಕಂಡೀಷನ್

ಈ ಹಿಂದಿನ ಮೂರು ಪಂದ್ಯಗಳೇ ಪಿಚ್​​, ಕಂಡೀಷನ್ಸ್​ ಭಿನ್ನವಾದ್ರೆ ಮ್ಯಾಂಚೆಸ್ಟರ್​ನ ಓಲ್ಡ್​ ಟ್ರಾಫರ್ಡ್​ ಪಿಚ್​ ಮತ್ತಷ್ಟು ವಿಭಿನ್ನ. ಪೇಸ್​, ಬೌನ್ಸ್​ಗೆ ಆಫರ್ ನೀಡುವ ಈ ಪಿಚ್​, ಟೀಮ್ ಇಂಡಿಯಾ ಬ್ಯಾಟ್ಸ್​ಮನ್​​ಗಳ ಪಾಲಿಗೆ ಅಗ್ನಿಪರೀಕ್ಷೆಯ ಕಣ. ಪಂದ್ಯದ ನಡುವೆ ಮಳೆಬರುವ ಸಾಧ್ಯತೆ ಇದೆ. ಇದು ಸೀಮರ್​​ಗಳಿಗೆ ಬಿಗ್ ಅಡ್ವಾಂಟೇಜ್​ ಆಗುವುದರಲ್ಲಿ ಡೌಟಿಲ್ಲ.

ನಂಬರ್ 2: ಡೇಂಜರಸ್ ಜೋಫ್ರಾ ಆರ್ಚರ್​​​​​

ಫಾಸ್ಟ್​ ಅಂಡ್ ಫ್ಯೂರಿಯಸ್ ಜೋಫ್ರಾ ಆರ್ಚರ್. ಲಾರ್ಡ್ಸ್​ ಟೆಸ್ಟ್​ನಲ್ಲಿ ಟೀಮ್ ಇಂಡಿಯಾಗೆ ಕಾಡಿದ್ದ ಆರ್ಚರ್​, ಓಲ್ಡ್​ ಟ್ರಾಫರ್ಡ್​ ಸೀಮಿಂಗ್ ಕಂಡೀಷನ್ಸ್​ನಲ್ಲಿ ವಿಲನ್ ಆಗುವುದು ಫಿಕ್ಸ್. ಹೀಗಾಗಿ ಜೋಫ್ರಾ ಆರ್ಚರ್​ ಎಫೆಕ್ಟೀವ್ ಬೌಲಿಂಗ್ ಎದುರು ಎಚ್ಚರಿಕೆಯ ಆಟವಾಡಬೇಕಿದೆ. ಟೀಮ್ ಇಂಡಿಯಾ ಹೆಡೆಮುರಿ ಕಟ್ಟಬೇಕಾಗುತ್ತೆ.

ನಂಬರ್​​.3: ಬ್ಯಾಟ್ಸ್​ಮನ್ಸ್​ ತೋರಿಸಬೇಕು ತಾಳ್ಮೆ

ಮ್ಯಾಂಚೆಸ್ಟರ್​​ನ ಓಲ್ಡ್​ ಟ್ರಾಫರ್ಡ್​ನಲ್ಲಿ ಟೀಮ್ ಇಂಡಿಯಾ ಗೆಲ್ಲಬೇಕಾದ್ರೆ, ಬ್ಯಾಟ್ಸ್​ಮನ್​​ಗಳ ಪಾತ್ರವೇ ಅತಿಮುಖ್ಯ. ಹೆಚ್ಚುವರಿ ಸ್ವಿಂಗ್ ಅಂಡ್ ಸೀಮ್​ ಇರುವುದರಿಂದ ಬ್ಯಾಟ್ಸ್​ಮನ್ಸ್​ ತಾಳ್ಮೆ ತೋರಬೇಕಿದೆ. ಪ್ರಮುಖವಾಗಿ ಟಫ್ ಕಂಡೀಷನ್ಸ್​ನಲ್ಲಿ ಕೈಕೊಡುವ ಯಶಸ್ವಿ ಜೈಸ್ವಾಲ್, ಗಿಲ್ ಈ ಪಿಚ್​ನಲ್ಲಿ ತಾಳ್ಮೆ ತೋರದಿದ್ರೆ ಕೊಲಾಪ್ಸ್​ ಆಗೋದ್ರಲ್ಲಿ ಡೌಟಿಲ್ಲ.

ಇದನ್ನೂ ಓದಿ: ಇವತ್ತಿನಿಂದ ಧರ್ಮಸ್ಥಳ ಕೇಸ್​ನ ಅಸಲಿ ರಹಸ್ಯ ಹುಡುಕಾಟ.. SITಗೆ ಹೆಚ್ಚುವರಿಯಾಗಿ 20 ಅಧಿಕಾರಿಗಳ ನೇಮಕ

publive-image

ನಂಬರ್​​.4: ಟಾಸ್ ಗೆಲ್ಲೋದು ಇಂಪಾರ್ಟೆಂಟ್

ಟಾಸ್​ ಗೆದ್ದವನೇ ಬಾಸ್​​​. ತಂಡಗಳ ಗೆಲುವು ನಿರ್ಣಯಿಸುವುದೇ ಟಾಸ್. ಹೀಗಾಗಿ ಮ್ಯಾಂಚೆಸ್ಟರ್​ ಮ್ಯಾಚ್​ ಗೆಲ್ಲಬೇಕಾದ್ರೆ ಟೀಮ್ ಇಂಡಿಯಾ ಟಾಸ್ ಗೆಲ್ಲೋದು ಬಹುಮುಖ್ಯ. ಟೆಸ್ಟ್​ನ ಮೊದಲ ದಿನ ಬೌಲಿಂಗ್​ಗೆ​​ ಹೆಚ್ಚೆಚ್ಚು ಅಡ್ವಾಂಟೇಜ್ ಇರುತ್ತದೆ. ಬ್ಯಾಟ್ಸ್​ಮನ್​​ಗಳ ಪೆವಿಲಿಯನ್ ಪರೇಡ್ ನಡೆಯುತ್ತೆ. ಹೀಗಾಗಿ ಟಾಸ್ ಗೆದ್ದ ಟೀಮ್ ಇಂಡಿಯಾ ಫೀಲ್ಡಿಂಗ್​ನ ಆಯ್ದುಕೊಳ್ಳಬೇಕು. ಆ ಮೂಲಕ ಇಂಗ್ಲೆಂಡ್​ ಬ್ಯಾಟರ್​​ಗಳಿಗೆ ಕಾಟ ನೀಡಬೇಕು.

ನಂಬರ್​​.5: ಡು ಆರ್​ ಡೈ ಮ್ಯಾಚ್..

ಇದು ಟೀಮ್ ಇಂಡಿಯಾಗೆ ಡು ಆರ್​ ಡೈ ಮ್ಯಾಚ್​. ಸರಣಿಯಲ್ಲಿ ಹಿನ್ನಡೆ ಅನುಭವಿಸಿರುವ ಟೀಮ್ ಇಂಡಿಯಾ ಸರಣಿ ಜೀವಂತವಾಗಿರಿಸಿಕೊಳ್ಳಬೇಕಾದ್ರೆ ಮ್ಯಾಂಚೆಸ್ಟರ್​ ಮ್ಯಾಚ್​ ಗೆಲ್ಲಲೇಬೇಕಿದೆ. ಇಲ್ಲದಿದ್ರೆ ಸರಣಿ ಕೈಚೆಲ್ಲಬೇಕಾಗುತ್ತೆ. ಹೀಗಾಗಿ ಡು ಆರ್​ ಡೈ ಮ್ಯಾಚ್​​ನಲ್ಲಿ ಕೆಚ್ಚೆದೆಯ ಹೋರಾಟ ನಡೆಸಬೇಕಿದೆ. ಕೆಲವರನ್ನಷ್ಟೇ ನಂಬಿಕೊಳ್ಳದೆ, ಪ್ರತಿ ಆಟಗಾರ ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ಹೊರಗಾಕಬೇಕು. ಹಿಂದಿನ ರೆಕಾರ್ಡ್ಸ್​ ಅಲ್ಲದಿದ್ದರೂ ಎಡ್ಜ್​​ಬಾಸ್ಟನ್​​ ಗೆಲುವನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು ಮ್ಯಾಂಚೆಸ್ಟರ್​ನಲ್ಲಿ ಐತಿಹಾಸಿಕ ಸಾಧನೆ ಮಾಡಬೇಕಿದೆ.

ಮ್ಯಾಂಚೆಸ್ಟರ್​ನ ಇತಿಹಾಸ ಏನೇ ಹೇಳಲಿ, ಕಂಡೀಷನ್ಸ್​ ಟೀಮ್ ಇಂಡಿಯಾ ಪಾಲಿಗೆ ವಿರುದ್ಧವೇ ಆಗಿರಲಿ ಒಗ್ಗಟ್ಟಿನ ಆಟವಾಡಿದ್ರೆ ಗೆಲ್ಲೋದು ಕಷ್ಟವೇನಲ್ಲ.

ಇದನ್ನೂ ಓದಿ: ಅಂದು ಅಮ್ಮನಿಗೆ ಅವಮಾನ ಮಾಡಿದ್ದಕ್ಕೆ ಸೇಡು.. 10 ವರ್ಷ ಕಾಲ ಹುಡುಕಿ ಹೊಡೆದ ಮಗ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment