newsfirstkannada.com

ಶ್ರೇಯಸ್​ ಅಯ್ಯರ್​​ಗೆ ಬಿಗ್​ ಶಾಕ್​​​ ಕೊಟ್ಟ ಮುಖ್ಯ ಕೋಚ್​​​ ಗಂಭೀರ್​​; ಸ್ಟಾರ್​ ಬ್ಯಾಟರ್​ ಕಥೆ ಮುಗೀತಾ?

Share :

Published September 6, 2024 at 3:52pm

Update September 6, 2024 at 4:03pm

    ಇತ್ತೀಚೆಗಷ್ಟೇ ಟೀಮ್​ ಇಂಡಿಯಾಗೆ ಕಮ್​ಬ್ಯಾಕ್​ ಮಾಡಿದ್ದ ಸ್ಟಾರ್​ ಪ್ಲೇಯರ್​​

    ಮುಂಬರುವ ಟೆಸ್ಟ್​ ಸರಣಿಗೆ ಆಯ್ಕೆಯಾಗುವ ಕನಸು ಕಂಡಿದ್ದ ಸ್ಟಾರ್​ ಬ್ಯಾಟರ್​​

    ಬಿಸಿಸಿಐನಿಂದಲೇ ಟೀಮ್​ ಇಂಡಿಯಾ ಸ್ಟಾರ್​ ಆಟಗಾರನಿಗೆ ದೊಡ್ಡ ಆಘಾತ!

ಸೀಮಿತ ಓವರ್‌ಗಳ ತಂಡಕ್ಕೆ ಇತ್ತೀಚೆಗಷ್ಟೇ ಶ್ರೇಯಸ್ ಅಯ್ಯರ್​ ಕಮ್​ಬ್ಯಾಕ್​ ಮಾಡಿದ್ದರು. ಮುಂಬರುವ ಟೆಸ್ಟ್​ ಸೀರೀಸ್​ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಶ್ರೇಯಸ್​ ಅಯ್ಯರ್​​ ಕನಸು ಕಾಣುತ್ತಿದ್ದರು. ಹಾಗಾಗಿ ದೇಶೀಯ ಕ್ರಿಕೆಟ್ ದುಲೀಪ್ ಟ್ರೋಫಿಯಲ್ಲಿ ರನ್‌ ಕಲೆ ಹಾಕಿ ಬಿಸಿಸಿಐ ಸೆಲೆಕ್ಷನ್​ ಕಮಿಟಿ ಗಮನ ಸೆಳೆಯೋ ಪ್ಲಾನ್​ ಮಾಡಿಕೊಂಡಿದ್ದರು ಶ್ರೇಯಸ್​​. ಈಗ ದೇಶೀಯ ಕ್ರಿಕೆಟ್​ ಟೂರ್ನಿಯಲ್ಲಿ ಶ್ರೇಯಸ್​ ಅಯ್ಯರ್​​​ ರನ್​ ಕಲೆ ಹಾಕುವಲ್ಲಿ ಫೇಲ್ಯೂರ್​ ಆಗಿದ್ದಾರೆ.

ಕೇಂದ್ರ ಗುತ್ತಿಗೆಯಿಂದ ಹೊರಗುಳಿದಿದ್ದ ಅಯ್ಯರ್ ಶ್ರೀಲಂಕಾ ಪ್ರವಾಸದಲ್ಲಿ ಟೀಮ್ ಇಂಡಿಯಾಗೆ ಮರಳಿದ್ದರು. ಆದರೆ, ಕಮ್​ಬ್ಯಾಕ್​​ ಮಾಡಿದ ನಂತರ ಟೀಮ್​ ಇಂಡಿಯಾದ ಸ್ಪೆಷಲ್​ ಆಗಿ ಏನು ಮಾಡಲು ಆಗಿರಲಿಲ್ಲ. ಈಗ ದುಲೀಪ್ ಟ್ರೋಫಿಯಲ್ಲಿ ಆಡುತ್ತಿರೋ ಅಯ್ಯರ್​​ ಮೊದಲ ಪಂದ್ಯದಲ್ಲೇ ನಿರಾಸೆ ಮೂಡಿಸಿದ್ದಾರೆ. ಭಾರತ ಡಿ ತಂಡದ ನಾಯಕ ಶ್ರೇಯಸ್ ಅಯ್ಯರ್ ಕೇವಲ 9 ರನ್ ಗಳಿಸಿ ವಿಕೆಟ್​ ಒಪ್ಪಿಸಿದ್ದಾರೆ.

ಬಾಂಗ್ಲಾ ವಿರುದ್ಧ ಟೆಸ್ಟ್​ ತಂಡಕ್ಕೆ ಶ್ರೇಯಸ್​ ಅಯ್ಯರ್​ ಆಯ್ಕೆ ಡೌಟ್​​!

ದೇಶೀಯ ಕ್ರಿಕೆಟ್​ನಲ್ಲಿ ಕಳಪೆ ಪ್ರದರ್ಶನ ನೀಡಿರುವ ಅಯ್ಯರ್​​ ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಟೆಸ್ಟ್‌ ಸರಣಿಗೆ ಆಯ್ಕೆ ಆಗುವುದು ಡೌಟ್​ ಆಗಿದೆ. ಹಾಗಾಗಿ ಇವರು ಭಾರತ ಟೆಸ್ಟ್​ ಕ್ರಿಕೆಟ್​ ತಂಡಕ್ಕೆ ಪ್ರವೇಶ ಮಾಡಬೇಕು ಅನ್ನೋ ಕನಸು ಕೈ ಬಿಡಬೇಕಾಗಿದೆ.

ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಟೆಸ್ಟ್‌ ಸರಣಿಗೆ ಇನ್ನು ತಂಡ ಪ್ರಕಟಿಸಿಲ್ಲ. ಇದೇ ತಿಂಗಳು 2ನೇ ವಾರದಲ್ಲಿ ಬಿಸಿಸಿಐ ಆಯ್ಕೆ ಸಮಿತಿ ತಂಡವನ್ನು ಪ್ರಕಟಿಸಲಿದೆ. ಈ ತಂಡದಲ್ಲಿ ಸ್ಥಾನ ಪಡೆಯುವ ಕನಸು ಕಂಡಿದ್ದ ಶ್ರೇಯಸ್‌ ಅಯ್ಯರ್​ಗೆ ಇದು ಬಿಗ್​ ಶಾಕ್​ ಆಗಿದೆ. ಟೀಮ್​ ಇಂಡಿಯಾದ ಮುಖ್ಯ ಕೋಚ್​​ ಗೌತಮ್​ ಗಂಭೀರ್​ ಅವರೇ ಅಯ್ಯರ್​ಗೆ ತಂಡದಿಂದ ಕೊಕ್​ ನೀಡುವ ಸಾಧ್ಯತೆ ಹೆಚ್ಚಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಶ್ರೇಯಸ್​ ಅಯ್ಯರ್​​ಗೆ ಬಿಗ್​ ಶಾಕ್​​​ ಕೊಟ್ಟ ಮುಖ್ಯ ಕೋಚ್​​​ ಗಂಭೀರ್​​; ಸ್ಟಾರ್​ ಬ್ಯಾಟರ್​ ಕಥೆ ಮುಗೀತಾ?

https://newsfirstlive.com/wp-content/uploads/2024/09/Gambhir_Shreyas.jpg

Load More