newsfirstkannada.com

ಕೊಹ್ಲಿ, ಶ್ರೇಯಸ್​​ ಸಿಡಿಲಬ್ಬರದ ಶತಕ.. ನ್ಯೂಜಿಲೆಂಡ್​​ಗೆ ಟೀಂ ಇಂಡಿಯಾ 398 ರನ್​​ ಬಿಗ್​ ಟಾರ್ಗೆಟ್​

Share :

Published November 15, 2023 at 6:34pm

  ನ್ಯೂಜಿಲೆಂಡ್​ ತಂಡಕ್ಕೆ ಟೀಂ ಇಂಡಿಯಾ ಬೃಹತ್​ ಟಾರ್ಗೆಟ್​​

  ಆರಂಭದಿಂದಲೇ ಅಬ್ಬರಿಸಿದ ಟೀಂ ಇಂಡಿಯಾದ ಆಟಗಾರರು

  ಕೊಹ್ಲಿ, ಅಯ್ಯರ್​ ಶತಕ; ಗಿಲ್​​, ರೋಹಿತ್​​ ಕೂಡ ಅಬ್ಬರ ಬ್ಯಾಟಿಂಗ್​!

ಇಂದು ಮುಂಬೈನ ವಾಂಖೆಡೆ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​​ನಲ್ಲಿ ನಡೆಯುತ್ತಿರೋ ಐಸಿಸಿ ಏಕದಿನ ವಿಶ್ವಕಪ್ ಸೆಮಿ ಫೈನಲ್​​ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಟೀಂ ಇಂಡಿಯಾ 398 ರನ್​​ ಬಿಗ್​ ಟಾರ್ಗೆಟ್​ ಕೊಟ್ಟಿದೆ.

ಟಾಸ್​ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್​​ ಆಯ್ದುಕೊಂಡಿದೆ. ಇನ್ನು, ಟೀಂ ಇಂಡಿಯಾದ ಓಪನರ್​ ಆಗಿ ಬಂದ ಕ್ಯಾಪ್ಟನ್​ ರೋಹಿತ್​ ಶರ್ಮಾ ಅಗ್ರೆಸ್ಸಿವ್​ನಿಂದಲೇ ಬ್ಯಾಟಿಂಗ್​ ಮಾಡಿದ್ರು. ಬರೋಬ್ಬರಿ 160ಕ್ಕೂ ಹೆಚ್ಚು ಸ್ಟ್ರೈಕ್​​ ರೇಟ್​​ನಿಂದಲೇ ಬ್ಯಾಟ್​ ಬೀಸಿದ ರೋಹಿತ್​ ಶರ್ಮಾ ಕೇವಲ 29 ಬಾಲ್​ನಲ್ಲಿ 47 ರನ್​ ಸಿಡಿಸಿದರು.

ಬ್ಯಾಕ್​​ ಟು ಬ್ಯಾಕ್​ 4 ಫೋರ್​​, 4 ಬಿಗ್​ ಸಿಕ್ಸರ್​ ಸಿಡಿಸಿ ಭಾರತಕ್ಕೆ ಉತ್ತಮ ಆರಂಭ ನೀಡಿದರು ರೋಹಿತ್​​. ಸೌಥಿ ಎಸೆದ 8ನೇ ಓವರ್​​ನ 2ನೇ ಬಾಲ್​​ನಲ್ಲಿ ಸಿಕ್ಸ್​ ಬಾರಿಸಲು ಹೋದ ರೋಹಿತ್​​​ ಶರ್ಮಾ ಕೇನ್​​ ವಿಲಿಯಮ್ಸನ್​​ಗೆ ಕ್ಯಾಚ್​ ನೀಡಿ ಪೆವಿಲಿಯನ್​​ಗೆ ತೆರಳಿದರು.

ರೋಹಿತ್​ಗೆ ಸಾಥ್​ ನೀಡಿದ ಶುಭ್ಮನ್​ ಗಿಲ್​​ ತಾಳ್ಮೆಯಿಂದಲೇ ಬ್ಯಾಟಿಂಗ್​ ಮಾಡಿದ್ರು. ಹೀಗಾಗಿ 22 ಓವರ್​ವರೆಗೂ ಚೆನ್ನಾಗಿ ಆಡಿದ್ರು.

ತಾನು ಎದುರಿಸಿದ 65 ಎಸೆತಗಳಲ್ಲಿ 79 ರನ್​ ಸಿಡಿಸಿದ್ರು. ಬರೋಬ್ಬರಿ 3 ಸಿಕ್ಸರ್​​, 8 ಫೋರ್​​ ಚಚ್ಚಿದ್ರು. ಇವರ ಸ್ಟ್ರೈಕ್​ ರೇಟ್​ 120ಕ್ಕೂ ಹೆಚ್ಚು ಇತ್ತು. 22ನೇ ಓವರ್​​ 4ನೇ ಬಾಲ್​ಗೆ ಸಿಂಗಲ್​ ಓಡುವಾಗ ಗಿಲ್​ಗೆ ಫಿಸಿಯೋ ಪ್ಲಾಬ್ಲಮ್​​ ಆಗಿದೆ. ಇದರ ಪರಿಣಾಮ ಗಿಲ್​ ರಿಟೈರ್ಡ್ ಹರ್ಟ್ ಆದರು.

ಕ್ಯಾಪ್ಟನ್​ ರೋಹಿತ್​ ಶರ್ಮಾ ಔಟಾದ ಬಳಿಕ ಕ್ರೀಸ್​ಗೆ ಬಂದ ವಿರಾಟ್​​ ಕೊಹ್ಲಿ ಜವಾಬ್ದಾರಿಯಿಂದಲೇ ಬ್ಯಾಟ್​ ಬೀಸಿದ್ರು. ಕೊಹ್ಲಿ ತಾನು ಎದುರಿಸಿದ 113 ಬಾಲ್​​ನಲ್ಲಿ 2 ಬಿಗ್​ ಸಿಕ್ಸರ್​​​, 9 ಫೋರ್​ ಸಮೇತ 117 ರನ್ ಸಿಡಿಸಿದ್ದಾರೆ.

ಇನ್ನೊಂದೆಡೆ ಶ್ರೇಯಸ್​ ಅಯ್ಯರ್​​ ಅಬ್ಬರಿಸಿದ್ರು. ಕೇವಲ 70 ಬಾಲ್​ನಲ್ಲಿ 8 ಸಿಕ್ಸರ್​​, 7 ಫೋರ್​ನೊಂದಿಗೆ 105 ರನ್​ ಚಚ್ಚಿದ್ರು. ರಾಹುಲ್​ ಕೂಡ 2 ಸಿಕ್ಸರ್​​, 5 ಫೋರ್​ ಸಮೇತ 39 ರನ್​ ಸಿಡಿಸಿ ಟೀಂ ಇಂಡಿಯಾ ನಿಗದಿತ 50 ಓವರ್​ನಲ್ಲಿ 397 ರನ್​​ ಬಾರಿಸಲು ಸಹಾಯ ಮಾಡಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಹ್ಲಿ, ಶ್ರೇಯಸ್​​ ಸಿಡಿಲಬ್ಬರದ ಶತಕ.. ನ್ಯೂಜಿಲೆಂಡ್​​ಗೆ ಟೀಂ ಇಂಡಿಯಾ 398 ರನ್​​ ಬಿಗ್​ ಟಾರ್ಗೆಟ್​

https://newsfirstlive.com/wp-content/uploads/2023/11/Kohli_Iyer.jpg

Load More