ಹೊಸ ದಾಖಲೆ ಬರೆದ ಟೀಮ್​ ಇಂಡಿಯಾ; ಟಿ20 ಕ್ರಿಕೆಟ್​ನಲ್ಲಿ ಇಂಗ್ಲೆಂಡ್​​ಗೆ 248 ರನ್​ಗಳ ಬಿಗ್​ ಟಾರ್ಗೆಟ್​​

author-image
Ganesh Nachikethu
Updated On
ಹೊಸ ದಾಖಲೆ ಬರೆದ ಟೀಮ್​ ಇಂಡಿಯಾ; ಟಿ20 ಕ್ರಿಕೆಟ್​ನಲ್ಲಿ ಇಂಗ್ಲೆಂಡ್​​ಗೆ 248 ರನ್​ಗಳ ಬಿಗ್​ ಟಾರ್ಗೆಟ್​​
Advertisment
  • ಕೊನೆಯ ಟಿ20 ಪಂದ್ಯದಲ್ಲಿ ಟೀಮ್​ ಇಂಡಿಯಾ ಬ್ಯಾಟರ್ಸ್​ ಅಬ್ಬರ!
  • ಇಂಗ್ಲೆಂಡ್​ಗೆ​ ಟೀಮ್​ ಇಂಡಿಯಾ ಬರೋಬ್ಬರಿ 248 ರನ್​ ಬಿಗ್​ ಟಾರ್ಗೆಟ್​
  • ಯುವ ಎಡಗೈ ಬ್ಯಾಟರ್​ ಅಭಿಷೇಕ್​ ಶರ್ಮಾ ಅಬ್ಬರದ ಶತಕ ಸಿಡಿಸಿದ್ರು

5 ಪಂದ್ಯಗಳ ಸರಣಿಯ ಕೊನೆಯ ಟಿ20 ಪಂದ್ಯದಲ್ಲಿ ಇಂಗ್ಲೆಂಡ್​ ತಂಡಕ್ಕೆ ಟೀಮ್​ ಇಂಡಿಯಾ ಬರೋಬ್ಬರಿ 248 ರನ್​​ಗಳ ಬಿಗ್​ ಟಾರ್ಗೆಟ್​ ಕೊಟ್ಟಿದೆ.

ಮುಂಬೈನ ವಾಂಖೆಡೆ ಇಂಟರ್​ ನ್ಯಾಷನಲ್​​ ಸ್ಟೇಡಿಯಮ್​ನಲ್ಲಿ ನಡೆದ ರೋಚಕ ಟಿ20 ಪಂದ್ಯದಲ್ಲಿ ಟಾಸ್​ ಸೋತ್ರೂ ಫಸ್ಟ್​ ಬ್ಯಾಟಿಂಗ್​​ ಮಾಡಿದ ಟೀಮ್​ ಇಂಡಿಯಾ ನಿಗದಿತ 20 ಓವರ್​​ನಲ್ಲಿ 9 ವಿಕೆಟ್​ ನಷ್ಟಕ್ಕೆ 247 ರನ್​​ ಕಲೆ ಹಾಕಿದೆ.

ಟೀಮ್​ ಇಂಡಿಯಾ ಪರ ಓಪನಿಂಗ್​ ಮಾಡಿದ ಸ್ಟಾರ್​ ವಿಕೆಟ್​ ಕೀಪರ್​ ಬ್ಯಾಟರ್​​​ ಸಂಜು ಸ್ಯಾಮ್ಸನ್​​ ಅವರು 2 ಸಿಕ್ಸರ್​​, 1 ಫೋರ್​ ಸಮೇತ 16 ರನ್​ ಚಚ್ಚಿದ್ರು. ಬಳಿಕ ಯುವ ಎಡಗೈ ಬ್ಯಾಟರ್​ ಅಭಿಷೇಕ್​ ಶರ್ಮಾ ಅವರು ತಾನು ಎದುರಿಸಿದ 54 ಬಾಲ್​ನಲ್ಲಿ 13 ಭರ್ಜರಿ ಸಿಕ್ಸರ್​​, 7 ಬ್ಯಾಕ್​ ಟು ಬ್ಯಾಕ್​ ಫೋರ್​​ ಸಮೇತ 135 ರನ್​​ ಸಿಡಿಸಿದ್ರು.

ಬಳಿಕ ಬಂದ ತಿಲಕ್​ ವರ್ಮಾ 1 ಸಿಕ್ಸರ್​, 3 ಫೋರ್​ ಸಮೇತ 24 ರನ್​​, ಶಿವಂ ದುಬೆ 13 ಬಾಲ್​ನಲ್ಲಿ 2 ಸಿಕ್ಸರ್​​, 3 ಫೋರ್​ ಸಮೇತ 30 ರನ್​​ ಬಾರಿಸಿದ್ರು. ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ 9, ರಿಂಕು ಸಿಂಗ್​​ 9 ಮತ್ತು ಅಕ್ಷರ್​ ಪಟೇಲ್​ ಅವರು 15 ರನ್​​ ಗಳಿಸಿದ್ರು.

ಇಂಗ್ಲೆಂಡ್​ ತಂಡದ ಪರ ಜೋಫ್ರಾ ಆರ್ಚರ್​​ 1, ಮಾರ್ಕ್​ ವುಡ್​​ 2, ಜೆಮೀ ಓವರ್ಟನ್​​ 1, ಆದಿಲ್​ ರಶೀದ್​​ 1, ಕಾರ್ಸೇ 3 ವಿಕೆಟ್​ ತೆಗೆದರು.

ಇದನ್ನೂ ಓದಿ:6,6,6,6,6,6,6,6,6,6; ಟಿ20 ಕ್ರಿಕೆಟ್​ನಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ ಅಭಿಷೇಕ್​ ಶರ್ಮಾ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment