/newsfirstlive-kannada/media/post_attachments/wp-content/uploads/2024/08/Team-India-1.jpg)
ಮಹತ್ವದ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಟೂರ್ನಿಗೆ ಭರದ ಸಿದ್ಧತೆ ನಡೆಸ್ತಿದ್ದ ಟೀಮ್​ ಇಂಡಿಯಾಗೆ ತೀವ್ರ ಹಿನ್ನಡೆ ಉಂಟಾಗಿದೆ. ತಂಡದ ಮ್ಯಾಚ್​​ ವಿನ್ನರ್​​ ಜಸ್​​ಪ್ರಿತ್​ ಬುಮ್ರಾ ಚಾಂಪಿಯನ್ಸ್​ ಟ್ರೋಫಿಯಿಂದ ಹೊರಬೀಳೋ ಸಾಧ್ಯತೆ ದಟ್ಟವಾಗಿದೆ. ಈ ಮ್ಯಾಸಿವ್​ ಸೆಟ್​​ಬ್ಯಾಕ್ ಟೀಮ್ ಇಂಡಿಯಾ ತೀವ್ರ ಹಿನ್ನಡೆ ತಂದಿಟ್ಟಿದೆ. ಜೊತೆಗೆ ಬುಮ್ರಾ ಕರಿಯರ್​​ಗೂ ಇದು ಮುಳ್ಳಾಗಿದೆ.
ಚಾಂಪಿಯನ್ಸ್​ ಟ್ರೋಫಿಗೂ ಮುನ್ನ ಟೀಮ್ ಇಂಡಿಯಾಗೆ ಶಾಕ್
ಆಸ್ಟ್ರೇಲಿಯಾ ವಿರುದ್ಧದ ಸರಣಿ ಸೋತಿರುವ ಟೀಮ್ ಇಂಡಿಯಾ, ಈಗ ಮುಂದಿನ ಚಾಂಪಿಯನ್ಸ್​ ಟ್ರೋಫಿಯತ್ತ ದೃಷ್ಟಿ ನೆಟ್ಟಿದೆ. ಟಿ20 ವಿಶ್ವಕಪ್​ನಂತೆಯೇ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಗೆಲ್ಲೋ ಕಾನ್ಫಿಡೆನ್ಸ್​ನಲ್ಲಿ ಸಿದ್ಧತೆಯನ್ನೂ ಆರಂಭಿಸಿದೆ. ಇದ್ರ ನಡುವೆಯೇ ಆಘಾತಕಾರಿ ಸುದ್ದಿ ಟೀಮ್ ಇಂಡಿಯಾಗೆ ಬರ ಸಿಡಿಲನಂತೆ ಅಪ್ಪಳಿಸಿದೆ. ಚಾಂಪಿಯನ್ಸ್​ ಟ್ರೋಫಿ ಟೂರ್ನಿಯಲ್ಲಿ ಮ್ಯಾಚ್ ವಿನ್ನರ್ ಜಸ್​ಪ್ರೀತ್ ಬುಮ್ರಾ ಆಡೋದು ಅನುಮಾನವಾಗಿದೆ.
/newsfirstlive-kannada/media/post_attachments/wp-content/uploads/2023/08/BUMRAH.jpg)
ಬಾರ್ಡರ್ ಗವಾಸ್ಕರ್ ಟೆಸ್ಟ್​ ಸರಣಿಯಲ್ಲಿ ಬ್ಯಾಕ್ ಇಂಜುರಿಗೆ ತುತ್ತಾಗಿದ್ದ ಜಸ್​​​ಪ್ರೀತ್ ಬುಮ್ರಾ, ಮುಂದಿನ ಚಾಂಪಿಯನ್ಸ್​ ಟ್ರೋಫಿಯಲ್ಲಿ ಆಡೋದು ಅನುಮಾನವಾಗಿದೆ. ಸದ್ಯ ಫುಲ್​ ಫಿಟ್​ ಆಗದ ಬುಮ್ರಾ ಬೆಂಗಳೂರಿನ ಎನ್​ಸಿಎಗೆ ರಿಪೋರ್ಟ್​ ಮಾಡಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಹಿಂದೆ ಬ್ಯಾಕ್​ ಇಂಜುರಿಗೆ ತುತ್ತಾದಾಗ ಮೇಜರ್​​ ಬ್ಯಾಕ್​ ಸರ್ಜರಿ ಮಾಡಿದ್ದ ನ್ಯೂಜಿಲೆಂಡ್​ನ ತಜ್ಞ ವೈದ್ಯ ರೋವನ್​ ಅವರನ್ನ ಈಗಾಗಲೇ ಬೂಮ್ರಾ ಸಂಪರ್ಕಿಸಿದ್ದಾರೆ ಎನ್ನಲಾಗಿದ್ದು, ಫುಲ್​ ಫಿಟ್​ ಆಗಲು ಹೆಚ್ಚಿನ ಸಮಯಾವಕಾಶ ಬೇಕು ಎನ್ನಲಾಗಿದೆ.
ಟೀಮ್​ ಇಂಡಿಯಾಗೆ ಬುಮ್ರಾ ಶಾಕ್​​
ಇಂಗ್ಲೆಂಡ್​ ಸರಣಿಯಿಂದ ಹೊರಗುಳಿಯಲಿರೋ ಬುಮ್ರಾ, ಚಾಂಪಿಯನ್ಸ್​ ಟ್ರೋಫಿಯ ಲೀಗ್​ ಹಂತದ ಪಂದ್ಯಗಳನ್ನ ಬಹುತೇಕ ಅನುಮಾನವೇ! ನಾಕೌಟ್​ ಪಂದ್ಯಗಳಿಗೆ ಲಭ್ಯರಾಗೋ ಸಾಧ್ಯತೆಯಿದೆ. ಪ್ರಮುಖ ಟೂರ್ನಿ ಬುಮ್ರಾ ಅಲಭ್ಯತೆ ಟೀಮ್​ ಇಂಡಿಯಾಗೆ ದೊಡ್ಡ ಹಿನ್ನಡೆ ತಂದಿಟ್ಟಿದೆ. ಜೊತೆಗೆ ಬುಮ್ರಾ ಇಂಜುರಿ ಬಿಸಿಸಿಐನ ಕಾರ್ಯವೈಖರಿಯನ್ನ ಪ್ರಶ್ನೆ ಮಾಡುವಂತೆ ಮಾಡಿದೆ. ಜಸ್​ಪ್ರೀತ್ ಬುಮ್ರಾ ಕರಿಯರ್​ ಜೊತೆ ಚೆಲ್ಲಾಟವಾಡ್ತಿದೆಯಾ ಎಂಬ ಅನುಮಾನವನ್ನು ಹುಟ್ಟಿಸಿದೆ.
ಇದನ್ನೂ ಓದಿ:BREAKING: ಬೆಂಗಳೂರಿಂದ ಬೆಳಗಾವಿಗೆ ಹೋಗುವಾಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us