ಭಾರತ ತಂಡದ ಮಾನ ಕಾಪಾಡಿದ ಕನ್ನಡಿಗ; ಕೆ.ಎಲ್​ ರಾಹುಲ್​​ ಅವರನ್ನು ಹಾಡಿಹೊಗಳಿದ ರೋಹಿತ್​ ಶರ್ಮಾ

author-image
Ganesh Nachikethu
Updated On
ಕ್ಯಾಪ್ಟನ್ ರೋಹಿತ್​ರಿಂದಲೇ ದೊಡ್ಡ ಮಿಸ್ಟೇಕ್ಸ್; ಅದೇ ತಪ್ಪು ಮುಂದುವರಿದ್ರೆ ಪಾಕ್ ವಿರುದ್ಧ ಕಷ್ಟ..!
Advertisment
  • ಐಸಿಸಿ 2025ರ ಚಾಂಪಿಯನ್ಸ್​ ಟ್ರೋಫಿ ಗೆದ್ದ ಟೀಮ್​ ಇಂಡಿಯಾ
  • ಭಾರತ ತಂಡದ ಗೆಲುವಿನಲ್ಲಿ ಕೆ.ಎಲ್​​​ ರಾಹುಲ್​​ ಪ್ರಮುಖ ಪಾತ್ರ!
  • ಕೆ.ಎಲ್​ ರಾಹುಲ್​ ಅವರನ್ನು ಹೊಗಳಿದ ಕ್ಯಾಪ್ಟನ್​​ ರೋಹಿತ್​

ಭಾರತ ಕ್ರಿಕೆಟ್​ ತಂಡ ಐಸಿಸಿ 2025ರ ಚಾಂಪಿಯನ್ಸ್​ ಟ್ರೋಫಿಯ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ನ್ಯೂಜಿಲೆಂಡ್​ ವಿರುದ್ಧ ಭರ್ಜರಿ ಗೆಲುವು ಸಾಧಿಸೋ ಮೂಲಕ ಭಾರತ ತಂಡ ದಾಖಲೆ ಬರೆದಿದೆ. ಭಾರತ ತಂಡದ ಗೆಲುವಿನಲ್ಲಿ ಕನ್ನಡಿಗ ಕೆ.ಎಲ್​​ ರಾಹುಲ್​​ ಪ್ರಮುಖ ಪಾತ್ರವಹಿಸಿದ್ರು.

ಕೆ.ಎಲ್​ ರಾಹುಲ್​ ಅವರನ್ನು ಹೊಗಳಿದ ರೋಹಿತ್​

ಇಡೀ ತಂಡ ಗೆಲುವಿಗಾಗಿ ಶ್ರಮಿಸಿದೆ. ಕೆ.ಎಲ್​ ರಾಹುಲ್​ ಅದ್ಭುತ ಬ್ಯಾಟಿಂಗ್​ ಮಾಡಿದರು. ಇದೇ ಕಾರಣಕ್ಕೆ ನಾವು ಕೆ.ಎಲ್​ ರಾಹುಲ್​ ಮಿಡಲ್​ ಆರ್ಡರ್​ನಲ್ಲಿ ಬ್ಯಾಟಿಂಗ್​ ಮಾಡಲಿ ಎಂದು ಒತ್ತಡ ಹಾಕಿದ್ದು. ಮಿಡಲ್​ ಆರ್ಡರ್​ ಬ್ಯಾಟ್​ ಮಾಡಲು ಕೆ.ಎಲ್​ ರಾಹುಲ್​ ಅವರಿಂದ ಮಾತ್ರ ಸಾಧ್ಯ. ಆ ಕಾಮ್​ನೆಸ್​ ಮತ್ತು ಡೀಸೆಂಟ್​ ಬ್ಯಾಟಿಂಗ್​​ ಎಲ್ಲರಿಗೂ ಇಷ್ಟ ಆಗುತ್ತೆ. ಅವರೊಂದಿಗೆ ಬ್ಯಾಟಿಂಗ್​ ಮಾಡುವ ಎಲ್ಲರಿಗೂ ಕೆ.ಎಲ್​ ರಾಹುಲ್​ ಫ್ರೀಡಮ್​ ಕೊಡುತ್ತಾರೆ ಎಂದರು ಕ್ಯಾಪ್ಟನ್​ ರೋಹಿತ್​ ಶರ್ಮಾ.

ನ್ಯೂಜಿಲೆಂಡ್​ 252 ರನ್​ಗಳ ಗುರಿ ನೀಡಿತ್ತು. ಈ ಬೃಹತ್​​ ಗುರಿಯನ್ನು ಬೆನ್ನತ್ತಿದ ಟೀಮ್​ ಇಂಡಿಯಾ ಪರ ಕೊನೆಯವರೆಗೂ ಕ್ರೀಸ್​ನಲ್ಲೇ ನಿಂತು ಆಡಿದ ಕನ್ನಡಿಗ ಕೆ.ಎಲ್​ ರಾಹುಲ್ ಆಡಿದರು. ಅಷ್ಟೇ ಅಲ್ಲ ಭಾರತ ತಂಡವನ್ನು ಗೆಲ್ಲಿಸಿದರು. ರಾಹುಲ್​​ 1 ಸಿಕ್ಸರ್​​, 1 ಫೋರ್​ ಸಮೇತ 34 ರನ್​ ಸಿಡಿಸಿದರು. ಭಾರತ 49 ಓವರ್​ನಲ್ಲಿ 254 ರನ್​ ಗಳಿಸಿ ಗೆಲುವು ಸಾಧಿಸಿದೆ.

ಇದನ್ನೂ ಓದಿ:ನ್ಯೂಜಿಲೆಂಡ್​ ವಿರುದ್ಧ ರೋಚಕ ಗೆಲುವು; ಚಾಂಪಿಯನ್ಸ್​ ಟ್ರೋಫಿ ಗೆದ್ದ ಟೀಮ್​ ಇಂಡಿಯಾ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment