/newsfirstlive-kannada/media/post_attachments/wp-content/uploads/2025/02/Rohit-Sharma-Out.jpg)
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಕಳಪೆ ಆಟ ಮುಂದುವರಿದಿದೆ. ಇಂಗ್ಲೆಂಡ್ ನೀಡಿದ 249 ರನ್ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಓಪನಿಂದ ಮಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು.
ಕೇವಲ 2 ರನ್ಗೆ ಔಟ್
ಕ್ಯಾಪ್ಟನ್ ರೋಹಿತ್ ಶರ್ಮಾ ತಾನು ಎದುರಿಸಿದ 7 ಬಾಲ್ಗಳಲ್ಲಿ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಸಾಕೀಬ್ ಮಹ್ಮದ್ ಬೌಲಿಂಗ್ನಲ್ಲಿ ಲಿಯಾಮ್ ಲಿವಿಂಗ್ಸ್ಟೋನ್ಗೆ ಕ್ಯಾಚ್ ನೀಡಿ ಮೈದಾನದಿಂದ ಹೊರನಡೆದರು.
ಫ್ಯಾನ್ಸ್ ಆಕ್ರೋಶ
ಮಹತ್ವದ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಕೈ ಕೊಟ್ಟ ಕ್ಯಾಪ್ಟನ್ ರೋಹಿತ್ ವಿರುದ್ಧ ಭಾರೀ ಆಕ್ರೋಶ ಕೇಳಿ ಬಂದಿದೆ. ನಾಚಿಕೆ ಆಗಬೇಕು ನಿನಗೆ, ಆದಷ್ಟು ಬೇಗೆ ರಿಟೈರ್ ಆಗು ಎಂದು ಫ್ಯಾನ್ಸ್ ಆಕ್ರೋಶ ಹೊರಹಾಕಿದ್ರು.
Rohit Sharma you're just a liability now.😭
Please retire bro, you're just eating the spot of many young talent out there. Just move out of cricket #INDvENGpic.twitter.com/epmNcFxqT9— Utkarsh (@toxify_x18) February 6, 2025
Have some shame Rohit Sharma @ImRo45 .
How long will you keep being a burden on the team with your sagging belly?
Shameless #RohitSharma#INDvENGpic.twitter.com/afJaxp6ci0
— Sachin Shukla (@imsachin_20) February 6, 2025
ಟೆಸ್ಟ್ನಲ್ಲೂ ಕಳಪೆ ಆಟ
ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಲ್ಲೂ ಕಳಪೆ ಫಾರ್ಮ್ನಲ್ಲಿದ್ದರು. ತವರು ಹಾಗೂ ವಿದೇಶ ಎರಡೂ ಕಡೆ ರನ್ಗಳಿಸಲು ಪರದಾಡಿದ್ರು. ಬಾರ್ಡರ್ ಗಾವಾಸ್ಕರ್ ಟ್ರೋಫಿಯಲ್ಲಿ ದಯನೀಯ ವೈಫಲ್ಯ ಕಂಡ ನಂತರ ಇವರು ರಣಜಿ ಕ್ರಿಕೆಟ್ನಲ್ಲೂ ಫ್ಲಾಪ್ ಆದರು.
ಇನ್ನು ಕಳೆದ 15 ಟೆಸ್ಟ್ ಇನ್ನಿಂಗ್ಸ್ಗಳಲ್ಲಿ ರೋಹಿತ್ ಕೇವಲ ಒಂದು ಅರ್ಧಶತಕ ಗಳಿಸಿದ್ದಾರೆ. ಇತ್ತೀಚೆಗೆ, ರೋಹಿತ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ರನ್ ಗಳಿಸಲು ಹೆಣಗಾಡಿದರು. ಇವರು 3 ಟೆಸ್ಟ್ಗಳ 5 ಇನ್ನಿಂಗ್ಸ್ನಲ್ಲಿ ಕೇವಲ 31 ರನ್ ಗಳಿಸಿದ್ದರು.
ಇದನ್ನೂ ಓದಿ:ಆರ್ಸಿಬಿ ಕ್ಯಾಪ್ಟನ್ಸಿಗೆ ಮೇಜರ್ ಟ್ವಿಸ್ಟ್; ಸ್ಫೋಟಕ ಸತ್ಯ ಬಿಚ್ಚಿಟ್ಟ ಸ್ಟಾರ್ ಪ್ಲೇಯರ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ