/newsfirstlive-kannada/media/post_attachments/wp-content/uploads/2024/11/Rohit-Sharma_IND-Test.jpg)
ಟೀಮ್​​ ಇಂಡಿಯಾ, ಆಸ್ಟ್ರೇಲಿಯಾ ನಡುವಿನ ಕೊನೆಯ ಟೆಸ್ಟ್​ನಿಂದ ಕ್ಯಾಪ್ಟನ್​ ರೋಹಿತ್​ ಶರ್ಮಾ ದೂರ ಉಳಿದಿದ್ದರು. ಈ ಬಗ್ಗೆ ಸಾಕಷ್ಟು ಗೊಂದಲಗಳು ಭಾರತ ತಂಡದ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದ್ದವು. ಈ ಎಲ್ಲಾ ಪ್ರಶ್ನೆಗಳಿಗೂ ಕ್ಯಾಪ್ಟನ್​ ರೋಹಿತ್​ ಶರ್ಮಾ ಅವರೇ ಉತ್ತರ ನೀಡಿದ್ದಾರೆ.
ರೋಹಿತ್​​ ಶರ್ಮಾ ಏನಂದ್ರು?
ನನ್ನ ನಿವೃತ್ತಿ ಬಗ್ಗೆ ಹಲವರು ಕಾಮೆಂಟ್​ ಮಾಡಿದ್ದಾರೆ. ನಾನು ಫಾರ್ಮ್​​ನಲ್ಲಿ ಇಲ್ಲ. ರನ್​​ ಕಲೆ ಹಾಕುವಲ್ಲಿ ಫೇಲ್​ ಆಗಿದ್ದೇನೆ. ಹಾಗಾಗಿ ನಾನೇ ಕೊನೆಯ ಟೆಸ್ಟ್​ನಿಂದ ದೂರ ಉಳಿದೆ. ನಾನು ಬೆಂಚ್​ ಕಾದರೆ ಇನ್ನೊಬ್ಬ ಉತ್ತಮ ಆಟಗಾರನಿಗೆ ಅವಕಾಶ ಸಿಗುತ್ತದೆ ಎಂಬುದಷ್ಟೇ ನನ್ನ ಉದ್ದೇಶ ಎಂದರು.
ಇದು ವೈಯಕ್ತಿಕ ನಿರ್ಧಾರ ಎಂದ ರೋಹಿತ್​​​
ಟೀಮ್​ ಎಂದ ಮೇಲೆ ಸಾಕಷ್ಟು ಸೂಕ್ಷ್ಮ ವಿಚಾರಗಳು ಇರುತ್ತವೆ. ನನಗೆ ಯಾರು ತಂಡದಿಂದ ಹೊರ ಹೋಗಿ ಎಂದು ಹೇಳಲಿಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರ. ನಾನೇ ಕೊನೆಯ ಟೆಸ್ಟ್​ನಿಂದ ದೂರ ಉಳಿದಿದ್ದೇನೆ. ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು ರೋಹಿತ್​.
ಸಿಡ್ನಿಗೆ ಬರುತ್ತಿದ್ದಂತೆ ನನ್ನ ತಲೆಗೆ ಈ ವಿಚಾರ ಬಂದಿತ್ತು. ಹೊಸ ವರ್ಷಕ್ಕೆ ಮುನ್ನ ಕೋಚ್ ಮತ್ತು ಮ್ಯಾನೇಜ್ಮೆಂಟ್​ಗೆ ಈ ನಿರ್ಧಾರ ತಿಳಿಸುವುದು ಬೇಡ ಎಂದಿದ್ದೆ. ನಂತರ ಒಂದು ದಿನ ಬಿಟ್ಟು ಹೇಳಿದ್ದೇನೆ. ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿರುವುದು ನಿಜ ಎಂದರು.
ನಿವೃತ್ತಿ ಬಗ್ಗೆ ಏನಂದ್ರು ರೋಹಿತ್​​?
6 ತಿಂಗಳ ನಂತರ ಏನು? ಎಂಬ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ. ನನ್ನ ಮೇಲೆ ನನಗೆ ವಿಶ್ವಾಸವಿದೆ. ನಾನು ಮತ್ತೆ ಕಮ್​ಬ್ಯಾಕ್​ ಮಾಡುತ್ತೇನೆ. ನನ್ನ ಬಗೆ ಯಾರು ಏನಂದ್ರು? ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನಗೆ ಏನು ಮಾಡಬೇಕು ಎಂದು ತಿಳಿದಿದೆ. ನಾನು ನಿವೃತ್ತಿ ಪಡೆದಿಲ್ಲ ಎಂದರು ರೋಹಿತ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us