newsfirstkannada.com

‘ಟೀಮ್​ ಇಂಡಿಯಾ ಸೋಲಿಗೆ ಈ ಆಟಗಾರರೇ ಕಾರಣ’- ಅಸಮಾಧಾನ ಹೊರಹಾಕಿದ ಕ್ಯಾಪ್ಟನ್​ ರೋಹಿತ್​​

Share :

Published August 4, 2024 at 11:24pm

    ಟೀಮ್​ ಇಂಡಿಯಾಗೆ ಶ್ರೀಲಂಕಾ ವಿರುದ್ಧ ಹೀನಾಯ ಸೋಲು

    ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟ ಕ್ಯಾಪ್ಟನ್​ ರೋಹಿತ್​ ಶರ್ಮಾ

    ಭಾರತ ತಂಡದ ಸೋಲಿಗೆ ಇವರೇ ಕಾರಣ ಎಂದು ಹಿಟ್​ಮ್ಯಾನ್​​!

ಶ್ರೀಲಂಕಾ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಟೀಮ್​​ ಇಂಡಿಯಾ ಹೀನಾಯ ಸೋಲು ಕಂಡಿದೆ. ಬರೋಬ್ಬರಿ 32 ರನ್​ಗಳಿಂದ ಟೀಮ್​ ಇಂಡಿಯಾ ಸೋತಿದೆ.

ಇನ್ನು, ಸೋತ ಬಳಿಕ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಮಾತಾಡಿದ್ದಾರೆ. ಯಾರಿಗೆ ಆಗಲಿ ಸೋತಾಗ ನೋವಾಗುತ್ತದೆ. ಕೇವಲ 10 ಓವರ್​ಗಳ ಬಗ್ಗೆ ಮಾತಾಡೋ ವಿಷ್ಯವಲ್ಲ. ನಾವು ಯಾವಾಗಲೂ ಒಂದೇ ರೀತಿ ಕ್ರಿಕೆಟ್​ ಆಡಬೇಕು. ಎಲ್ಲರದಲ್ಲೂ ಕನ್ಸಿಸ್ಟೆನ್ಸಿ ಇರಬೇಕು ಎಂದರು.

ನನಗೆ ಈ ಸೋಲು ನೋವು ತಂದಿದೆ. ಈ ರೀತಿಯ ಘಟನೆಗಳು ನಡೆಯುತ್ತವೆ. ಬ್ಯಾಟಿಂಗ್​ನಲ್ಲಿ ಸಂಪೂರ್ಣ ವಿಫರಾಗಿದ್ದೇವೆ. ಶ್ರೀಲಂಕಾದ ಯುವ ಸ್ಪಿನ್ನರ್​​ ಜೆಫೆರಿಗೆ 6 ವಿಕೆಟ್​ ಸಿಕ್ಕಿವೆ. ಈ ಗೆಲುವಿನ ಕ್ರೆಡಿಟ್​ ಆತನಿಗೆ ಸಲ್ಲಲಿದೆ ಎಂದರು.

ನಾನು ತುಂಬಾ ರಿಸ್ಕ್​ನಿಂದ ಬ್ಯಾಟಿಂಗ್​ ಮಾಡಿದೆ. ಹಾಗಾಗಿ ನನಗೆ 65 ರನ್​​ ಗಳಿಸಲು ಸಾಧ್ಯವಾಯ್ತು. ನಾನು ಯಾವತ್ತು ನನ್ನ ಇಂಟೆಂಟ್​ನಲ್ಲಿ ರಾಜಿಯಾಗಲ್ಲ. ಪವರ್​ ಪ್ಲೇನಲ್ಲಿ ಎಷ್ಟು ಸಾಧ್ಯವೋ ಅಷ್ಟು ರನ್​​ ಗಳಿಸಬೇಕು. ಮಿಡಲ್​ ಓವರ್ಸ್​ನಲ್ಲಿ ಬ್ಯಾಟ್​ ರೊಟೇಟ್​ ಮಾಡೋದು ಅಷ್ಟು ಸುಲಭ ಅಲ್ಲ. ನಾವು ಲೈನ್​ ಕ್ರಾಸ್​ ಮಾಡಬೇಕು. ನಾವೇ ಎಂದರೆ ಬ್ಯಾಟ್ಸ್​​​ಮನ್​ಗಳೇ ಸೋಲಿಗೆ ಕಾರಣ ಎಂದರು.

ಇದನ್ನೂ ಓದಿ: ಶ್ರೀಲಂಕಾ ವಿರುದ್ಧ ಟೀಮ್​ ಇಂಡಿಯಾ ಹೀನಾಯ ಸೋಲು; ರೋಹಿತ್​​, ಗಂಭೀರ್​ಗೆ ಭಾರೀ ಮುಖಭಂಗ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಟೀಮ್​ ಇಂಡಿಯಾ ಸೋಲಿಗೆ ಈ ಆಟಗಾರರೇ ಕಾರಣ’- ಅಸಮಾಧಾನ ಹೊರಹಾಕಿದ ಕ್ಯಾಪ್ಟನ್​ ರೋಹಿತ್​​

https://newsfirstlive.com/wp-content/uploads/2024/07/Rohit_sharma.jpg

Load More