/newsfirstlive-kannada/media/post_attachments/wp-content/uploads/2025/01/Rohit-Sharma-IND.jpg)
ಸಿಡ್ನಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ 6 ವಿಕೆಟ್ಗಳಿಂದ ಹೀನಾಯ ಸೋಲು ಕಂಡಿದೆ. ಇದರ ಪರಿಣಾಮ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ ಕೈ ಚೆಲ್ಲಿದೆ.
ಇನ್ನು, ಆಸ್ಟ್ರೇಲಿಯಾ ತಂಡವು ಬರೋಬ್ಬರಿ 10 ವರ್ಷಗಳ ನಂತರ ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದಿದೆ. 2014-15ರ ನಂತರ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದು ದಾಖಲೆ ನಿರ್ಮಿಸಿದೆ. ಆಸೀಸ್ ವಿರುದ್ಧ ಟೀಮ್ ಇಂಡಿಯಾ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ಈ ಬಗ್ಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಮಾತಾಡಿದ್ದಾರೆ.
ರೋಹಿತ್ ಶರ್ಮಾ ಏನಂದ್ರು?
ನಾವಿಂದು ಸೋತಿದ್ದೇವೆ. ಈ ಹಿಂದೆ ಏನಾಯ್ತು? ಎಂಬುದರ ಬಗ್ಗೆ ಯೋಚನೆ ಮಾಡಬೇಕಿದೆ. ಯಾವಾಗಲೂ ಕೆಲವು ಫಲಿತಾಂಶಗಳು ನಾವು ಅಂದುಕೊಂಡ ರೀತಿ ಬರುವುದಿಲ್ಲ. ಕ್ಯಾಪ್ಟನ್ ಆಗಿ ಹೇಳೋದಾದ್ರೆ ಈ ಸರಣಿ ಸೋಲು ನಿರಾಶಾದಾಯ. ಮುಂದಿನ ಸೀರೀಸ್ಗಳಲ್ಲಿ ನಾವು ಉತ್ತಮ ಪ್ರದರ್ಶನ ನೀಡುತ್ತೇವೆ ಎಂದಿದ್ದಾರೆ ರೋಹಿತ್ ಶರ್ಮಾ.
ನಾನು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದೇನೆ. ಬಹಳಷ್ಟು ಕೆಲಸಗಳು ಅಂದುಕೊಂಡ ರೀತಿಯಲ್ಲಿ ಆಗುತ್ತಿಲ್ಲ. ಇದು ಮಾನಸಿಕವಾಗಿ ತುಂಬಾ ಒತ್ತಡ ಸೃಷ್ಟಿಸಿದೆ. ನಾನು ತುಂಬಾ ಆಘಾತಕ್ಕೆ ಒಳಗಾಗಿದ್ದೇನೆ. ಎಲ್ಲಾ ಪ್ರಯತ್ನದ ನಂತರವೂ ಸರಿಯಾದ ಫಲಿತಾಂಶ ಬಾರದಿದ್ರೆ ನೋವಾಗೋದು ಗ್ಯಾರಂಟಿ ಎಂದರು.
ನಮಗೆ ತುಂಬಾ ಬೇಸರ ಆಗಿದೆ. ನಮ್ಮ ಉದ್ದೇಶ ಸೋಲುವುದಾಗಿರಲಿಲ್ಲ. ಬ್ಯಾಟಿಂಗ್ ವೈಫಲ್ಯವೇ ಸೋಲಿಗೆ ಪ್ರಮುಖ ಕಾರಣ. ಇದು ಮಾನಸಿಕವಾಗಿ ದೊಡ್ಡ ಸವಾಲು. ನಾವು ತಂಡವಾಗಿ ಹಲವು ವಿಚಾರಗಳನ್ನು ನೋಡಬೇಕಿದೆ. ವೈಯಕ್ತಿಕವಾಗಿ ಕೂಡ ಉತ್ತಮ ಪ್ರದರ್ಶನ ನೀಡಬೇಕಿದೆ ಎಂದರು.
ಇದನ್ನೂ ಓದಿ:ಡಿವೋರ್ಸ್ ಸುದ್ದಿ ಮಧ್ಯೆ ಚಹಾಲ್ ಭಾವುಕ ಪೋಸ್ಟ್; ಸ್ಟಾರ್ ಕ್ರಿಕೆಟರ್ ಇನ್ಸ್ಟಾ ಸ್ಟೋರಿಯಲ್ಲೇನಿದೆ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್