ಗಂಭೀರ್​​ ಜತೆ ಜಗಳ; ನಿವೃತ್ತಿ ಘೋಷಿಸಲು ಮುಂದಾದ ರೋಹಿತ್; ಅಸಲಿಗೆ ಆಗಿದ್ದೇನು?

author-image
Ganesh Nachikethu
Updated On
ಗಂಭೀರ್​​ ಜತೆ ಜಗಳ; ನಿವೃತ್ತಿ ಘೋಷಿಸಲು ಮುಂದಾದ ರೋಹಿತ್; ಅಸಲಿಗೆ ಆಗಿದ್ದೇನು?
Advertisment
  • ಟೀಮ್​ ಇಂಡಿಯಾದಲ್ಲಿ ಅಸಮಾಧಾನದ ಹೊಗೆ
  • ರೋಹಿತ್​, ಗಂಭೀರ್​​ ನಡುವೆ ಭಿನ್ನಾಭಿಪ್ರಾಯ!
  • ಗಂಭೀರ್​ ಮೇಲೆ ರೋಹಿತ್​ ಶರ್ಮಾಗೆ ಬೇಸರ

ಮಹತ್ವದ ಚಾಂಪಿಯನ್ಸ್​ ಟ್ರೋಫಿ ಟೂರ್ನಿಗೆ ಕೌಂಟ್​​ಡೌನ್​ ಶುರುವಾಗಿದೆ. ಫೆಬ್ರವರಿ 19ರಿಂದ ಆರಂಭವಾಗೋ ಐಸಿಸಿ ಟೂರ್ನಿಗೆ ತಂಡಗಳ ಸಿದ್ಧತೆಗಳು ಜೋರಾಗಿವೆ. ಭಾರತೀಯ ಕ್ರಿಕೆಟ್​​ ವಲಯದಲ್ಲೂ ಪ್ರಿಪರೇಶನ್​ ಶುರುವಾಗಿದೆ. ಆದ್ರೆ, ಇದ್ರ ನಡುವೆ ಟೀಮ್​ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ಆತಂಕದ ಸುದ್ದಿ ಹೊರಬಿದ್ದಿದೆ. ಕೋಚ್​ ಗೌತಮ್​​ ಗಂಭೀರ್​​ - ಕ್ಯಾಪ್ಟನ್ ರೋಹಿತ್​ ಶರ್ಮಾ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ.

ಟೀಮ್​ ಇಂಡಿಯಾದಲ್ಲಿ ಅಸಮಾಧಾನದ ಹೊಗೆ.?

ಟೀಮ್​ ಇಂಡಿಯಾದಲ್ಲಿ ಮತ್ತೆ ಅಸಮಾಧಾನದ ಹೊಗೆಯಾಡಲು ಶುರುವಾಗಿದೆ. ಟೀಮ್​ ಇಂಡಿಯಾದ ಕ್ಯಾಪ್ಟನ್​ ರೋಹಿತ್​ ಶರ್ಮಾ, ಕೋಚ್​ ಗೌತಮ್​ ಗಂಭೀರ್​ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋ ಶಾಕಿಂಗ್​ ಸುದ್ದಿ ರಿವೀಲ್​ ಆಗಿದೆ. ಬಾರ್ಡರ್​​-ಗವಾಸ್ಕರ್​​ ಸರಣಿಯ ರಿವ್ಯೂ ಮೀಟಿಂಗ್​ ಅಂತ್ಯದ ಬೆನ್ನಲ್ಲೇ, ಸ್ಪೋಟವಾಗಿರೋ ಈ ಸುದ್ದಿ ಬಿರುಗಾಳಿ ಎಬ್ಬಿಸಿದೆ.

ರೋಹಿತ್​ ಶರ್ಮಾ ವೈಫಲ್ಯ.. ಗಂಭೀರ್​​ ಗರಂ.!

ವೈಫಲ್ಯದ ಸುಳಿಗೆ ಸಿಲುಕಿದ್ದ ರೋಹಿತ್​ ಶರ್ಮಾ, ಆಸ್ಟ್ರೇಲಿಯಾ ಟೂರ್​ ಮಧ್ಯದಲ್ಲೇ ನಿವೃತ್ತಿ ಘೋಷಿಸಲು ಸಜ್ಜಾಗಿದ್ರಂತೆ. ಮೆಲ್ಬರ್ನ್​ ಟೆಸ್ಟ್​ನಲ್ಲಿ ವೈಫಲ್ಯ ಅನುಭವಿಸಿದ ಬಳಿಕ ರೋಹಿತ್​ ಶರ್ಮಾ ತೀವ್ರ ಟೀಕೆಗೆ ಗುರಿಯಾಗಿದ್ರು. ರೋಹಿತ್​ ಪರ್ಫಾಮೆನ್ಸ್​ ಬಗ್ಗೆ ಸ್ವತಃ ಕೋಚ್​​​ ಗೌತಮ್​ ಗಂಭೀರ್​ಗೆ ಅಸಮಾಧಾನ ಶುರುವಾಗಿತ್ತಂತೆ. ಹೀಗಾಗಿ ಸಿಡ್ನಿಯಲ್ಲಿ ನಡೆಯ ಕೊನೆಯ ಟೆಸ್ಟ್​ನಿಂದ ನಾಯಕನನ್ನೇ ಡ್ರಾಪ್​ ಮಾಡೋ ನಿರ್ಧಾರ ಮಾಡಿದ್ರಂತೆ.

ರೋಹಿತ್ ಶರ್ಮಾ​ಗೆ ಬೇಸರ.. ನಿವೃತ್ತಿಗೆ ನಿರ್ಧಾರ.!

ಅಂತಿಮ ಟೆಸ್ಟ್​ನ ಹಿಂದಿನ ದಿನ ಬೂಮ್ರಾ ಜೊತೆಗೆ ಸುದೀರ್ಘ ಚರ್ಚೆ ನಡೆಸಿದ್ದ ಗಂಭೀರ್​, ರೋಹಿತ್​ಗೂ ತಮ್ಮ ನಿರ್ಧಾರ ತಿಳಿಸಿದ್ರಂತೆ. ಆ ಬಳಿಕ ರೋಹಿತ್​​ರ ಆನ್ಸರ್​ಗೆ ಕಾಯದೇ ಪಂದ್ಯಕ್ಕೂ ಮುನ್ನ ತಾವೇ ಸುದ್ದಿಗೋಷ್ಟಿಗೆ ಹಾಜಾರಾಗಿದ್ರು. ಅಲ್ಲೂ ಕೂಡ ರೋಹಿತ್​ ಬಗ್ಗೆ ಕೇಳಿಬಂದ ಪ್ರಶ್ನೆಗೆ ಪಿಚ್​ ನೋಡಿ ತೀರ್ಮಾನ ಎಂದು ಹೇಳಿದ್ರು. ಕೋಚ್​​ ಗಂಭೀರ್​ರ ಈ ನಡೆ ರೋಹಿತ್​ ಶರ್ಮಾಗೆ ಬೇಸರ ತರಿಸಿತ್ತಂತೆ. ಇಷ್ಟೇ ಅಲ್ಲ.. ಟೆಸ್ಟ್​ ಕ್ರಿಕೆಟ್​ಗೆ ಗುಡ್​ ಬೈ ಹೇಳೋ ತೀರ್ಮಾನವನ್ನೂ ಮಾಡಿದ್ರಂತೆ.

‘ಸೆಲೆಕ್ಟರ್​​ ಸಂಧಾನ’ ರೋಹಿತ್ ಶರ್ಮಾ​ U-ಟರ್ನ್​!

ಗಂಭೀರ್​​ ಅಂದುಕೊಂಡಂತೆ ಎಲ್ಲಾ ನಡೆದು ಸಿಡ್ನಿ ಟೆಸ್ಟ್​​ನಿಂದ ರೋಹಿತ್​ ಶರ್ಮಾ ಹೊರಗುಳಿದ್ರು. ಇದ್ರಿಂದ ಬೇಸರಗೊಂಡಿದ್ದ ರೋಹಿತ್​, ಟೆಸ್ಟ್​ ಕ್ರಿಕೆಟ್​ಗೆ ಗುಡ್​ ಬೈ ಹೇಳೋ ನಿರ್ಧಾರ ಮಾಡಿದ್ರು. ಈ ಬಗ್ಗೆ ಗೌತಮ್​​ ಗಂಭೀರ್​ ಜೊತೆಗೂ ಚರ್ಚಿಸಿದ್ರು. ರೋಹಿತ್​ ಶರ್ಮಾ ನಿವೃತ್ತಿ ಮಾತಿಗೆ ಗಂಭೀರ್​ ಮರು ಮಾತಾಡದೇ ಯೆಸ್​ ಅಂದಿದ್ರಂತೆ. ಆದ್ರೆ, ಈ ನಡುವೆ ರೋಹಿತ್​ ಶರ್ಮಾ ಆಪ್ತರು ಹಾಗೂ ಟೀಮ್​ ಇಂಡಿಯಾ ಸೆಲೆಕ್ಷನ್​ ಕಮಿಟಿಯ ಸದಸ್ಯರೊಬ್ಬರು ರೋಹಿತ್​ನ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವೊಲಿಸಿದ್ರಂತೆ. ಆಗ U ಟರ್ನ್​​ ತೆಗೆದುಕೊಂಡ ರೋಹಿತ್​​, ನಿವೃತ್ತಿ ನಿರ್ಧಾರ ಕೈ ಬಿಟ್ಟಿದ್ದಂತೆ.

ರೋಹಿತ್​ ಶರ್ಮಾ ನಿವೃತ್ತಿಯಿಂದ ಹಿಂದೆ ಸರಿಯೋ ನಿರ್ಧಾರ ಮಾಡಿದ್ದೇ ಗೌತಮ್​ ಗಂಭೀರ್​ ಬೇಸರ ತರಿಸಿತ್ತು. ಇನ್ನೊಂದು ಹೆಜ್ಜೆ ಮುಂದೆ ಹೋದ ರೋಹಿತ್​ ಬಹಿರಂಗವಾಗಿ ಸಂದರ್ಶನ ನೀಡಿ ನಿವೃತ್ತಿ ಬಗೆಗಿನ ಪ್ರಶ್ನೆಗಳಿಗೆ ಖಡಕ್​ ಆನ್ಸರ್​ ನೀಡಿದ್ರು. ನಾನು ಯಾರಿಗೂ ಹೆದರಲ್ಲ. ನಾಯಕತ್ವ ಯಾರು ತಟ್ಟೆಗೆ ಹಾಕಿಕೊಟ್ಟಿಲ್ಲ ಎಂದೆಲ್ಲಾ ಖಡಕ್​ ಮಾತುಗಳನ್ನ ರೋಹಿತ್​ ಶರ್ಮಾ ಆಡಿದ್ರೆ. ಇವೆಲ್ಲಾ ಪರೋಕ್ಷವಾಗಿ ಗಂಭೀರ್​ಗೆ ಕೊಟ್ಟ ಟಾಂಗ್​ ಎನ್ನಲಾಗ್ತಿದೆ.

ಕೆಲ ಆಟಗಾರರೊಂದಿಗೆ ಗಂಭೀರ್​ ಸಂಬಂಧ ಅಷ್ಟಕಷ್ಟೆ.!

ರೋಹಿತ್​ ಶರ್ಮಾ ವಿಚಾರದಲ್ಲಿ ಮಾತ್ರವಲ್ಲ.. ತಂಡದಲ್ಲಿ ಕೆಲ ಆಟಗಾರರ ಜೊತೆಗೆ ಕೋಚ್​ ಗೌತಮ್​ ಗಂಭೀರ್​​ ಭಾಂದವ್ಯ ಅಷ್ಟಕಷ್ಟೇ ಎನ್ನಲಾಗ್ತಿದೆ. ಇದು ಡ್ರೆಸ್ಸಿಂಗ್​ ರೂಮ್​ನ ವಾತಾವರಣವನ್ನ ಹಾಳು ಮಾಡಿದೆ ಎನ್ನಲಾಗಿದೆ. ರಾಹುಲ್​ ದ್ರಾವಿಡ್​ ಕೋಚ್​, ರೋಹಿತ್​ ಶರ್ಮಾ ಕ್ಯಾಪ್ಟನ್​ ಆಗಿದ್ದ ಸಂದರ್ಭದಲ್ಲಿ ಟೀಮ್​ ಇಂಡಿಯಾ ಡ್ರೆಸ್ಸಿಂಗ್​ ರೂಮ್​ ವಾತಾವರಣ ಸಂಪೂರ್ಣ ವಿಭಿನ್ನವಾಗಿತ್ತು, ಪ್ರತಿಯೊಬ್ಬ ಆಟಗಾರರನಿಗೂ ಸ್ವಾತಂತ್ರ್ಯವಿತ್ತು. ಆದ್ರೆ, ಈಗಿನ ಹೆಡ್​ಕೋಚ್​ ಗಂಭೀರ್​ ಹೆಡ್​ ಮಾಸ್ಟರ್​ ರೀತಿ ವರ್ತಿಸ್ತಾ ಇರೋದು ಹಲವರಿಗೆ ಬೇಸರ ತರಿಸಿದೆ ಎಂಬ ಸುದ್ದಿಯೂ ಹರಿದಾಡ್ತಿದೆ.

ಗಂಭೀರ್​ ಕೋಚ್​ ಆದ ಬಳಿಕ ಟೀಮ್​ ಇಂಡಿಯಾ ಪರ್ಫಾಮೆನ್ಸ್​​ ಕುಂದಿದೆ. ಸಾಲು ಸಾಲು ಸೋಲುಗಳನ್ನ ತಂಡ ಕಂಡಿದೆ. ಈ ವೈಫಲ್ಯಕ್ಕೆ ಟೀಮ್​ ಇಂಡಿಯಾದ ಕಳಪೆ ಪರ್ಫಾಮೆನ್ಸ್​ ಡ್ರೆಸ್ಸಿಂಗ್​ ರೂಮ್​ ವಾತಾವರಣವೂ ಒಂದು ಕಾರಣ ಅನ್ನೋ ವಿಶ್ಲೇಷಣೆ ಸದ್ಯ ನಡೀತಿದೆ. ಮುಂದಿನ ಚಾಂಪಿಯನ್ಸ್​ ಟ್ರೋಫಿಯೊಳಗೆ ಇದು ಸರಿಯಾಗದಿದ್ರೆ, ಅಲ್ಲೂ ಸೋಲಿನ ದರ್ಶನವಾಗೋದು ಪಕ್ಕಾ.!

ಇದನ್ನೂ ಓದಿ:ಕೊಹ್ಲಿಗೆ ಬಿಗ್​ ಶಾಕ್​​; ಬಿಸಿಸಿಐ ಮಹತ್ವದ ಸಭೆಯಲ್ಲಿ ವಿರಾಟ್​ ಭವಿಷ್ಯದ ಬಗ್ಗೆ ನಡೆದ ಚರ್ಚೆಯೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment