‘ಮಿತಿ ಮೀರಬಾರ್ದು’- ಸಿರಾಜ್​ಗೆ ಕ್ಯಾಪ್ಟನ್​​ ರೋಹಿತ್ ಶರ್ಮಾ ಖಡಕ್​ ವಾರ್ನಿಂಗ್​​​

author-image
Ganesh Nachikethu
Updated On
ಸಿರಾಜ್​​ಗೆ ಮಾಸ್ಟರ್​ ಸ್ಟ್ರೋಕ್​ ಕೊಟ್ಟ ಕ್ಯಾಪ್ಟನ್​ ರೋಹಿತ್​​; ಟೀಮ್​ ಇಂಡಿಯಾದಿಂದಲೇ ಔಟ್​​
Advertisment
  • ಅಡಿಲೇಡ್​ನಲ್ಲಿ ನಡೆದ ಡೇ ನೈಟ್ ಟೆಸ್ಟ್‌ ಪಂದ್ಯದಲ್ಲಿ ಕಿರಿಕ್​​!
  • ಆಸೀಸ್​ ಕ್ರಿಕೆಟರ್​ ಕಿರಿಕ್​ ಮಾಡಿಕೊಂಡ ಮೊಹಮ್ಮದ್​ ಸಿರಾಜ್​
  • ಮೊಹಮ್ಮದ್​ ಸಿರಾಜ್​ಗೆ ಖಡಕ್​ ವಾರ್ನಿಂಗ್​ ಕೊಟ್ಟ ರೋಹಿತ್​

ಅಡಿಲೇಡ್​ನಲ್ಲಿ ನಡೆದ ಡೇ ನೈಟ್ ಟೆಸ್ಟ್‌ ಪಂದ್ಯದಲ್ಲಿ ಟೀಮ್​ ಇಂಡಿಯಾ 10 ವಿಕೆಟ್​ಗಳ ಹೀನಾಯ ಸೋಲು ಕಂಡಿದೆ. ಆಸ್ಟ್ರೇಲಿಯಾ ಗೆದ್ದು ಬೀಗಿದ್ದು, ಈಗ ಉಭಯ ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ 1-1 ರಿಂದ ಸಮಬಲಗೊಂಡಿದೆ.

ಟೀಮ್​ ಇಂಡಿಯಾ ಸೋಲಿನ ಹೊರತಾಗಿ ಭಾರೀ ಚರ್ಚೆಗೆ ಒಳಗಾದ ವಿಷಯ ಎಂದರೆ ಆಸ್ಟ್ರೇಲಿಯಾದ ಟ್ರಾವಿಸ್​ ಹೆಡ್​​ ಮತ್ತು ಮೊಹಮ್ಮದ್ ಸಿರಾಜ್ ನಡುವಿನ ಗಲಾಟೆ. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟ್​ ಮಾಡುವಾಗ ಟ್ರಾವಿಡ್​ ಹೆಡ್​​​ ಅವರನ್ನು ಸಿರಾಜ್​​​ ಔಟ್​​​ ಮಾಡಿದ್ರು. ಇದಾದ ಬಳಿಕ ಸಿರಾಜ್ ಬಹಳ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದರು. ಈ ಸಂದರ್ಭದಲ್ಲಿ ಸಿರಾಜ್​ಗೆ ಟ್ರಾವಿಡ್​ ಹೆಡ್​​​ ತಮ್ಮ ಭಾಷೆಯಲ್ಲಿ ಏನೋ ಹೇಳಿದ್ರು. ಆಗ ಸಿರಾಜ್ ಪೆವಿಲಿಯನ್​ಗೆ ಹೋಗುವಂತೆ ಕೈಸನ್ನೆ ಮಾಡಿದರು. ಈ ಬಗ್ಗೆ ಕ್ಯಾಪ್ಟನ್​ ರೋಹಿತ್​ ಶರ್ಮಾ ಮಾತಾಡಿದ್ದಾರೆ.

ರೋಹಿತ್​ ಶರ್ಮಾ ಏನಂದ್ರು?

ಸಿರಾಜ್​​ ಟೀಮ್​ ಇಂಡಿಯಾದ ಸ್ಟಾರ್​ ಬೌಲರ್​​. ಆತ ಇಂದು ಯಶಸ್ವಿಯಾಗಲು ಕಾರಣ ಅಗ್ರೆಸ್ಸಿವ್​ ಆಗಿರುವುದು. ಆಕ್ರಮಣಕಾರಿ ಆಟದಿಂದಲೇ ಇಲ್ಲಿವರೆಗೂ ಬಂದಿದ್ದಾರೆ. ನಾನು ಸದಾ ಸಿರಾಜ್​​ ಬೆಂಬಲವಾಗಿ ನಿಲ್ಲುತ್ತೇನೆ. ಭಾರತ, ಆಸ್ಟ್ರೇಲಿಯಾ ಮಧ್ಯೆ ಪಂದ್ಯ ಇರುವಾಗ ಈ ರೀತಿಯ ಘಟನೆಗಳು ನಡೆಯುವುದು ಸಾಮಾನ್ಯ. ನಾನು ಒಟ್ಟಾರೆ ಗೇಮ್​ ಬಗ್ಗೆ ಮಾತಾಡಬಹುದು. ಒಂದು ಘಟನೆ ಬಗ್ಗೆ ಮಾತಾಡಲು ಆಗಲ್ಲ ಎಂದರು.

ಸಿರಾಜ್​ಗೆ ಎಚ್ಚರಿಕೆ ಕೊಟ್ಟ ರೋಹಿತ್​

ನನಗೆ ಸಿರಾಜ್​​ ಅಗ್ರೆಸ್ಸಿವ್​ನೆಸ್​​ ಇಷ್ಟ. ಆದರೆ, ಅತಿಯಾದ ಅಗ್ರೆಸಿವ್​ನೆಸ್​ ಅಲ್ಲ. ಎರಡಕ್ಕೂ ಬಹಳ ವ್ಯತ್ಯಾಸ ಇದೆ. ಎಲ್ಲದಕ್ಕೂ ಮಿತಿ ಇದೆ. ಯಾರು ಮಿತಿಯನ್ನು ಮೀರಬಾರದು. ಒಂದು ಸಣ್ಣ ಗೆರೆ ಇರುತ್ತದೆ. ಅದನ್ನು ದಾಟಿದ್ರೆ ಯಾರಿಗೂ ಒಳ್ಳೆಯದಲ್ಲ ಎಂದು ಮೊಹಮ್ಮದ್​​ ಸಿರಾಜ್​ಗೆ ರೋಹಿತ್​ ಶರ್ಮಾ ವಾರ್ನಿಂಗ್​ ಕೊಟ್ಟರು.

ಪಂದ್ಯದಲ್ಲಿ ಆಗಿದ್ದೇನು?

ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಬ್ಯಾಟ್ ಮಾಡಿದ ಭಾರತ 180 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ 337 ರನ್​ಗಳಿಸಿ 157 ರನ್ ಗಳ ಬೃಹತ್ ಮುನ್ನಡೆ ಸಾಧಿಸಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಭಾರತ 175 ರನ್‌ಗಳಿಗೆ ಆಲೌಟ್ ಆಗಿತ್ತು. ಆಸ್ಟ್ರೇಲಿಯಾ 19 ರನ್‌ಗಳ ಗುರಿಯನ್ನು ಕೇವಲ 3.1 ಓವರ್​​ನಲ್ಲಿ ಮುಟ್ಟಿತು.

ಇದನ್ನೂ ಓದಿ: ‘ಟೀಮ್​ ಇಂಡಿಯಾದ ಸೋಲಿಗೆ ಇವರೇ ಕಾರಣ’- ಕ್ಯಾಪ್ಟನ್​​ ರೋಹಿತ್​ ಬಿಚ್ಚಿಟ್ಟ ಸ್ಫೋಟಕ ಸತ್ಯ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment