newsfirstkannada.com

2 ವರ್ಷ.. 2 ಬಾರಿ ಹೃದಯ ಛಿದ್ರ.. ರೋಹಿತ್​​ ಶರ್ಮಾರ ಬೆನ್ನೇರಿದ ದುರಾದೃಷ್ಟಗಳು..!

Share :

Published May 31, 2024 at 7:35am

    ಅಂದು ಸಾಮಾನ್ಯ ಆಟಗಾರ, ಇಂದು ತಂಡದ ನಾಯಕ

    ಏಕದಿನ ವಿಶ್ವಕಪ್ ಸೋತಾಗ ಕಣ್ಣೀರಿಟ್ಟಿದ್ದ ಹಿಟ್​ಮ್ಯಾನ್

    9ನೇ T20 ವಿಶ್ವಕಪ್​ ಆಡಲು ಹಿಟ್​ಮ್ಯಾನ್​ ರೋಹಿತ್​ ರೆಡಿ..!

2 ವರ್ಷ, 2 ಬಾರಿಯ ಹೃದಯ ಛಿದ್ರ. ಜೀವನದ ಅತಿದೊಡ್ಡ ಕನಸನ್ನು ನನಸು ಮಾಡಿಕೊಳ್ಳಲು ಹೊರಟ ರೋಹಿತ್​ ಶರ್ಮಾ, ಕಳೆದ ಎರಡು ಬಾರಿ ನಿರಾಸೆ ಅನುಭವಿಸಿದ್ದಾರೆ. ಇದೀಗ ಮೂರಕ್ಕೆ ಮುಕ್ತಾಯ ಹಾಡೋ ಲೆಕ್ಕಾಚಾರದಲ್ಲಿ ನ್ಯೂಯಾರ್ಕ್​ಗೆ ಕಾಲಿಟ್ಟಿದ್ದಾರೆ. ಜೀವನದ ಅಲ್ಟಿಮೇಟ್​ ಕನಸನ್ನು ಈ ಬಾರಿ ನನಸು ಮಾಡಿಕೊಳ್ಳಲು, ಹಿಟ್​​ಮ್ಯಾನ್ ಭರ್ಜರಿ ಅಭ್ಯಾಸ ಶುರು ಮಾಡಿಕೊಂಡಿದ್ದಾರೆ.

ಚುಟುಕು ವಿಶ್ವಕಪ್​​ ಸಮರಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ. ಪ್ರತಿಷ್ಟಿತ ಟ್ರೋಫಿಗೆ ಮುತ್ತಿಕ್ಕಲು ವಿಶ್ವ ಶ್ರೇಷ್ಟ ತಂಡಗಳ ನಡುವೆ ಪೈಪೋಟಿ ಜೋರಾಗಿದೆ. ನಾ ಮುಂದೆ, ನೀ ಮುಂದೆ ಎಂಬಂತೆ ಅಭ್ಯಾಸದ ಕಣಕ್ಕೆ ಧುಮುಕಿವೆ. ಟೀಮ್​ ಇಂಡಿಯಾ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ನ್ಯೂಯಾರ್ಕ್​ ತಲುಪಿದ ಬೆನ್ನಲ್ಲೇ ಸಿದ್ಧತೆ ಆರಂಭಿಸಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ ನೇತೃತ್ವದಲ್ಲಿ ಆಟಗಾರರು ಅಭ್ಯಾಸ ನಡೆಸಿದ್ದಾರೆ. ಹೊಸ ಹುರುಪಿನೊಂದಿಗೆ ರೋಹಿತ್ ಅಭ್ಯಾಸದ ಕಣದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ನಮ್ಮ ಸಂಬಂಧ ಮಸಾಲೆ ಹಾಕುವಂತದ್ದಲ್ಲ.. ಮತ್ತೆ ಕೊಹ್ಲಿ ಬಗ್ಗೆ ದೊಡ್ಡ ಹೇಳಿಕೆ ಕೊಟ್ಟ ಗೌತಮ್ ಗಂಭೀರ್..!

ಟೀಮ್​ ಇಂಡಿಯಾ ನಾಯಕನಿಗಿದು ಸ್ಪೆಷಲ್​ ವಿಶ್ವಕಪ್​
ಕೆಲವೇ ದಿನಗಳಲ್ಲಿ ಆರಂಭವಾಗೋ ವಿಶ್ವಕಪ್​ ಮಹಾ ಸಮರ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಪಾಲಿಗೆ ಸಿಕ್ಕಾಪಟ್ಟೆ ಸ್ಪೆಷಲ್. ಸತತವಾಗಿ 9ನೇ ಟಿ20 ವಿಶ್ವಕಪ್​ ಟೂರ್ನಿಯನ್ನಾಡಲು ರೋಹಿತ್​ ಶರ್ಮಾ ಸಜ್ಜಾಗಿದ್ದಾರೆ. 2007ರ ಚೊಚ್ಚಲ ಟಿ20 ವಿಶ್ವಕಪ್​ ಟೂರ್ನಿಯಿಂದ ಹಿಡಿದು ಈವರೆಗೆ ಒಟ್ಟಾರೆ 8 ಟಿ20 ಟೂರ್ನಿಗಳು ನಡೆದಿವೆ. ಈ ಎಲ್ಲಾ ಟೂರ್ನಿಗಳಲ್ಲಿ ಆಡಿದ ಹೆಗ್ಗಳಿಕೆ ರೋಹಿತ್​ ಶರ್ಮಾದ್ದು.

ಸಾವಿರ ರನ್​ ಗಡಿ ದಾಟಲು ರೋಹಿತ್​ ಕಾತರ
ಚುಟುಕು ವಿಶ್ವಕಪ್​ ಟೂರ್ನಿಯಲ್ಲಿ ಉತ್ತಮ ರೆಕಾರ್ಡ್​ ಹೊಂದಿರೋ ರೋಹಿತ್​, ಈ ಬಾರಿ ರನ್​ ಗಡಿ ದಾಟಿದ ಸಾಧನೆ ಮಾಡಲು ಕಾತರರಾಗಿದ್ದಾರೆ. ಈ ಬಾರಿ 36 ರನ್​ಗಳಿಸಿದ್ರೆ, ಟಿ20 ವಿಶ್ವಕಪ್​​ ಇತಿಹಾಸದಲ್ಲೇ ಸಾವಿರ ರನ್​ಗಳಿಸಿದ 3ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಹೆಚ್ಚು ರನ್​ಗಳಿಸಿದ ಆಟಗಾರರ ಪಟ್ಟಿಯಲ್ಲಿ 4ನೇ ಬ್ಯಾಟ್ಸ್​ಮನ್​ ಆಗಿರೋ ರೋಹಿತ್​, 53 ರನ್​ಗಳಿಸಿದ್ರೆ, ಕ್ರಿಸ್​ ಗೇಲ್​, ಮಾಹೇಲ ಜಯವರ್ಧನೆಯನ್ನ ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿಯಲಿದ್ದಾರೆ.

ಇದನ್ನೂ ಓದಿ:IPL ಫೈನಲ್​​ನಲ್ಲಿ ಶಾರುಖ್ ಖಾನ್ ಕಟ್ಟಿದ್ದ ವಾಚ್​​ಗೆ ಕೋಟಿ, ಕೋಟಿ ರೂಪಾಯಿ..!

T20 ವಿಶ್ವಕಪ್​ನಲ್ಲಿ ರೋಹಿತ್​ ಶರ್ಮಾ
T20 ವಿಶ್ವಕಪ್​ ಟೂರ್ನಿಯಲ್ಲಿ ಈವರೆಗೆ 36 ಪಂದ್ಯಗಳನ್ನಾಡಿರುವ ರೋಹಿತ್​ ಶರ್ಮಾ, 34.39ರ ಸರಾಸರಿಯಲ್ಲಿ 963 ರನ್​​ಗಳಿಸಿದ್ದಾರೆ. 8 ಬಾರಿ ಅರ್ಧಶತಕದ ಗಡಿದಾಟಿರುವ ರೋಹಿತ್​ 127.38ರ ಸ್ಟ್ರೈಕ್​ರೇಟ್​ ಹೊಂದಿದ್ದಾರೆ.

ಅಂದು ಸಾಮಾನ್ಯ ಆಟಗಾರ, ಇಂದು ತಂಡದ ನಾಯಕ
ಚೊಚ್ಚಲ ಟಿ20 ಆರಂಭವಾದಾಗ ಸಾಮಾನ್ಯ ಬ್ಯಾಟ್ಸ್​ಮನ್​ ಆಗಿ ಕಣಕ್ಕಿಳಿದಿದ್ದ ರೋಹಿತ್​ ಶರ್ಮಾ ಇದೀಗ ಟೀಮ್​ ಇಂಡಿಯಾ ನಾಯಕನಾಗಿದ್ದಾರೆ. ನಾಯಕನಾಗಿ 2ನೇ ಬಾರಿ ತಂಡವನ್ನ ಮುನ್ನಡೆಸಲು ಸಜ್ಜಾಗಿದ್ದಾರೆ. ಮೊದಲ ಬಾರಿ 2022ರ ಟಿ20 ​ವಿಶ್ವಕಪ್​​ನಲ್ಲಿ ರೋಹಿತ್​​​ ತಂಡವನ್ನ ಮುನ್ನಡೆಸಿದ್ರು. ದುರಾದೃಷ್ಟ ಬೆನ್ನುಬಿದ್ದಿತ್ತು. ಆಸ್ಟ್ರೇಲಿಯಾದಲ್ಲಿ ನಡೆದ ಟೂರ್ನಿಯಲ್ಲಿ ಚನ್ನಾಗೇ ಆಡಿದ ಟೀಮ್​ ಇಂಡಿಯಾ, ಸೆಮಿಫೈನಲ್​ನಲ್ಲಿ ಮುಗ್ಗರಿಸಿಬಿಡ್ತು. ಬರಿಗೈಯಲ್ಲಿ ಭಾರತಕ್ಕೆ ಮುಂಬೈಕರ್​​ ವಾಪಾಸ್ಸಾಗಿದ್ರು.

2023ರಲ್ಲಿ ಭಾರತದಲ್ಲೇ ನಡೆದ ಏಕದಿನ ವಿಶ್ವಕಪ್​ನಲ್ಲೂ ರೋಹಿತ್​ ಟೀಮ್​ ಇಂಡಿಯಾವನ್ನ ಮುನ್ನಡೆಸಿದ್ರು. ಅದ್ಭುತ ಆಟವನ್ನಾಡಿದ ಟೀಮ್​ ಇಂಡಿಯಾ ಫೈನಲ್​ಗೆ ಸೋಲಿಲ್ಲದ ಸರದಾರನಂತೆ ಎಂಟ್ರಿ ಕೊಟ್ಟಿತ್ತು. ಫೈನಲ್​ನಲ್ಲಿ ಸೋಲಿಗೆ ಶರಣಾಯ್ತು. ಆಸ್ಟ್ರೇಲಿಯಾ ಎದುರಿನ ಸೋಲಿನೊಂದಿಗೆ ಕಪ್​ ಗೆಲ್ಲೋ ಕನಸು ನುಚ್ಚು ನೂರಾಯ್ತು.

ಇದನ್ನೂ ಓದಿ:IPL ತಂಡ ಪ್ರಕಟಿಸಿದ ರಾಯಡು.. ಆರ್​ಸಿಬಿಯ ಒಬ್ಬನೇ ಒಬ್ಬ ಆಟಗಾರನಿಗೆ ಸ್ಥಾನ

ಕಪ್​ ಗೆಲ್ಲೊಸೋದೆ ರೋಹಿತ್​ ಶರ್ಮಾ ಕನಸು..!
ನಾಯಕನಾದ ಬಳಿಕ 2 ವರ್ಷಗಳಲ್ಲಿ 2 ವಿಶ್ವಕಪ್​ ಟೂರ್ನಿಗಳಲ್ಲಿ ತಂಡವನ್ನ ರೋಹಿತ್ ಮುನ್ನಡೆಸಿದ್ದಾರೆ. ಆದ್ರೆ, ಟ್ರೋಫಿ ಗೆಲ್ಲೋ ಕನಸು ಕನಸಾಗೇ ಉಳಿದಿದೆ. ಇದೀಗ ಮತ್ತೊಂದು ಬಾರಿ ಮಹತ್ವದ ಟೂರ್ನಿಯಲ್ಲಿ ತಂಡವನ್ನ ಮುನ್ನಡೆಸಲು ರೋಹಿತ್​ ರೆಡಿಯಾಗಿದ್ದಾರೆ. ಕಪ್​ ಗೆಲ್ಲೋ ಕನಸಿನೊಂದಿಗೆ ನ್ಯೂಯಾರ್ಕ್​ಗೆ ಕಾಲಿಟ್ಟಿರೋ ರೋಹಿತ್​, ತಂಡವನ್ನ ಚಾಂಪಿಯನ್​ ಪಟ್ಟಕ್ಕೇರಿಸಲಿ. ಐಸಿಸಿ ಟ್ರೋಫಿಯ ಬರವನ್ನ ನೀಗಿಸಲಿ ಅನ್ನೋದು ಕೋಟ್ಯಾಂತರ ಭಾರತೀಯರ ಪ್ರಾರ್ಥನೆಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

2 ವರ್ಷ.. 2 ಬಾರಿ ಹೃದಯ ಛಿದ್ರ.. ರೋಹಿತ್​​ ಶರ್ಮಾರ ಬೆನ್ನೇರಿದ ದುರಾದೃಷ್ಟಗಳು..!

https://newsfirstlive.com/wp-content/uploads/2024/05/ROHIT_SHARMA-1.jpg

Load More