/newsfirstlive-kannada/media/post_attachments/wp-content/uploads/2025/02/Rohit-Sharma_Tears.jpg)
ಕಟಕ್​​ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್​​ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಬ್ಯಾಕ್​ ಟು ಬ್ಯಾಕ್​ 2 ಪಂದ್ಯ ಗೆಲ್ಲೋ ಮೂಲಕ ಏಕದಿನ ಸರಣಿಯನ್ನು ಗೆದ್ದುಕೊಂಡಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಟೀಮ್​​ ಇಂಡಿಯಾದ ಆಲ್​ರೌಂಡರ್​ ಪ್ರದರ್ಶನವೂ ಅಭಿಮಾನಿಗಳಲ್ಲಿ ಭಾರೀ ಸಂತಸ ತಂದಿದೆ. ಅದರಲ್ಲೂ ತಂಡದ ಬ್ಯಾಟಿಂಗ್ ವಿಭಾಗ ಬಲಿಷ್ಠ ಆಗಿರುವುದು ಬಿಸಿಸಿಐಗೆ ನಿರಾಳ ಮೂಡಿಸಿದೆ.
ರೋಹಿತ್​ ಶರ್ಮಾ ಸ್ಫೋಟಕ ಶತಕ
ಇನ್ನೇನು ಕೆಲವೇ ದಿನಗಳಲ್ಲಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಶುರುವಾಗಲಿದೆ. ಈ ಹೊತ್ತಲ್ಲೇ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಫಾರ್ಮ್​​​ಗೆ ಬಂದಿದ್ದಾರೆ. ರೋಹಿತ್ ಶರ್ಮಾ ತಮ್ಮ ಅಮೋಘ ಬ್ಯಾಟಿಂಗ್​​ನಿಂದ 90 ಎಸೆತಗಳಲ್ಲಿ 12 ಬೌಂಡರಿ, 7 ಸಿಕ್ಸರ್ ಸಹಾಯದಿಂದ 119 ರನ್ ಚಚ್ಚಿದ್ರು. ಇದು ಇವರ ವೃತ್ತಿ ಜೀವನದ 32ನೇ ಶತಕ ಆಗಿದ್ದು, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.
ಕಣ್ಣೀರಿಟ್ಟ ರೋಹಿತ್​​ ಏನಂದ್ರು?
ಪಂದ್ಯದ ಬಳಿಕ ಮಾತಾಡಿದ ಕ್ಯಾಪ್ಟನ್​ ರೋಹಿತ್​ ಶರ್ಮಾ, ಇಷ್ಟು ದಿನ ನಾನು ಇದರ ಬಗ್ಗೆಯೇ ಮಾತನಾಡುತ್ತಿದ್ದೆ. ಒಬ್ಬ ಕ್ರಿಕೆಟಿಗ ಹಲವು ವರ್ಷಗಳ ಕಾಲ ಕ್ರಿಕೆಟ್ ಆಡಿದ್ದಾನೆ. ಹತ್ತಾರು ಸಾವಿರ ರನ್​ ಗಳಿಸಿದ್ದಾನೆ ಎಂದರೆ ಅವನಲ್ಲಿ ಏನೋ ಇದೆ ಎಂದರ್ಥ ಎಂದರು.
ನಾನು ಆಟವನ್ನು ಸಮಯದಿಂದ ಆಡುತ್ತಿದ್ದೇನೆ. ನನ್ನ ರೋಲ್​ ಬಗ್ಗೆ ನನಗೆ ಗೊತ್ತಿದೆ. ನನ್ನ ಕೆಲಸವನ್ನು ನಾನು ಮಾಡಿದ್ದೇನೆ. ಈ ರೀತಿ ಬ್ಯಾಟಿಂಗ್ ಮಾಡಲು​ ಯಾವಾಗಲೂ ಪ್ರಯತ್ನಿಸುತ್ತೇನೆ. ಒಂದು ಅಥವಾ ಎರಡು ಇನ್ನಿಂಗ್ಸ್‌ಗಳು ನನ್ನ ಸಾಮರ್ಥ್ಯ ತೋರಿಸಲ್ಲ ಎಂದು ಗಳಗಳನೇ ಕಣ್ಣೀರಿಟ್ಟರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ