ಟೀಮ್​ ಇಂಡಿಯಾಗೆ ಬಿಗ್​ ಶಾಕ್​​; 4ನೇ ಟೆಸ್ಟ್​ನಿಂದ ಕ್ಯಾಪ್ಟನ್​ ರೋಹಿತ್​ ಔಟ್​​; ಕಾರಣವೇನು?

author-image
Ganesh Nachikethu
Updated On
ಕ್ಯಾಪ್ಟನ್​ ಇಲ್ಲದೇ ಟೀಮ್ ಇಂಡಿಯಾ ಆಟಗಾರರ ಸಮರಾಭ್ಯಾಸ.. ರೋಹಿತ್ ಎಲ್ಲಿದ್ದಾರೆ?
Advertisment
  • ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್​
  • 4ನೇ ಟೆಸ್ಟ್​ಗೆ ಮುನ್ನ ಟೀಮ್​ ಇಂಡಿಯಾಗೆ ಬಿಗ್​ ಶಾಕ್​​..!
  • ಟೀಮ್​ ಇಂಡಿಯಾದಿಂದಲೇ ಕ್ಯಾಪ್ಟನ್​ ರೋಹಿತ್​ ಔಟ್​​

ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್​​ಗೆ ಟೀಮ್​​ ಇಂಡಿಯಾ ದೊಡ್ಡ ಆಘಾತ ಎದುರಾಗುವ ಸಾಧ್ಯತೆ ಇದೆ. ಮೆಲ್ಬೋರ್ನ್ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಪ್ರಾಕ್ಟೀಸ್​ ಮಾಡುವಾಗ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಗಾಯಕ್ಕೆ ಒಳಗಾಗಿದ್ದಾರೆ. ನೆಟ್‌ನಲ್ಲಿ ಬ್ಯಾಟಿಂಗ್ ಮಾಡುವ ವೇಳೆ ಮೊಣಕಾಲಿಗೆ ಗಾಯ ಆಗಿದೆ ಅನ್ನೋ ಸುದ್ದಿ ಹೊರಬಿದ್ದಿದೆ.

ರೋಹಿತ್​ಗೆ ಟ್ರೀಟ್​ಮೆಂಟ್​​

ಇನ್ನು, ಥ್ರೋ ಡೌನ್ ಸ್ಪೆಷಲಿಸ್ಟ್ ದಯಾ ಎಸೆತ ಕ್ಯಾಪ್ಟನ್ ರೋಹಿತ್​ ಶರ್ಮಾ ಎಡಗಾಲಿಗೆ ತಗುಲಿದೆ. ಚೆಂಡು ಬಡಿದ ಕೂಡಲೇ ರೋಹಿತ್ ನೆಟ್ ತೊರೆದಿದ್ದಾರೆ. ಸದ್ಯ ರೋಹಿತ್​​ಗೆ ಏಟು ಬಿದ್ದ ಜಾಗಕ್ಕೆ ವೈದ್ಯರು ಐಸಿಂಗ್​ ಮಾಡಿದ್ದಾರೆ. ಹೀಗಾಗಿ ಇವರು ಮುಂದಿನ ಪಂದ್ಯ ಆಡೋದು ಡೌಟ್​ ಎನ್ನುವ ಮಾತುಗಳು ಕೇಳಿ ಬಂದಿವೆ.

ಕ್ಯಾಪ್ಟನ್​​ ಕಳಪೆ ಆಟ

ಕ್ಯಾಪ್ಟನ್​ ರೋಹಿತ್ ಶರ್ಮಾ 2 ಟೆಸ್ಟ್ ಪಂದ್ಯಗಳಲ್ಲಿ ಕೇವಲ 19 ರನ್ ಗಳಿಸಿದ್ದಾರೆ. ಇವರ ನಾಯಕತ್ವದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ತವರಿನ ಸರಣಿಯನ್ನು 3-0 ಅಂತರದಲ್ಲಿ ಕಳೆದುಕೊಂಡಿತು. ಈಗ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ ರೋಹಿತ್​​ ನಾಯಕತ್ವದಲ್ಲಿ ಅಡಿಲೇಡ್ ಟೆಸ್ಟ್‌ ಸೋತಿದೆ.

ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್‌ನಲ್ಲಿ ರೋಹಿತ್ ಆಡಲಿಲ್ಲ. ಮೊದಲ ಟೆಸ್ಟ್‌ಗೆ ಜಸ್ಪ್ರೀತ್ ಬುಮ್ರಾ ನಾಯಕತ್ವ ವಹಿಸಿದ್ದರು. 2ನೇ ಟೆಸ್ಟ್​ನಲ್ಲಿ ರೋಹಿತ್ ಶರ್ಮಾ ಆಡಿದ್ದರು. ಆದರೆ ಎರಡು ಟೆಸ್ಟ್‌ಗಳಲ್ಲಿ ರೋಹಿತ್ ಪ್ರಭಾವ ಬೀರಲಿಲ್ಲ. ಇಲ್ಲಿಯವರೆಗೆ ಆಡಿರೋ 3 ಇನ್ನಿಂಗ್ಸ್‌ಗಳಲ್ಲಿ 3, 6 ಮತ್ತು 10 ರನ್ ಗಳಿಸಿದ್ದಾರೆ.

ರೋಹಿತ್ ಶರ್ಮಾ ಮಧ್ಯಮ ಕ್ರಮಾಂಕದ ತಮ್ಮ ಬ್ಯಾಟಿಂಗ್ ಬಗ್ಗೆ ಮಾತನಾಡಿದ್ರು. ಯಾರು ಎಲ್ಲಿ ಬ್ಯಾಟ್ ಮಾಡುತ್ತಾರೆ ಎಂಬ ಚಿಂತೆ ಬೇಡ. ತಂಡಕ್ಕೆ ಯಾವುದು ಉತ್ತಮ ಎಂಬುದರ ಮೇಲೆ ಎಲ್ಲವೂ ಡಿಪೆಂಡ್​ ಆಗಿರಲಿದೆ ಎಂದಿದ್ದಾರೆ.

ಇದನ್ನೂ ಓದಿ:ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಸರಣಿ; ಕೊಹ್ಲಿ ಬಗ್ಗೆ ಶಾಕಿಂಗ್​ ಹೇಳಿಕೆ ಕೊಟ್ಟ ಕ್ಯಾಪ್ಟನ್​ ರೋಹಿತ್​​!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment