ಕ್ಯಾಪ್ಟನ್ಸಿ ತೊರೆಯುವಂತೆ ರೋಹಿತ್​ ಶರ್ಮಾ ಮೇಲೆ ಭಾರೀ ಒತ್ತಡ; ಹಿಟ್​ಮ್ಯಾನ್​ ನಿರ್ಧಾರವೇನು?

author-image
Ganesh Nachikethu
Updated On
ಟೀಂ ಇಂಡಿಯಾಗೆ ದೊಡ್ಡ ಆಘಾತ.. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​​ ಸರಣಿಯಿಂದ ರೋಹಿತ್ ಶರ್ಮಾ ಔಟ್..!
Advertisment
  • ರಣಜಿ ಕ್ರಿಕೆಟ್​ನಲ್ಲೂ ರೋಹಿತ್​ ಶರ್ಮಾ ಕಳಪೆ ಆಟ
  • ಭಾರತದ ಕ್ಯಾಪ್ಟನ್ಸಿಯಿಂದ ಕೊಕ್​​ ನೀಡಲ ಒತ್ತಾಯ!
  • ರೋಹಿತ್​ ಶರ್ಮಾಗೆ ಕೊಕ್​ ನೀಡಬೇಕು ಎಂದು ಆಗ್ರಹ

ಇತ್ತೀಚೆಗೆ ಆಸ್ಟ್ರೇಲಿಯಾದ ವಿರುದ್ಧ ನಡೆದ ಬಾರ್ಡರ್ ಗವಾಸ್ಕರ್‌ ಸರಣಿಯಲ್ಲಿ ರನ್‌ ಕಲೆ ಹಾಕುವಲ್ಲಿ ಟೀಮ್​ ಇಂಡಿಯಾದ ಕ್ಯಾಪ್ಟನ್​ ರೋಹಿತ್​ ಶರ್ಮಾ ವಿಫಲರಾಗಿದ್ದರು. ಹೀಗಾಗಿ ಫಾರ್ಮ್​ಗೆ ಬರಲು ದೇಶೀಯ ಕ್ರಿಕೆಟ್​ ಆಡುತ್ತಿದ್ದಾರೆ.

ಬಿಸಿಸಿಐ ಇತ್ತೀಚಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನೀಡುವ ಪ್ರಾಮುಖ್ಯತೆ ದೇಶೀಯ ಟೂರ್ನಿಗಳಿಗೂ ನೀಡಬೇಕು ಎಂದು ಸೂಚಿಸಿತ್ತು. ಇದರಿಂದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್​ ಶರ್ಮಾ ದೇಶೀಯ ಟೂರ್ನಿಯಲ್ಲಿ ಮೈದಾನ ಪ್ರವೇಶಿಸಿದರು. ಮುಂಬೈ ಪರ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಣಕ್ಕಿಳಿದಿದ್ದರು.

ರೋಹಿತ್​ ಫ್ಲಾಫ್​​ ಶೋ

ರಣಜಿ ಟ್ರೋಫಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್‌ ಆಟಗಾರ ರೋಹಿತ್​ ಶರ್ಮಾ ಫ್ಲಾಫ್‌ ಶೋ ಮುಂದುವರೆದಿದೆ. ಲೋಕಲ್‌ ಬೌಲರ್‌ಗಳ ಎದುರು ರನ್‌ ಕಲೆ ಹಾಕುವಲ್ಲಿ ರೋಹಿತ್​ ಎಡವಿದರು. ಫಾರ್ಮ್‌ ಕಂಡುಕೊಳ್ಳಲು ರಣಜಿ ಟ್ರೋಫಿ ಆಡಲು ಬಂದ ಇವರು ಇಲ್ಲೂ ರನ್​ ಬರ ಎದುರಿಸಿದರು. ಸಿಂಗಲ್‌ ಡಿಜಿಟ್‌ನಲ್ಲೇ ಆಟ ಮುಗಿಸಿದರು.

3 ರನ್​ಗೆ ರೋಹಿತ್​ ಔಟ್​

ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಮುಂಬೈ ತಂಡದ ಪರ ಇನಿಂಗ್ಸ್ ಆರಂಭಿಸಿದರು. ಆದರೆ, ಜಮ್ಮು ಕಾಶ್ಮೀರ್ ವಿರುದ್ಧ ಬಿಗ್‌ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ತಾನು ಎದುರಿಸಿದ 19 ಎಸೆತಗಳಲ್ಲಿ 3 ರನ್‌ ಬಾರಿಸಿ ಔಟ್ ಆದರು. ಈ ಮೂಲಕ ರಣಜಿ ಟ್ರೋಫಿಯಲ್ಲೂ ನಿರಾಸೆ ಕಂಡರು.

ಕ್ಯಾಪ್ಟನ್ಸಿಯಿಂದ ಕೆಳಗಿಳಿಯುವಂತೆ ಒತ್ತಾಯ

ಅಂತರಾಷ್ಟ್ರೀಯ ಕ್ರಿಕೆಟ್​ ಮಾತ್ರವಲ್ಲ ರಣಜಿಯಲ್ಲೂ ರೋಹಿತ್​ ವಿಫಲರಾದರು. ಹೀಗಾಗಿ ಬ್ಯಾಟಿಂಗ್​ ವೈಫಲ್ಯ ಅನುಭವಿಸುತ್ತಿರೋ ಕ್ಯಾಪ್ಟನ್​ ರೋಹಿತ್​ ಶರ್ಮಾ ಅವರನ್ನು ಟೀಮ್​ ಇಂಡಿಯಾದ ನಾಯಕತ್ವದಿಂದ ಕೆಳಗಿಳಿಸಿ ಎಂದು ಒತ್ತಾಯ ಮಾಡಲಾಗುತ್ತಿದೆ.

ಇದನ್ನೂ ಓದಿ:ಕೆಕೆಆರ್​ಗೆ ಬಿಗ್​​ ಶಾಕ್​ ಕೊಟ್ಟ 23 ಕೋಟಿ ದುಬಾರಿ ಆಟಗಾರ; ಐಪಿಎಲ್​ನಿಂದ ಸ್ಟಾರ್​ ಪ್ಲೇಯರ್​ ಔಟ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment