ಭಾರತಕ್ಕೆ ದೊಡ್ಡ ಆಘಾತ ಕೊಟ್ಟ ಕ್ಯಾಪ್ಟನ್​ ರೋಹಿತ್​​; ಟೆಸ್ಟ್​ ನಿವೃತ್ತಿ ಬಗ್ಗೆ ಬಿಗ್​ ಅಪ್ಡೇಟ್​ ಕೊಟ್ರು!

author-image
Ganesh Nachikethu
Updated On
ಸ್ಟಾರ್​ ಆಟಗಾರನ ವಿವಾದಾತ್ಮಕ ಔಟ್; ಈ ಬಗ್ಗೆ ಏನಂದ್ರು ಕ್ಯಾಪ್ಟನ್​ ರೋಹಿತ್​ ಶರ್ಮಾ?
Advertisment
  • 4ನೇ ಮಹತ್ವದ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾಗೆ ಸೋಲು!
  • ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋತ ಟೀಮ್​ ಇಂಡಿಯಾ
  • ಕೊನೆಗೂ ಟೆಸ್ಟ್​ ನಿವೃತ್ತಿ ಬಗ್ಗೆ ಮೌನಮುರಿದ ರೋಹಿತ್​ ಏನಂದ್ರು?

ಇತ್ತೀಚೆಗೆ ಮೆಲ್ಬೋರ್ನ್‌ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯದಲ್ಲಿ ಕ್ಯಾಪ್ಟನ್​​ ರೋಹಿತ್ ಶರ್ಮಾ ನಾಯಕತ್ವದ ಟೀಮ್​ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 184 ರನ್‌ಗಳಿಂದ ಸೋಲು ಕಂಡಿದೆ. ಈ ಸೋಲಿಗೆ ಯಾರು ಹೊಣೆ ಎಂಬ ಚರ್ಚೆ ಶುರುವಾಗಿದೆ.

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 474 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಟೀಮ್​ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 369 ರನ್‌ಗಳಿಗೆ ಆಲೌಟ್ ಆಗಿದೆ. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​​ನಲ್ಲಿ 105 ರನ್‌ಗಳ ಮುನ್ನಡೆ ಸಾಧಿಸಿತು. 2ನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 234 ರನ್ ಗಳಿಸಿ 340 ರನ್‌ಗಳ ಗೆಲುವಿನ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಭಾರತ 155 ರನ್‌ ಗಳಿಸಿ 184 ರನ್‌ಗಳಿಂದ ಹೀನಾಯ ಸೋಲು ಕಂಡಿದೆ.

ಭಾರತ ತಂಡ ಮೆಲ್ಬೋರ್ನ್ ಟೆಸ್ಟ್ ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿತ್ತು. ಆದರೆ, ಟೀಮ್​ ಇಂಡಿಯಾ ಪರ ಕೆಲವು ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಆಸ್ಟ್ರೇಲಿಯಾ ವಿರುದ್ಧ 4ನೇ ಟೆಸ್ಟ್ ಪಂದ್ಯ ಸೋಲುವ ಮೂಲಕ ಟೀಮ್​ ಇಂಡಿಯಾ ವಿಶ್ವಟೆಸ್ಟ್ ಚಾಂಪಿಯನ್​ಶಿಪ್ ಫೈನಲ್‌ ರೇಸ್​ನಿಂದ ಹೊರಬೀಳುವ ಸಾಧ್ಯತೆ ಇದೆ. ಟೀಮ್ ಇಂಡಿಯಾ ಸೋಲಿಗೆ ಪ್ರಮುಖ ಕಾರಣ ರೋಹಿತ್​ ಶರ್ಮಾ.

ರೋಹಿತ್ ಶರ್ಮಾ ಕಳಪೆ ಪ್ರದರ್ಶನ

ಭಾರತ ತಂಡದ ಸೋಲಿಗೆ ಪ್ರಮುಖ ಕಾರಣ ಕ್ಯಾಪ್ಟನ್​ ರೋಹಿತ್ ಶರ್ಮಾ. ಇವರು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಹೇಳಿಕೊಳ್ಳುವಷ್ಟು ಪ್ರದರ್ಶನ ನೀಡಲಿಲ್ಲ. ಮೆಲ್ಬೋರ್ನ್‌ ಟೆಸ್ಟ್ ಪಂದ್ಯದ 2 ಇನ್ನಿಂಗ್ಸ್​ನಲ್ಲಿ 3 ಮತ್ತು 9 ರನ್ ಗಳಿಸಿ ಟೀಮ್​ ಇಂಡಿಯಾ ಸೋಲಿಗೆ ಕಾರಣರಾದರು. ರೋಹಿತ್​ ತಾನು ಆಡಿರೋ 3 ಪಂದ್ಯಗಳಲ್ಲಿ ಕೇವಲ 31 ರನ್ ಕಲೆ ಹಾಕಿದ್ದಾರೆ.

ಟೀಮ್​ ಇಂಡಿಯಾ ಸೋತ ಬೆನ್ನಲ್ಲೇ ಕ್ಯಾಪ್ಟನ್​​ ರೋಹಿತ್​ ಶರ್ಮಾ ವಿರುದ್ಧ ಹತ್ತಾರು ಟೀಕೆಗಳು ಕೇಳಿ ಬಂದಿವೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಕ್ಯಾಪ್ಟನ್​ ರೋಹಿತ್​ ಶರ್ಮಾ ನಿವೃತ್ತಿ ಆಗಲಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಸದ್ಯ ದೊಡ್ಡ ಅಪ್ಡೇಟ್​ ಸಿಕ್ಕಿದೆ.

ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ 5 ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಮುಗಿದ ಬೆನ್ನಲ್ಲೇ ಕ್ಯಾಪ್ಟನ್​ ರೋಹಿತ್​ ಶರ್ಮಾ ನಿವೃತ್ತಿ ಘೋಷಿಸಲಿದ್ದಾರಂತೆ. ಬಿಸಿಸಿಐ ಮತ್ತು ಸೆಲೆಕ್ಷನ್​ ಕಮಿಟಿ ಜತೆ ಚರ್ಚಿಸಿದ ನಂತರ ರೋಹಿತ್​ ಈ ನಿರ್ಧಾರಕ್ಕೆ ಬಂದಿದ್ದಾರೆ. ಸಿಡ್ನಿ ಟೆಸ್ಟ್​​ ನಂತರ ರೋಹಿತ್​ ಶರ್ಮಾ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ.

ರೋಹಿತ್​ ಶರ್ಮಾ ಏನಂದ್ರು?

ಇವತ್ತು ನಾನು ಇಲ್ಲೇ ನಿಂತಿದ್ದೇನೆ. ಹಿಂದೆ ಏನಾಯಿತು ಎಂದು ಯೋಚಿಸುವ ಅಗತ್ಯವಿಲ್ಲ. ಕೆಲವು ಫಲಿತಾಂಶಗಳು ನಮ್ಮ ಪರವಾಗಿ ಬರಲ್ಲ. ಇದು ನಾಯಕನಾಗಿ ನನಗೆ ನಿರಾಸೆ ತಂದಿದೆ. ನಾನು ಮಾನಸಿಕವಾಗಿ ನಿಸ್ಸಂದೇಹವಾಗಿ ತೊಂದರೆ ಒಳಗಾಗಿದ್ದೇನೆ. ನನ್ನ ಕನಸು ಈಡೇರದಿದ್ರೆ ಒಂದು ನಿರ್ಧಾರಕ್ಕೆ ಬರುತ್ತೇನೆ ಎಂದರು.

ಇದನ್ನೂ ಓದಿ:ಟೀಮ್​​ ಇಂಡಿಯಾಗೆ ಬಿಗ್​ ಶಾಕ್​​​; ಆಸ್ಟ್ರೇಲಿಯಾ ಟೆಸ್ಟ್​ ಸೀರೀಸ್​​ ಬಳಿಕ ಸ್ಟಾರ್​ ಪ್ಲೇಯರ್​ ನಿವೃತ್ತಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment