/newsfirstlive-kannada/media/post_attachments/wp-content/uploads/2024/12/Rohit-Sharma_R-Ashwin.jpg)
3ನೇ ಟೆಸ್ಟ್ ಮುಗಿದ ಬೆನ್ನಲ್ಲೇ ಟೀಮ್ ಇಂಡಿಯಾದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ರು. ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಅಶ್ವಿನ್ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟಿದ್ದಾರೆ.
ಕ್ಯಾಪ್ಟನ್ ರೋಹಿತ್ ಶರ್ಮಾ ಏನಂದ್ರು?
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ನಂತರ ನಿವೃತ್ತಿ ಘೋಷಿಸುವುದಾಗಿ ಆರ್. ಅಶ್ವಿನ್ ಮ್ಯಾನೇಜ್ಮೆಂಟ್ಗೆ ತಿಳಿಸಿದ್ದರು. ಆದರೆ, ನಾವು ನೀವು ಪಿಂಕ್ ಬಾಲ್ ಟೆಸ್ಟ್ ಆಡಲೇಬೇಕು ಎಂದು ಅಶ್ವಿನ್ ಅವರನ್ನು ಒಪ್ಪಿಸಿದ್ದೆವು ಎಂದರು.
ಅಶ್ವಿನ್ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದಾರೆ. ಇವರು ಭಾರತ ಕ್ರಿಕೆಟ್ ತಂಡಕ್ಕೆ ನೀಡಿದ ಕೊಡುಗೆ ಅಪಾರ. ಅಶ್ವಿನ್ ಬೌಲಿಂಗ್ ಮ್ಯಾಜಿಕ್‌ನಿಂದಲೇ ಎಷ್ಟೋ ಟೆಸ್ಟ್ ಸರಣಿಗಳನ್ನು ಗೆದ್ದಿದ್ದೇವೆ. ಹೀಗಾಗಿ ಅಶ್ವಿನ್ ಮ್ಯಾಚ್ ವಿನ್ನರ್ ಎಂದರು ರೋಹಿತ್.
ನಿವೃತ್ತಿ ಬಗ್ಗೆ ಅಶ್ವಿನ್ ಏನಂದ್ರು?
ಕ್ರಿಕೆಟಿಗನಾಗಿ ನನ್ನಲ್ಲಿ ಇನ್ನೂ ಉತ್ಸಾಹ ಇದೆ. ನಾನು ಕ್ಲಬ್ ಮಟ್ಟದ ಕ್ರಿಕೆಟ್‌ಗೆ ಒತ್ತು ನೀಡಲು ಬಯಸಿದ್ದೇನೆ. ಇದು ನನ್ನ ಕೊನೆಯ ದಿನವಾಗಿದೆ. ನನಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು ಖುಷಿ ತಂದಿದೆ. ನನಗೆ ಬೆಂಬಲವಾಗಿ ನಿಂತ ವಿರಾಟ್ ಮತ್ತು ರೋಹಿತ್ಗೆ ಧನ್ಯವಾದ ತಿಳಿಸುತ್ತೇನೆ ಎಂದರು ಅಶ್ವಿನ್.
ಇದನ್ನೂ ಓದಿ:ಧನ್ಯವಾದಗಳು ಗೆಳೆಯ.. ಅಶ್ವಿನ್ ಜೊತೆಗಿನ 14 ವರ್ಷಗಳ ಜರ್ನಿ ನೆನೆದು ಕೊಹ್ಲಿ ಭಾವುಕ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ