/newsfirstlive-kannada/media/post_attachments/wp-content/uploads/2024/11/Rohit_Kohli-Test.webp)
ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್​ ಪಂದ್ಯಕ್ಕೆ ಮೇಲ್ಬೋರ್ನ್ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ ಸಜ್ಜಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದರು. ಇದಾದ ನಂತರ ನಡೆದ 2 ಟೆಸ್ಟ್​ನಲ್ಲೂ ಕೊಹ್ಲಿ ಕಳಪೆ ಪ್ರದರ್ಶನ ನೀಡಿದ್ರು.
ಸ್ಟಾರ್​ ಬ್ಯಾಟರ್​​ ವಿರಾಟ್​ ಕೊಹ್ಲಿ ಫಾರ್ಮ್​​​ ಸಮಸ್ಯೆಯೇ ಭಾರತ ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಬಗ್ಗೆ ಬಾಕ್ಸಿಂಗ್ ಡೇ ಟೆಸ್ಟ್​ಗೆ ಮುನ್ನ ಟೀಮ್ ಇಂಡಿಯಾ ಕ್ಯಾಪ್ಟನ್​​ ರೋಹಿತ್​ ಶರ್ಮಾ ಮಾತಾಡಿದ್ದಾರೆ. ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರೋಹಿತ್​ ಶರ್ಮಾ ಏನಂದ್ರು?
ಈ ಸಂಬಂಧ ಮಾತಾಡಿದ ರೋಹಿತ್​ ಶರ್ಮಾ, ಕೊಹ್ಲಿ ಫಾರ್ಮ್ ಬಗ್ಗೆ ನಮಗೆ ಚಿಂತೆ ಇಲ್ಲ. ಉಳಿದ 2 ಟೆಸ್ಟ್​ ಪಂದ್ಯಗಳಲ್ಲಿ ಕೊಹ್ಲಿ ಕಮ್​ಬ್ಯಾಕ್​ ಆಗಲಿದೆ. ಆಧುನಿಕ ಯುಗದ ಶ್ರೇಷ್ಠ ಆಟಗಾರರು ತಮ್ಮ ಹಾದಿ ಕಂಡುಕೊಳ್ಳುತ್ತಾರೆ ಎಂದರು.
ಇದೇ ವೇಳೆ ರೋಹಿತ್ ಮಧ್ಯಮ ಕ್ರಮಾಂಕದ ತಮ್ಮ ಬ್ಯಾಟಿಂಗ್ ಬಗ್ಗೆ ಮಾತನಾಡಿದ್ರು. ಯಾರು ಎಲ್ಲಿ ಬ್ಯಾಟ್ ಮಾಡುತ್ತಾರೆ ಎಂಬ ಚಿಂತೆ ಬೇಡ. ತಂಡಕ್ಕೆ ಯಾವುದು ಉತ್ತಮ ಎಂಬುದರ ಮೇಲೆ ಎಲ್ಲವೂ ಡಿಪೆಂಡ್​ ಆಗಿರಲಿದೆ ಎಂದರು.
ಕೊಹ್ಲಿ ಕಳಪೆ ಆಟ
ಪರ್ತ್ ಟೆಸ್ಟ್ ಬಳಿಕ ಕೊಹ್ಲಿ ಮೂರು ಇನ್ನಿಂಗ್ಸ್‌ಗಳಲ್ಲಿ 7, 11 ಮತ್ತು 3 ರನ್ ಗಳಿಸಿದ್ದಾರೆ. ವಿರಾಟ್ ಕಮ್​ಬ್ಯಾಕ್​ ಮಾಡಲು ಹೆಣಗಾಡುತ್ತಿದ್ದಾರೆ. ಮೆಲ್ಬೋರ್ನ್‌ನಲ್ಲಿ ತಮ್ಮ ಬ್ಯಾಟ್‌ನಿಂದ ರನ್ ಗಳಿಸಿ ಭಾರತ ತಂಡಕ್ಕೆ ಗೆಲುವು ತಂದು ಕೊಡುವ ಸಾಧ್ಯತೆ ಇದೆ. ಮೆಲ್ಬೋರ್ನ್ ಅಂಗಳದಲ್ಲಿ ಅತೀ ಹೆಚ್ಚು ರನ್​ ಗಳಿಸಿದ ಭಾರತೀಯ ವಿರಾಟ್ ಕೊಹ್ಲಿ ಆಗಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ