/newsfirstlive-kannada/media/post_attachments/wp-content/uploads/2025/02/Rohit_sharma-1.jpg)
ಟಿ20 ಗೆದ್ದ ಬೆನ್ನಲ್ಲೇ ಟೀಮ್ ಇಂಡಿಯಾ ಏಕದಿನ ಸರಣಿಯನ್ನೂ ಕ್ಲೀನ್ ಸ್ವೀಪ್ ಮಾಡಿದೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ನಡೆದ ಮಹತ್ವದ ಸರಣಿ ಗೆದ್ದು ಟೀಮ್ ಇಂಡಿಯಾ ತನ್ನ ಪ್ರಾಬಲ್ಯ ತೋರಿಸಿದೆ.
ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲೂ ಅಧಿಪತ್ಯ ಸಾಧಿಸಿರೋ ಟೀಮ್ ಇಂಡಿಯಾ ಮೂರು ಪಂದ್ಯಗಳಲ್ಲೂ ಗೆದ್ದು ಬೀಗಿದೆ. ಇಂದು ನರೇಂದ್ರ ಮೋದಿ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 356 ರನ್ ಗಳಿಸಿ ದೊಡ್ಡ ಟಾರ್ಗೆಟ್ ನೀಡಿತ್ತು. ಭಾರತದ 357 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 34.2 ಓವರ್ಗಳಲ್ಲಿ 214 ರನ್ಗಳಿಗೆ ಆಲೌಟ್ ಆಗಿದೆ. ಇಂಗ್ಲೆಂಡ್ ಆಲೌಟ್ ಆಗಿರೋ ಕಾರಣ 142 ರನ್ಗಳಿಂದ ಗೆದ್ದು ಬೀಗಿದೆ.
ಕ್ಯಾಪ್ಟನ್ ರೋಹಿತ್ ಶರ್ಮಾ ಏನಂದ್ರು?
ಇಂಗ್ಲೆಂಡ್ ವಿರುದ್ಧ ಸೀರೀಸ್ ಗೆದ್ದು ಖುಷಿ ತಂದಿದೆ. ನಾವು ಈ ಸೀರೀಸ್ನಲ್ಲಿ ಯಾವುದೇ ತಪ್ಪು ಮಾಡಿಲ್ಲ ಎಂದು ಭಾವಿಸುತ್ತೇವೆ. ಅದರಲ್ಲೂ ಟೀಮ್ ಇಂಡಿಯಾದ ಆಟಗಾರರು ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡು ವಿಭಾಗಗಳಲ್ಲೂ ಆಲ್ರೌಂಡರ್ ಪ್ರದರ್ಶನ ನೀಡಿದ್ದಾರೆ ಎಂದರು ರೋಹಿತ್.
ಇನ್ನು, ಮುಂದೆ ಚಾಂಪಿಯನ್ಸ್ ಟ್ರೋಫಿ ಇದೆ. ವಿಶ್ವಕಪ್ನಲ್ಲೂ ನಾವು ಗೆದ್ದ ರೀತಿ ಎಲ್ಲರಿಗೂ ಗೊತ್ತಿದೆ. ತಂಡದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಇದೆ. ಅಗ್ರೆಸ್ಸಿವ್ ಆಗಿ ಬ್ಯಾಟಿಂಗ್ ಮಾಡಲು ಅವಕಾಶ ಇದೆ. ಇನ್ನೂ ಕೆಲವು ವಿಚಾರಗಳಲ್ಲಿ ಸುಧಾರಿಸಬೇಕಿದೆ. ಈ ಬಗ್ಗೆ ಮಾತಾಡೋ ಸಮಯ ಅಲ್ಲ. ನಾವು ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಎಲ್ಲಾ ರೀತಿಯಲ್ಲೂ ಸನ್ನದ್ದರಾಗಿದ್ದೇವೆ ಎಂದರು ರೋಹಿತ್. ಇಷ್ಟೇ ಅಲ್ಲ ಭಾರತದ ಗೆಲುವು ಎಲ್ಲರೂ ಕಾರಣ ಎಂದು ಕ್ರೆಡಿಟ್ ಕೊಟ್ಟರು.
ಇದನ್ನೂ ಓದಿ:ಕೊನೆಯ ಪಂದ್ಯದಲ್ಲೂ ಇಂಗ್ಲೆಂಡ್ಗೆ ಹೀನಾಯ ಸೋಲು; ಟೀಮ್ ಇಂಡಿಯಾಗೆ 142 ರನ್ಗಳ ಭರ್ಜರಿ ಜಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ