/newsfirstlive-kannada/media/post_attachments/wp-content/uploads/2025/02/Rohit-out.jpg)
ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಚಾಂಪಿಯನ್ಸ್ ಟ್ರೋಫಿ 2025ರ ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಪಾಕಿಸ್ತಾನ ಸಾಧಾರಣ ರನ್ಗಳ ಗುರಿ ನೀಡಿದೆ.
ಪಾಕ್ ನೀಡಿದ ಸಾಧಾರಣ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಉಪನಾಯಕ ಶುಭ್ಮನ್ ಗಿಲ್ ಓಪನಿಂಗ್ ಮಾಡಿದರು. ಬಿರುಸಿನಿಂದಲೇ ಬ್ಯಾಟ್ ಬೀಸಿದ ರೋಹಿತ್ ಶರ್ಮಾ ಪಾಕ್ ಬೌಲರ್ಗಳಿಗೆ ನಡುಕ ಹುಟ್ಟಿಸಿದರು.
ಬಂದಷ್ಟೇ ವೇಗವಾಗಿ ಹೊರ ನಡೆದ ರೋಹಿತ್
ಆಕ್ರಮಣಕಾರಿ ಬ್ಯಾಟ್ ಮಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ ಬಂದಷ್ಟೇ ವೇಗವಾಗಿ ಮೈದಾನದಿಂದ ಹೊರ ನಡೆದರು. ತಾನು ಎದುರಿಸಿದ 15 ಬಾಲ್ನಲ್ಲಿ ಬ್ಯಾಕ್ ಟು ಬ್ಯಾಕ್ 3 ಫೋರ್, 1 ಭರ್ಜರಿ ಸಿಕ್ಸರ್ ಚಚ್ಚಿದ್ರು. ಅಟ್ಯಾಕ್ ಮಾಡಲು ಹೋದ ರೋಹಿತ್ ಕ್ಲೀನ್ ಬೌಲ್ಡ್ ಆದರು. ಕೇವಲ 20 ರನ್ ಗಳಿಸಿ ರೋಹಿತ್ ಮೈದಾನದಿಂದ ಹೊರ ಹೋದರು.
ರೋಹಿತ್ ಸದಾ ಅಟ್ಯಾಕಿಂಗ್ ಮೋಡ್ನಲ್ಲೇ ಇರುತ್ತಾರೆ. ಇವರು ಕ್ರೀಸ್ನಲ್ಲಿ ನಿಂತು ಬ್ಯಾಟ್ ಬೀಸಿದರೆ ಬೇಗ ಮ್ಯಾಚ್ ಮುಗಿದು ಹೋಗುತ್ತದೆ. ಒಂದು ವೇಳೆ ಇವರ ವಿಕೆಟ್ ಬೇಗ ಬಿದ್ದರೆ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಲಿದೆ. ಇಂದು ಕೂಡ ರೋಹಿತ್ ಅದೇ ತಪ್ಪು ಮಾಡಿದ್ದು, ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ಇದು ಇತರೆ ಆಟಗಾರರ ಮೇಲೆ ಒತ್ತಡ ಸೃಷ್ಟಿಸುತ್ತದೆ. ಹೀಗಾಗಿ ಇಷ್ಟು ಬೇಗ ಔಟ್ ಆಗೋ ಅಗತ್ಯ ಇರಲಿಲ್ಲ ಎಂದು ರೋಹಿತ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ:ಟೀಮ್ ಇಂಡಿಯಾ ಬೌಲರ್ಸ್ ಮುಂದೆ ಮಂಡಿಯೂರಿದ ಪಾಕ್; ಕೇವಲ 241 ರನ್ಗೆ ಆಲೌಟ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ