/newsfirstlive-kannada/media/post_attachments/wp-content/uploads/2025/02/ROHIT_SHARMA_1-3.jpg)
ಕಟಕ್ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ 2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಸಿಡಿಲಬ್ಬರದ ಶತಕ ಸಿಡಿಸಿದ್ದಾರೆ.
305 ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾ ಪರ ಓಪನಿಂಗ್ ಮಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಆಕ್ರಮಣಕಾರಿ ಆಗಿ ಬ್ಯಾಟ್ ಬೀಸಿದ ಇವರು ಸ್ಫೋಟಕ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ಅಮೋಘ ಶತಕ
ಇನ್ನು, ಕ್ರೀಸ್ನಲ್ಲೇ ನೆಲಕಚ್ಚಿ ನಿಂತು ಆಡಿದ ರೋಹಿತ್ ಇಂಗ್ಲೆಂಡ್ ಬೌಲರ್ಗಳನ್ನು ಕಾಡಿದ್ರು. ಕೇವಲ 30 ಬಾಲ್ನಲ್ಲಿ ಅರ್ಧಶತಕ ಪೂರೈಸಿದ ಇವರು ಬಳಿಕ ತಾಳ್ಮೆಯಿಂದ ಬ್ಯಾಟ್ ಮಾಡಿದ್ರು. ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡ್ರೂ ಕುಗ್ಗದ ರೋಹಿತ್ ಶತಕ ದಾಖಲಿಸಿದ್ರು.
ಕೇವಲ 78 ಬಾಲ್ನಲ್ಲಿ 102 ರನ್ ಸಿಡಿಸಿದ ರೋಹಿತ್ ಬೌಂಡರಿಗಳ ಸುರಿಮಳೆಗೈದರು. ಬ್ಯಾಕ್ ಟು ಬ್ಯಾಕ್ 7 ಭರ್ಜರಿ ಸಿಕ್ಸರ್ ಸಿಡಿಸಿದ್ರು. ಹಾಗೆಯೇ ಸುಮಾರು 9 ಫೋರ್ ಬಾರಿಸಿದ್ರು. ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 130ಕ್ಕೂ ಹೆಚ್ಚಿತ್ತು. ಈ ಮೂಲಕ ತನ್ನನ್ನು ಟೀಕಿಸಿದವರಿಗೆ ಖಡಕ್ ಉತ್ತರ ಕೊಟ್ಟರು. ಈ ಹಿಂದೆ ಯುವರಾಜ್ ಸಿಂಗ್ ಕೂಡ 79 ಬಾಲ್ನಲ್ಲಿ ಶತಕ ಸಿಡಿಸಿದ್ರು. ಈ ದಾಖಲೆಯನ್ನು ರೋಹಿತ್ ಮುರಿದಿದ್ದಾರೆ.
ಇದನ್ನೂ ಓದಿ:6,4,4,4,4,4,4,4,4,4; ಟೀಮ್ ಇಂಡಿಯಾ ಉಪನಾಯಕ ಶುಭ್ಮನ್ ಗಿಲ್ ಸ್ಫೋಟಕ ಬ್ಯಾಟಿಂಗ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ