/newsfirstlive-kannada/media/post_attachments/wp-content/uploads/2025/03/Rohit-Sharma-fifty.jpg)
ಬಹುನಿರೀಕ್ಷಿತ ಐಸಿಸಿ 2025ರ ಚಾಂಪಿಯನ್ಸ್​ ಟ್ರೋಫಿ ಫೈನಲ್​ನಲ್ಲಿ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ನ್ಯೂಜಿಲೆಂಡ್​ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಭಾರತ ಚಾಂಪಿಯನ್​ ಆಗಿ ಹೊರಹೊಮ್ಮಿದೆ.
ನ್ಯೂಜಿಲೆಂಡ್​ 252 ರನ್​ಗಳ ಗುರಿ ನೀಡಿತ್ತು. ಈ ಬೃಹತ್​​ ಗುರಿಯನ್ನು ಬೆನ್ನತ್ತಿದ ಟೀಮ್​ ಇಂಡಿಯಾ ಪರ ಕ್ಯಾಪ್ಟನ್​ ರೋಹಿತ್​ ಶರ್ಮಾ ಅಬ್ಬರಿಸಿದರು. ಶುಭ್ಮನ್​​ ಗಿಲ್​​ ಕೇವಲ 31 ರನ್​ಗೆ ವಿಕೆಟ್​ ಒಪ್ಪಿಸಿದರು. ಗಿಲ್​ ಔಟಾದ ಬಳಿಕವೂ ತಾಳ್ಮೆಯಿಂದ ಬ್ಯಾಟ್​ ಬೀಸಿದರು.
ಮೊದಲ 40 ಎಸೆತಗಳಲ್ಲೇ ಅರ್ಧಶತಕ ಸಿಡಿಸಿದ ರೋಹಿತ್​​ ಸಂದರ್ಭಕ್ಕೆ ತಕ್ಕಂತೆ ಬ್ಯಾಟ್​ ಬೀಸಿದರು. ಕೊಹ್ಲಿ ಔಟಾದ ಮೇಲೆ ರೋಹಿತ್​ ಮೇಲೆ ಭಾರೀ ಒತ್ತಡ ಬಿತ್ತು. ಇಷ್ಟಾದ್ರೂ ಎದೆಗುಂದದೆ ಮುನ್ನುಗಿದರು.
ನಡುಕ ಹುಟ್ಟಿಸಿದ ರೋಹಿತ್​​
ಎದುರಾಳಿಗಳನ್ನು ಬೆಂಬಿಡದೆ ಕಾಡಿದ ಕ್ಯಾಪ್ಟನ್​ ರೋಹಿತ್​ ಶರ್ಮಾ ಸಿಡಿಸಿದರು. ಶರ್ಮಾ ತಾನು ಎದುರಿಸಿದ 83 ಬಾಲ್​ನಲ್ಲಿ ಬರೋಬ್ಬರಿ 76 ರನ್​ ಚಚ್ಚಿದ್ರು. ಈ ಪೈಕಿ 3 ಭರ್ಜರಿ ಸಿಕ್ಸರ್​​, 6 ಫೋರ್​ ಸೇರಿದ್ದವು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​​ 90ಕ್ಕೂ ಹೆಚ್ಚೇ ಇತ್ತು.
ಭಾರತ ತಂಡದ ಗೆಲುವಿನಲ್ಲಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಪ್ರಮುಖ ಪಾತ್ರವಹಿಸಿದರು. ಇವರಿಗೆ ಸಾಥ್​ ನೀಡಿದವರು ಶ್ರೇಯಸ್​​ ಅಯ್ಯರ್​​, ಕೆ.ಎಲ್​ ರಾಹುಲ್​ ಮತ್ತು ಅಕ್ಷರ್​ ಪಟೇಲ್​ ಅವರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us