newsfirstkannada.com

Team India: ವಿಂಡೀಸ್​​ ಪ್ರವಾಸದಿಂದ ಯಾರೆಲ್ಲಾ ಹೊರಕ್ಕೆ? ಈ ಇಬ್ಬರಿಗೆ ಚಾನ್ಸ್​ ಪಕ್ಕಾ!

Share :

16-06-2023

    ವೆಸ್ಟ್​ ಇಂಡೀಸ್​ ಜೊತೆ ಸೆಣೆಸಾಡಲು ಇವರಿಗಿಲ್ವಾ ಚಾನ್ಸ್​

    ಅಡಕತ್ತರಿಯಲ್ಲಿದೆ ಈ ಸ್ಫೋಟಕ ಬ್ಯಾಟ್ಸ್​ಮನ್​ ಭವಿಷ್ಯ

    ರೋಹಿತ್​ ತಂಡ ಸೇರಲು ಯಾರೆಲ್ಲಾ ಅದೃಷ್ಟ ಮಾಡಿದ್ದಾರೆ?

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಮುಖಭಂಗದ ಬಳಿಕ ಟೀಮ್​ ಇಂಡಿಯಾದಲ್ಲಿ ಭಾರೀ ಬದಲಾವಣೆಯಾಗುತ್ತೆ ಎಂಬ ನಿರೀಕ್ಷೆ ಕ್ರಿಕೆಟ್​ ವಲಯದಲ್ಲಿದೆ. ಆದರೆ ಮುಂಬರುವ ವೆಸ್ಟ್​ ಇಂಡೀಸ್​ ಪ್ರವಾಸದ ತಂಡದಲ್ಲಿ ಮೇಜರ್​ ಸರ್ಜರಿ ಆಗೋ ಸಾಧ್ಯತೆ ತುಂಬಾ ಕಡಿಮೆಯಿದೆ. ಕಾದು ನೋಡೋ ತಂತ್ರಗಾರಿಕೆಗೆ ಸೆಲೆಕ್ಷನ್​ ಕಮಿಟಿಯಿ ಮುಂದಾಗಿದೆ.

ರೋಹಿತ್​ ಶರ್ಮಾನೇ ನಾಯಕ, ಅನುಭವಿಗಳೂ ಸೇಫ್​.!

ಟೆಸ್ಟ್​ ಚಾಂಪಿಯನ್​ಶಿಪ್​ ಸೋಲಿನ ಬಳಿಕ ರೋಹಿತ್​ ಶರ್ಮಾ ನಾಯಕತ್ವದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆದಿದ್ವು. ರೋಹಿತ್​ಗೆ ಕೊಕ್​ ಕೊಡಬೇಕು ಅನ್ನೋ ಮಾತುಗಳೂ ಕೇಳಿ ಬಂದಿದ್ವು. ಆದರೆ, ಈ ವಿಚಾರದಲ್ಲಿ ಸೆಲೆಕ್ಷನ್​ ಕಮಿಟಿ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದೆ. ಸದ್ಯಕ್ಕೆ ನಾಯಕತ್ವ ಬದಲಾವಣೆಗೆ ಕೈ ಹಾಕದಿರಲು ನಿರ್ಧರಿಸಿದೆ. ಜೊತೆಗೆ ಅನುಭವಿಗಳನ್ನೂ ಕಡೆಗಣಿಸದೆ ಚಾನ್ಸ್​ ನೀಡಲು ನಿರ್ಧರಿಸಿದೆ.

ಅಡಕತ್ತರಿಯಲ್ಲಿ ಚೇತೇಶ್ವರ್​​ ಪೂಜಾರ ಭವಿಷ್ಯ.!

ಉಳಿದೆಲ್ಲಾ ಅನುಭವಿಗಳ ಸ್ಥಾನ ಸೇಫ್​ ಆಗಿದೆ. ಆದ್ರೆ, ಚೇತೇಶ್ವರ್​ ಪೂಜಾರ ಭವಿಷ್ಯ ಮಾತ್ರ ಅಡಕತ್ತರಿಗೆ ಸಿಲುಕಿದೆ. ಸಿಕ್ಕ ಅವಕಾಶಗಳಲ್ಲಿ ಫೇಲ್ಯೂರ್​ ಆಗಿರೋ ಪೂಜಾರಗೆ ಚಾನ್ಸ್​ ನೀಡಬೇಕಾ? ಬೇಡ್ವಾ? ಎಂಬ ಪ್ರಶ್ನೆ ಇನ್ನೂ ಉತ್ತರ ಸಿಕ್ಕಿಲ್ಲ. ಒಂದು ವೇಳೆ ತಂಡದಲ್ಲಿ ಚಾನ್ಸ್​ ಗಿಟ್ಟಿಸಿಕೊಂಡರೂ, ಟೀಮ್​ ಮ್ಯಾನೇಜ್​ಮೆಂಟ್​ ಪ್ಲೇಯಿಂಗ್​ ಇಲೆವೆನ್​ನಲ್ಲಿ ಅವಕಾಶ ನೀಡೋದು ಅನುಮಾನವಾಗಿದೆ. ಹೀಗಾಗಿ ಸೆಲೆಕ್ಷನ್​ ಕಮಿಟಿ ಪೂಜಾರರನ್ನ ತಂಡದಿಂದಲೇ ಕೈ ಬಿಡೋ ನಿರ್ಧಾರಕ್ಕೆ ಬರೋ ಸಾಧ್ಯತೆ ದಟ್ಟವಾಗಿದೆ.

ಟೆಸ್ಟ್​ನಿಂದ ಶಮಿಗೆ ವಿಶ್ರಾಂತಿ, ಏಕದಿನದಲ್ಲಿ ಚಾನ್ಸ್​.!

ಟೀಮ್​ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್​ ಶಮಿ, ವಿಶ್ರಾಂತಿ ನೀಡಲು ಮ್ಯಾನೇಜ್​ಮೆಂಟ್​ ನಿರ್ಧರಿಸಿದೆ. ಬಾರ್ಡರ್​ – ಗವಾಸ್ಕರ್​ ಸರಣಿ, ಐಪಿಎಲ್​ ಟೂರ್ನಿ, ಇದೀಗ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​.. ಸತತ ಪಂದ್ಯಗಳನ್ನ ಆಡಿ ಬಳಲಿರುವ ಶಮಿಗೆ ವಿಶ್ರಾಂತಿ ಪಕ್ಕಾ. ಆದ್ರೆ, ಮುಂಬರೋ ಏಕದಿನ ವಿಶ್ವಕಪ್​ ಟೂರ್ನಿಯ ದೃಷ್ಟಿಯಿಂದ ಏಕದಿನ ಸರಣಿಗಳಲ್ಲಿ ಅವಕಾಶ ನೀಡೋ ಸಾಧ್ಯತೆಯಿದೆ. ಇನ್ನೋರ್ವ ವೇಗಿ ಮೊಹಮ್ಮದ್​ ಸಿರಾಜ್​ರನ್ನ ರೊಟೇಶನ್​ ಮಾಡುವ ಲೆಕ್ಕಾಚಾರವಿದೆ.

ಟೆಸ್ಟ್​ ತಂಡದಲ್ಲಿ ಭರತ್​ಗೆ ಸ್ಥಾನ ಕನ್​ಫರ್ಮ್​.!

ವಿಕೆಟ್​ ಕೀಪರ್​​ ಕೆ.ಎಸ್​ ಭರತ್​​ ಸಾಮರ್ಥ್ಯದ ಬಗ್ಗೆ ಎಲ್ಲಡೆ ಚರ್ಚೆಯಾಗ್ತಿವೆ. ಆಡಿದ 5 ಪಂದ್ಯಗಳಲ್ಲಿ ಕಳಪೆ ಪ್ರದರ್ಶನವನ್ನ ಭರತ್​ ನೀಡಿದ್ದಾರೆ. ವಿಕೆಟ್​ ಕೀಪಿಂಗ್​ನಲ್ಲೂ ಹಿನ್ನಡೆ ಅನುಭವಿಸ್ತಿದ್ದಾರೆ. ಹಾಗಿದ್ರೂ ಯುವ ಆಟಗಾರನನ್ನ ಬ್ಯಾಕ್​ ಮಾಡಲು ಕಮಿಟಿ ನಿರ್ಧರಿಸಿದೆ. ವಿಂಡೀಸ್​ ಪ್ರವಾಸಲ್ಲಿ ಯಂಗ್​ಗನ್​ಗೆ ಸ್ಥಾನ ಸಿಗೋದು ಕನ್​ಫರ್ಮ್​ ಆಗಿದೆ.

ಏಕದಿನ – ಟಿ20ಗೆ ಸಂಜು ಸ್ಯಾಮ್ಸನ್​ ಕಮ್​ಬ್ಯಾಕ್​..!

ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​​ ಸಂಜು ಸ್ಯಾಮ್ಸನ್​ಗೆ ಮತ್ತೆ ಮಣೆಹಾಕಲು ನಿರ್ಧರಿಸಲಾಗಿದೆ. ಏಕದಿನ ಹಾಗೂ ಟಿ20 ತಂಡದಲ್ಲಿ ಸಂಜುಗೆ ಸ್ಥಾನ ಸಿಗೋ ಸಾಧ್ಯತೆಯಿದೆ. ವಿಕೆಟ್​ ಕೀಪರ್​ ಕೋಟಾದಲ್ಲಿ ಸಂಜು ಸ್ಯಾಮ್ಸನ್​ ಜೊತೆಗೆ ಇಶಾನ್​ ಕಿಶನ್​ ಕೂಡ ಆಯ್ಕೆಯಾಗೋ ಸಾಧ್ಯತೆ ದಟ್ಟವಾಗಿದೆ.

ಉಮ್ರಾನ್​, ಆರ್ಷ್​ದೀಪ್​ಗೆ ಫ್ಲೈಟ್​ ಟಿಕೆಟ್​ ಕನ್​ಫರ್ಮ್​.!

ಯುವ ವೇಗಿಗಳಾದ ಉಮ್ರಾನ್​ ಮಲಿಕ್​, ಆರ್ಷ್​ ದೀಪ್​​ ಸಿಂಗ್​ ಕೂಡ ಕೆರಬಿಯನ್​ ನಾಡಿಗೆ ಹಾರೋದು ಖಚಿತವಾಗಿದೆ. ಟಿ20 ತಂಡದಲ್ಲಿ ಇವರಿಬ್ಬರಿಗೆ ಸ್ಥಾನ ಸಿಗೋ ಸಾಧ್ಯತೆಯಿದೆ. ಇದೆಲ್ಲದರ ಜೊತೆಗೆ ಇನ್ನೂ ಹಲವು ನಿರ್ಧಾರಗಳನ್ನ ಸೆಲೆಕ್ಷನ್​ ಕಮಿಟಿ ಈಗಾಗಲೇ ಮಾಡಿದ್ದು, ಮುಂದಿನ ವಾರದಲ್ಲಿ ಕಂಪ್ಲೀಟ್​​ ಟೀಮ್​ ಅನೌನ್ಸ್​ ಆಗೋದು ಕನ್​​ಫರ್ಮ್​​.!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Team India: ವಿಂಡೀಸ್​​ ಪ್ರವಾಸದಿಂದ ಯಾರೆಲ್ಲಾ ಹೊರಕ್ಕೆ? ಈ ಇಬ್ಬರಿಗೆ ಚಾನ್ಸ್​ ಪಕ್ಕಾ!

https://newsfirstlive.com/wp-content/uploads/2023/06/Rohit-Sharma.jpg

Load More