/newsfirstlive-kannada/media/post_attachments/wp-content/uploads/2024/10/Team-India-2.jpg)
ಸದ್ಯ ಟೀಮ್​​ ಇಂಡಿಯಾ ಮತ್ತು ಆಸ್ಟೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಸರಣಿಯ ಮೊದಲ ಪಂದ್ಯ ಪರ್ತ್​​​ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಆಸೀಸ್ ಭಯಾನಕ ವೇಗದ ಬೌಲಿಂಗಿಗೆ ತತ್ತರಿಸಿದ ಭಾರತ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 150 ರನ್​ಗೆ ಆಲೌಟ್​ ಆಯ್ತು. ಈ ಟಾರ್ಗೆಟ್​ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಕ್ಯಾಪ್ಟನ್​​ ಬುಮ್ರಾ, ಸಿರಾಜ್​, ಹರ್ಷಿತ್​​ ರಾಣಾ ಬೌಲಿಂಗ್​​ ಮಾರಕ ದಾಳಿಗೆ ತತ್ತರಿಸಿತು. ಕೇವಲ 104 ರನ್​​ಗೆ ಆಲೌಟ್​ ಆಯ್ತು. ಈಗ ಟೀಮ್​ ಇಂಡಿಯಾ 2ನೇ ಇನ್ನಿಂಗ್ಸ್​ನಲ್ಲಿ ದಿನದ ಅಂತ್ಯಕ್ಕೆ ಯಾವುದೇ ವಿಕೆಟ್​ ನಷ್ಟವಿಲ್ಲದೆ 172 ರನ್​ ಕಲೆ ಹಾಕಿದೆ. ಭಾರತ ಒಟ್ಟು 218 ರನ್​ಗಳ ಲೀಡ್​ನಲ್ಲಿದೆ. ಇದರ ಮಧ್ಯೆ ಶಾಕಿಂಗ್​ ನ್ಯೂಸ್​ ಒಂದಿದೆ.
ಕಳೆದ ಎರಡು ಆಸ್ಟ್ರೇಲಿಯಾ ಪ್ರವಾಸಗಳಲ್ಲಿ ಭಾರತ ಟ್ರೋಪಿ ಗೆದ್ದಿತ್ತು. 2016 ರಿಂದಲೂ ಟೀಮ್​ ಇಂಡಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆಲ್ಲುತ್ತಲೇ ಬಂದಿದೆ. ಟೀಮ್​ ಇಂಡಿಯಾ ಈಗಿರೋ ಪರಿಸ್ಥಿತಿ ನೋಡಿದ್ರೆ ಗೆಲ್ಲೋದು ಕಷ್ಟವಾಗಿದೆ. ಎಷ್ಟೇ ಕಷ್ಟ ಆದ್ರೂ ಪರ್ವಾಗಿಲ್ಲ ಆಸೀಸ್ ಸರಣಿ ಗೆಲ್ಲಲೇಬೇಕು ಎಂದು ಟೀಮ್​ ಇಂಡಿಯಾ ಸಜ್ಜಾಗಿದೆ. ಟೀಮ್​ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್​​ ಪಂದ್ಯಗಳ ಸರಣಿ ಗೆದ್ರೆ ಮಾತ್ರ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಈ ಹೊತ್ತಲ್ಲೇ ಕ್ಯಾಪ್ಟನ್​ ರೋಹಿತ್​ ಶರ್ಮಾ ಶಾಕ್​ ಕೊಟ್ಟಿದ್ದಾರೆ.
2ನೇ ಪಂದ್ಯದಿಂದಲೂ ರೋಹಿತ್​ ಔಟ್​
ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯಕ್ಕೆ ಟೀಮ್​ ಇಂಡಿಯಾದ ಪ್ಲೇಯಿಂಗ್ ಇಲೆವೆನ್​ನಲ್ಲಿ ಭಾರೀ ಬದಲಾವಣೆ ಆಗಿದೆ. ಇದಕ್ಕೆ ಕಾರಣ ಕ್ಯಾಪ್ಟನ್​ ರೋಹಿತ್​ ಶರ್ಮಾ ಮೊದಲ ಪಂದ್ಯದಿಂದ ಹೊರಗುಳಿದಿದ್ದು. ರೋಹಿತ್​​ ಮತ್ತು ರಿತಿಕಾ ಜೋಡಿ 2ನೇ ಮಗುವಿಗೆ ಜನ್ಮ ನೀಡಿದ ಕಾರಣ ಇವರು ಮೊದಲ ಟೆಸ್ಟ್​ಗೆ ಲಭ್ಯರಾಗಿಲ್ಲ. ಈಗ ರೋಹಿತ್​ ಶರ್ಮಾ ಅವರ ಫ್ಲೈಟ್​ ಡಿಲೇ ಆಗಿದ್ದು, 2ನೇ ಟೆಸ್ಟ್​​ ಆಡುವುದು ಅನುಮಾನ ಆಗಿದೆ ಎಂದು ತಿಳಿದು ಬಂದಿದೆ.
ಬುಮ್ರಾಗೆ ಕ್ಯಾಪ್ಟನ್ಸಿ ಜವಾಬ್ದಾರಿ
ರೋಹಿತ್​​ ಅಲಭ್ಯತೆಯಲ್ಲಿ ಟೀಮ್​ ಇಂಡಿಯಾವನ್ನು ಬುಮ್ರಾ ​​ಮುನ್ನಡೆಸುತ್ತಿದ್ದಾರೆ. ಸದ್ಯ ಜಸ್​ಪ್ರಿತ್​ ಬುಮ್ರಾ ಭಾರತ ಟೆಸ್ಟ್​ ತಂಡದ ಉಪನಾಯಕ. ಹಾಗಾಗಿ ಇವರೇ ತಂಡವನ್ನು ಲೀಡ್​ ಮಾಡಲಿದ್ದಾರೆ ಎಂದು ಟೀಮ್​ ಇಂಡಿಯಾ ಮ್ಯಾನೇಜ್ಮೆಂಟ್​ ಘೋಷಿಸಿತ್ತು. 2ನೇ ಟೆಸ್ಟ್​ನಲ್ಲೂ ಇವರೇ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us